Asianet Suvarna News Asianet Suvarna News

ಬಿಡದಿಯ ಮಿಟ್ಸು​ಬಿಷಿ ಘಟಕ ಸ್ಥಗಿತ: ಕಾರ್ಮಿಕರು ಬೀದಿಗೆ

ಬೆಮೆಲ್‌ ಹಾಗೂ ಮೆಟ್ರೋಗೆ ಅಗ​ತ್ಯ​ವಾದ ಎಲೆ​ಕ್ಟ್ರಾ​ನಿಕ್‌ ಬಿಡಿ ಭಾಗ​ಗ​ಳನ್ನು ಸರ​ಬ​ರಾಜು ಮಾಡು​ತ್ತಿದ್ದ ಮಿಟ್ಸುಬಿಷಿ ಎಲೆಕ್ಟ್ರಿಕ್‌ ಇಂಡಿಯಾ ಪ್ರೈವೇಚ್‌ ಲಿಮಿಟೆಡ್‌ ಕಂಪನಿ ತನ್ನ ಟ್ರಾಕ್ಷನ್‌ ಮೋಟಾರ್‌ ಮತ್ತು ವಿವಿ​ವಿ​ಎಫ್‌ ಇನ್ವ​ರ್ಟರ್‌ ಉತ್ಪಾ​ದನಾ ಘಟಕ ಸ್ಥಗಿ​ತ​ಗೊ​ಳಿ​ಸಿದ್ದು, ಇದ​ರಿಂದಾಗಿ ಕಾರ್ಮಿ​ಕರು ಬೀದಿಗೆ ಬಿದ್ದಿ​ದ್ದಾರೆ. 

mitsubishi electric india pvt ltd sudden lockout in bidadi town ramanagara gvd
Author
First Published Nov 9, 2022, 6:37 AM IST

ರಾಮ​ನ​ಗರ (ನ.09): ಬೆಮೆಲ್‌ ಹಾಗೂ ಮೆಟ್ರೋಗೆ ಅಗ​ತ್ಯ​ವಾದ ಎಲೆ​ಕ್ಟ್ರಾ​ನಿಕ್‌ ಬಿಡಿ ಭಾಗ​ಗ​ಳನ್ನು ಸರ​ಬ​ರಾಜು ಮಾಡು​ತ್ತಿದ್ದ ಮಿಟ್ಸುಬಿಷಿ ಎಲೆಕ್ಟ್ರಿಕ್‌ ಇಂಡಿಯಾ ಪ್ರೈವೇಚ್‌ ಲಿಮಿಟೆಡ್‌ ಕಂಪನಿ ತನ್ನ ಟ್ರಾಕ್ಷನ್‌ ಮೋಟಾರ್‌ ಮತ್ತು ವಿವಿ​ವಿ​ಎಫ್‌ ಇನ್ವ​ರ್ಟರ್‌ ಉತ್ಪಾ​ದನಾ ಘಟಕ ಸ್ಥಗಿ​ತ​ಗೊ​ಳಿ​ಸಿದ್ದು, ಇದ​ರಿಂದಾಗಿ ಕಾರ್ಮಿ​ಕರು ಬೀದಿಗೆ ಬಿದ್ದಿ​ದ್ದಾರೆ. ಬಿಡದಿ ಕೈಗಾ​ರಿ​ಕಾ ಪ್ರದೇ​ಶ​ದ​ಲ್ಲಿ​ರುವ ಮಿಟ್ಸುಬಿಷಿ ಎಲೆಕ್ಟ್ರಿಕ್‌ ಇಂಡಿಯಾ ಪ್ರೈವೇಚ್‌ ಲಿಮಿಟೆಡ್‌ ಕಂಪನಿ ತನ್ನ ನೌಕ​ರ​ರಿಗೆ ಸಣ್ಣ ಸುಳಿ​ವನ್ನು ನೀಡದೆ ಎರಡು ಘಟ​ಕ​ಗ​ಳಿಗೆ ಬಾಗಿಲು ಮುಚ್ಚಿದೆ. 

