Asianet Suvarna News Asianet Suvarna News

ಕರ್ನಾಟಕದ ಸಮಸ್ತ ಹಿಂದೂಗಳು ಒಗ್ಗಟ್ಟಾಗಬೇಕು: ಯತ್ನಾಳ್ ಕರೆ

ವಿಜಯಪುರದಲ್ಲಿ ಹಿಂದೂಗಳ ಒಗ್ಗಟ್ಟಾಗಿದ್ದಾರೆ. ಅದೇ ತರ ಸಮಸ್ತ ಕರ್ನಾಟಕದ ಹಿಂದೂಗಳು ಒಗ್ಗಟ್ಟಾಗುವಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆ ನೀಡಿದರು. ದೇಶ ವಿರೋಧಿ ಹೇಳಿಕೆ ನೀಡಿರುವ ಒವೈಸಿ ವಿರುದ್ಧ ವಾಗ್ದಾಳಿ ನಡೆಸಿದರು.

MLA Basanagowda patil yatnal calls for unity among Hindus at vijayapur rav
Author
First Published Nov 25, 2023, 12:33 PM IST

ವಿಜಯಪುರ (ನ.25): ವಿಜಯಪುರದಲ್ಲಿ ಹಿಂದೂಗಳ ಒಗ್ಗಟ್ಟಾಗಿದ್ದಾರೆ. ಅದೇ ತರ ಸಮಸ್ತ ಕರ್ನಾಟಕದ ಹಿಂದೂಗಳು ಒಗ್ಗಟ್ಟಾಗುವಂತೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆ ನೀಡಿದರು.

ಇಂದು ವಿಜಯಪುರ ಸಮಾರಂಭವೊಂದರಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪಾಕಿಸ್ತಾನ ಭಾರತದ ಮೇಲೆ ಯುದ್ಧ ಮಾಡಿದ್ರೆ ಪಾಕಿಸ್ತಾನಕ್ಕೆ ಬೆಂಬಲ ನೀಡುವಂತೆ ಓವೈಸಿ ಭಾಷಣ ಮಾಡ್ತಾರೆ. 15 ನಿಮಿಷ ಪೊಲೀಸರು ಸುಮ್ನಿದ್ರೆ ಹಿಂದೂಗಳನ್ನು ಖತಮ್ ಮಾಡುತ್ತೇವೆ ಎಂದು ಭಾಷಣ ಮಾಡಿದ್ದಾರೆ. ಮುಂದೆ ಸಂದರ್ಭ ಬಂದರೆ ಅದರಂತೆ ಮಾಡ್ತಾರೆ. ಅದಕ್ಕಾಗಿ ಸಮಸ್ತ ಹಿಂದೂಗಳು ಒಗ್ಗಟ್ಟಾಗಿರಬೇಕು. ವಿಜಯಪುರದಲ್ಲಿ ಹಿಂದೂಗಳು ಒಗ್ಗಟ್ಟಾಗಿದ್ದಾರೆ. ಅದರಂತೆ ಕರ್ನಾಟಕದಲ್ಲೂ ಒಗ್ಗಟ್ಟಾಗುವಂತೆ ಕರೆ ನೀಡಿದರು.

ವಿಜಯೇಂದ್ರ ನನ್ನನ್ನು ಭೇಟಿಯಾಗಿ ನಾಟಕ ಮಾಡುವ ಅಗತ್ಯ ಇಲ್ಲ: ಶಾಸಕ ಯತ್ನಾಳ್‌

ಇನ್ನು ಕಾಂಗ್ರೆಸ್ ಗ್ಯಾರಂಟಿ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಯತ್ನಾಳ್, ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಸ್ಕೀಂಗಳು ಬೋಗಸ್ ಸ್ಕೀಂಗಳು ಎಂದು ಲೇವಡಿ ಮಾಡಿದರು ಮುಂದುವರಿದು, ಪ್ರತಿ ಕುಟುಂಬಕ್ಕೂ 200 ಯುನಿಟ್ ವಿದ್ಯುತ್ ಕೊಡುತ್ತೇವೆ ಎಂದು ಹೇಳಿದ್ದ್ರು. ಆದರೆ ಇದರಿಂದ ಜನತೆಗೆ ಅನುಕೂಲ ಆಗುವ ಬದಲು ಸಮಸ್ಯೆಯೇ ಆಗಿದೆ. ಚುನಾವಣೆಗೆ ಮೊದಲು ಪ್ರತಿಕುಟುಂಬಕ್ಕೆ ಹತ್ತು ಕೆಜಿ ಅಕ್ಕಿ ನೀಡುತ್ತೇವೆ ಎಂದಿದ್ದರು ಆದರೆ ಇದುವರೆಗೆ ಅಕ್ಕಿ ನೀಡಿಲ್ಲ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ನೇರವಾಗಿ 5ಕೆಜಿ ನೀಡುತ್ತಿದ್ದಾರೆ. ಅದನ್ನೇ ಇವರು ಅನ್ನಭಾಗ್ಯ ಅಂತಾ ತಮ್ಮ ಹೆಸರು ಹೇಳಿಕೊಂಡು ತಿರುಗುತ್ತಿದ್ದಾರೆ. ಈ ಸರ್ಕಾರದಿಂದ ಬಡವರಿಗೆ ಯಾವುದೇ ರೀತಿಯ ಪ್ರಯೋಜನ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಜಾತಿಗಣತಿ ಮೂಲ ವರದಿ ನಾಪತ್ತೆ: ತನಿಖೆಗೆ ಯತ್ನಾಳ್‌ ಆಗ್ರಹ

Follow Us:
Download App:
  • android
  • ios