ಈ ಘಟ​ಕ​ದಲ್ಲಿ ಕೆಲಸ ಮಾಡು​ತ್ತಿದ್ದ ಸುಮಾರು 56 ಮಂದಿ ನೌಕ​ರರು ಆತಂಕ​ದ​ಲ್ಲಿ​ದ್ದಾ​ರೆ.  ಈ ಘಟ​ಕ​ದಲ್ಲಿ ಬೆಳ​ಗಾವಿ, ವಿಜ​ಯ​ಪುರ, ಮಂಡ್ಯ, ಹಾಸನ ಸೇರಿ​ದಂತೆ ಹಲವು ಜಿಲ್ಲೆ​ಗಳ ಯುವ​ಕರು ಕೆಲಸ ಮಾಡು​ತ್ತಿ​ದ್ದರು. ಬಿಡದಿ ಪಟ್ಟ​ಣ​ದಲ್ಲಿ ಬಾಡಿಗೆ ಮನೆ ಮಾಡಿ​ಕೊಂಡಿದ್ದರು. ಪ್ರತಿ​ಯೊಬ್ಬ ಕಾರ್ಮಿ​ಕ​ನಿಗೆ 25ರಿಂದ 30 ಸಾವಿರ ರುಪಾಯಿ ವೇತನ ನೀಡ​ಲಾ​ಗು​ತ್ತಿ​ತ್ತು. ಇದೀಗ ಕೆಲಸ ಕಳೆ​ದು​ಕೊಂಡಿ​ರುವ ನೌಕ​ರರಲ್ಲಿ ಆತಂಕ ಮನೆ ಮಾಡಿ​ದೆ. ಕಳೆದ ಶುಕ್ರವಾರ ಸಂಜೆ ನೌಕರರು ಕೆಲಸ ಮುಗಿಸಿ ಎಂದಿ​ನಂತೆ ಮನೆ​ಗ​ಳಿಗೆ ತೆರಳಿದ್ದಾರೆ. 

Ramanagara: ಹೊಡೆದಾಟದಲ್ಲಿ ಮಾಜಿ ಶಾಸಕ ಬಾಲಕೃಷ್ಣ ಸ್ಪೆಷಲಿಸ್ವ್‌: ಸಚಿವ ಅಶ್ವತ್ಥ್‌

ಶನಿ​ವಾರ 56 ಮಂದಿ ನೌಕ​ರರ ವೈಯ​ಕ್ತಿಕ ಖಾತೆ​ಗ​ಳಿಗೆ ಕಂಪನಿ 4 ಲಕ್ಷ ರುಪಾ​ಯಿ​ ಹಣ ಹಾಕಿದೆ. ಇದನ್ನು ಗಮ​ನಿ​ಸಿದ ನೌಕ​ರರು ​ವಿ​ಚಾ​ರಿ​ಸಲು ಪ್ರಯ​ತ್ನಿ​ಸಿ​ದಾ​ಗ ಕಂಪ​ನಿಯ ಎಚ್‌ಆರ್‌ ಸಂಪ​ರ್ಕಕ್ಕೆ ಸಿಗ​ಲಿಲ್ಲ. ಶನಿವಾರ ಹಾಗೂ ಭಾನುವಾರ ರಜೆ ಮುಗಿ​ಸಿ​ಕೊಂಡು ಕಾರ್ಮಿ​ಕರು ಸೋಮವಾರ ಕೆಲಸಕ್ಕೆ ಬಂದಾಗ ಭದ್ರತಾ ಸಿಬ್ಬಂದಿಗಳು ಕಂಪ​ನಿ​ಯೊ​ಳಗೆ ಬಿಡದೆ ತಡೆ​ದಿ​ದ್ದಾರೆ. ಆಗ ಕಂಪ​ನಿಯ ಎಚ್‌ ಆರ್‌ ರವರು ಕಾರ​ಣಾಂತ​ರ​ಗ​ಳಿಂದ ಟ್ರಾಕ್ಷನ್‌ ಮೋಟಾರ್‌ ಮತ್ತು ವಿವಿ​ವಿ​ಎಫ್‌ ಇನ್ವ​ರ್ಟರ್‌ ಉತ್ಪಾ​ದನಾ ಘಟಕ ಮುಚ್ಚ​ಲಾ​ಗು​ತ್ತಿದೆ. 

ಕಂಪ​ನಿ​ಯಿಂದ ಬರ​ಬೇ​ಕಿದ್ದ ಹಣ​ವನ್ನು ನಿಮ್ಮ ಖಾತೆ​ಗ​ಳಿಗೆ ಜಮೆ ಮಾಡ​ಲಾ​ಗಿದೆ ಎಂದಷ್ಟೇ ಹೇಳಿ ವಾಪ​ಸ್ಸಾ​ಗಿ​ದ್ದಾ​ರೆ. ಈ ಮೊದಲು ಯೂನಿಟ್‌ನಲ್ಲಿ ಉತ್ಪಾ​ದನೆ ಚೆನ್ನಾಗಿ ನಡೆ​ಯು​ತ್ತಿತ್ತು.ಕಳೆದ ಆರು ತಿಂಗ​ಳಿಂದ ಉತ್ಪಾ​ದನೆ ಪ್ರಮಾಣ ಕಡಿ​ಮೆ​ಯಾ​ಗಿತ್ತು. ಅದ​ರಲ್ಲೂ ಮೂರು ತಿಂಗ​ಳಿಂದ ಉತ್ಪಾ​ದನೆ ಪ್ರಮಾಣ ತೀರಾ ಕಡಿಮೆಯಾಗಿ​ದ್ದ​ರಿಂದ ವಾರ​ದಲ್ಲಿ 5 ದಿನ ಮಾತ್ರ ಕೆಲಸ ನಡೆ​ಯು​ತ್ತಿತ್ತು ಎನ್ನ​ಲಾ​ಗಿದೆ. ಈಗ ಕೆಲಸ ಕಳೆ​ದು​ಕೊಂಡು ದಿಕ್ಕು ತೋಚ​ದಂತಾ​ಗಿರುವ ನೌಕ​ರರು ಪ್ರತಿ​ಭ​ಟನೆ ಹಾದಿ ಹಿಡಿ​ಯಲು ನಿರ್ಧ​ರಿ​ಸಿದ್ದು, ಕಾರ್ಮಿಕ ಇಲಾಖೆ ಸೇರಿ​ದಂತೆ ಹಿರಿಯ ಅಧಿ​ಕಾ​ರಿ​ಗ​ಳನ್ನು ಭೇಟಿ​ಯಾಗಿ ನ್ಯಾಯ ಕೊಡಿ​ಸು​ವಂತೆ ಮನವಿ ಮಾಡು​ತ್ತಿ​ದ್ದಾ​ರೆ.

ಉತ್ಪ​ನ್ನ​ಗಳ ಬೇಡಿ​ಕೆ ಕುಸಿತವೇ ಯೂನಿಟ್‌ಗಳ ಸ್ಥಗಿ​ತಕ್ಕೆ ಕಾರ​ಣ: ಟ್ರಾಕ್ಷನ್‌ ಮೋಟಾರ್‌ ಮತ್ತು ವಿವಿ​ವಿ​ಎಫ್‌ ಇನ್ವ​ರ್ಟರ್‌ಗಳ ಬೇಡಿಕೆ ತೀವ್ರ​ವಾಗಿ ಕುಸಿತವಾ​ಗಿ​ರುವ ಹಿನ್ನೆ​ಲೆ​ಯಲ್ಲಿ ಮಿಟ್ಸುಬಿಷಿ ಎಲೆಕ್ಟ್ರಿಕ್‌ ಇಂಡಿಯಾ ಪ್ರೈವೇಚ್‌ ಲಿಮಿಟೆಡ್‌ ಕಂಪನಿ ತನ್ನ ಉತ್ಪಾ​ದನಾ ಘಟ​ಕ​ವನ್ನು ಸ್ಥಗಿ​ತ​ಗೊ​ಳಿ​ಸು​ತ್ತಿದೆ ಎಂದು ಕಂಪ​ನಿಯ ವ್ಯವಸ್ಥಾಪಕ ನಿರ್ದೇಶಕ ಕಝುಹಿಕೊ ತಮುರಾ ತಿಳಿ​ಸಿ​ದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡು​ಗಡೆ ಮಾಡಿ​ರುವ ಅವ​ರು, ಕಂಪನಿ ಬಿಡದಿಯ ಉತ್ಪಾದನಾ ಘಟಕದಲ್ಲಿ ಟ್ರಾಕ್ಷನ್‌ ಮೋಟಾರ್‌ಗಳು ಮತ್ತು ವಿವಿವಿಎಫ್‌ ಇನ್ವರ್ಟರ್‌ ಗಳ ಉತ್ಪಾದನೆ ಸ್ಥಗಿತಗೊಳಿ​ಸಿದೆ. 

ಇದರ ಕಾರ​ಣ​ದಿಂದಾಗಿ ಟ್ರಾನ್ಸ್‌ ಪೋರ್ಚ್‌ ಸಿಸ್ಟಂ ವಿಭಾ​ಗದ ಭಾಗ​ವಾ​ಗಿದ್ದ ಘಟ​ಕ​ದ​ಲ್ಲಿ​ರುವ 56 ಕಾರ್ಮಿ​ಕ​ರನ್ನು ಉದ್ಯೋ​ಗ​ದಿಂದ ಬಿಡು​ಗಡೆ ನೀಡ​ಲಾ​ಗಿದೆ ಎಂದಿ​ದ್ದಾ​ರೆ. ಈ ಕ್ರಮ ನವೆಂಬರ್‌ 5ರಿಂದ ಅನ್ವ​ಯ​ವಾ​ಗು​ತ್ತದೆ. ಈಗಾ​ಗಲೇ ಬಾಧಿ​ತ ಉದ್ಯೋ​ಗಿ​ಗ​ಳಿಗೆ ಸಮಾನ ಹಾಗೂ ಕಾನೂನು ಬದ್ಧ​ವಾಗಿ ಪರಿ​ಹಾರ ನೀಡ​ಲಾ​ಗಿದೆ. ಕಂಪ​ನಿಯ ಕಾರ್ಯ​ನಿ​ರ್ವ​ಹ​ಣೆಯ ಅಗ​ತ್ಯ​ಗ​ಳಿಗೆ ಕೆಲ ಸಿಬ್ಬಂದಿ​ಯನ್ನು ಉಳಿ​ಸಿ​ಕೊಂಡಿದೆ. ಉತ್ಪಾ​ದನಾ ಘಟ​ಕ​ವನ್ನು ಮುಚ್ಚುವ ಯಾವುದೇ ತಕ್ಷ​ಣದ ಆಲೋ​ಚ​ನೆ​ಗ​ಳಿಲ್ಲ ಎಂದು ಹೇಳಿ​ದ್ದಾ​ರೆ.

ಕಂಪ​ನಿಯ ನಿರ್ಧಾರದಿಂದ ವಿವಿವಿಎಫ್‌ ಇನ್ವರ್ಟರ್‌ ಮತ್ತು ಟ್ರಾಕ್ಷನ್‌ ಮೋಟಾರ್‌ಗಳಿಗೆ ಸಂಬಂಧಿಸಿದ ಉದ್ಯಮ ವಿಭಾಗಕ್ಕೆ ಮಾತ್ರ ಪರಿಣಾಮ ಉಂಟಾಗಿದೆ. ಕಂಪನಿ ಹಾಗೂ ಸಮೂಹ ಭಾರತದಲ್ಲಿ ಹೂಡಿಕೆ ಹಾಗೂ ಪ್ರಗತಿಯನ್ನು ಮುಂದುವರಿಸಲಿದೆ. ಈ ಹಿನ್ನಡೆಯ ನಡುವೆಯೂ ಸಮೂಹವು ತನ್ನ ಇತರೆ ಉದ್ಯಮಗಳಾದ ಫ್ಯಾಕ್ಟರಿ ಆಟೊಮೇಷನ್‌, ಏರ್‌ ಕಂಡೀಷನಿಂಗ್‌/ಚಿಲ್ಲರ್‌ ಸೆಮಿಕಂಡಕ್ಟರ್‌, ಎಲಿವೇಟರ್‌ ಮತ್ತಿತರೆ ಉದ್ಯಮಗಳ ಮೂಲಕ ಕರ್ನಾಟಕದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲು ಬದ್ಧವಾಗಿದೆ ಎಂದು ಕಝುಹಿಕೊ ತಮುರಾ ತಿಳಿ​ಸಿ​ದ್ದಾರೆ.

ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಿ.ಪಿ.ಯೋಗೇಶ್ವರ್‌

ನಾವು ಕಂಪ​ನಿ​ಯನ್ನೇ ನಂಬಿ​ಕೊಂಡು ಜೀವನ ನಡೆ​ಸು​ತ್ತಿ​ದ್ದೇವು. ಏಕಾ​ಏಕಿ ಕಂಪನಿ ಎರಡು ಯೂನಿಟ್‌ ಗಳನ್ನು ಸ್ಥಗಿ​ತ​ಗೊ​ಳಿ​ಸಿ​ದರೆ ನೌಕ​ರರ ಗತಿ ಏನಾ​ಗ​ಬೇಕು. ಯಾವ ಕಾರ​ಣ​ದಿಂದಾಗಿ ಯೂನಿಟ್‌ ಗಳನ್ನು ಬಂದ್‌ ಮಾಡ​ಲಾ​ಗಿದೆ ಎಂಬು​ದಕ್ಕೆ ನಿಖ​ರ​ವಾದ ಕಾರಣ ನೀಡ​ಬೇಕು.
- ಹರೀಶ್‌, ಅಧ್ಯ​ಕ್ಷರು, ಕಾರ್ಮಿ​ಕರ ಸಂಘ

Follow Us:
Download App:
  • android
  • ios