Asianet Suvarna News Asianet Suvarna News

ಹಳಿಯಲ್ಲಿ ಮರ, ಕಬ್ಬಿಣದ ಪಟ್ಟಿ: ಮೈಸೂರು ಬಳಿ ತಪ್ಪಿದ ದುರಂತ

ನ.12ರಂದು ಈ ಘಟನೆ ನಡೆದಿದ್ದು, ಈ ಸಂಬಂಧ ಸೋಮಯ್ ಮರಾಂಡಿ, ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂಬುವರನ್ನು ಬಂಧಿಸಲಾಗಿದೆ. ಈ ಮೂವರು ಉದ್ದೇಶಪೂರ್ವಕವಾಗಿ ಹಳಿಗಳ ಮೇಲೆ ಕಬ್ಬಿಣದ ಸ್ಲೀಪರ್ (ಪಟ್ಟಿ) ಮತ್ತು ಮರದ ದಿಮ್ಮಿಗಳನ್ನು ದುರುದ್ದೇಶದಿಂದ ಇರಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

Missed the Sabotage plot to derail the train in Mysuru grg
Author
First Published Nov 16, 2023, 4:18 AM IST

ಮೈಸೂರು(ನ.16):  ನಂಜನಗೂಡು-ಕಡಕೊಳ ನಡುವೆ ರೈಲು ಹಳಿಗೆ ಅಡ್ಡಲಾಗಿ ಮರದ ದಿಮ್ಮಿ, ಕಬ್ಬಿಣದ ಪಟ್ಟಿಗಳನ್ನು ಇರಿಸಿ ರೈಲು ಹಳಿ ತಪ್ಪುವಂತೆ ರೂಪಿಸಿದ್ದ ವಿಧ್ವಂಸಕ ಸಂಚೊಂದು ಲೋಕೋ ಪೈಲಟ್‌ ಸಮಯ ಪ್ರಜ್ಞೆಯಿಂದ ತಪ್ಪಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಒಡಿಶಾ ಮೂಲದ ಮೂವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ.

ನ.12ರಂದು ಈ ಘಟನೆ ನಡೆದಿದ್ದು, ಈ ಸಂಬಂಧ ಸೋಮಯ್ ಮರಾಂಡಿ, ಭಜನು ಮುರ್ಮು ಮತ್ತು ದಸಮತ್ ಮರಾಂಡಿ ಎಂಬುವರನ್ನು ಬಂಧಿಸಲಾಗಿದೆ. ಈ ಮೂವರು ಉದ್ದೇಶಪೂರ್ವಕವಾಗಿ ಹಳಿಗಳ ಮೇಲೆ ಕಬ್ಬಿಣದ ಸ್ಲೀಪರ್ (ಪಟ್ಟಿ) ಮತ್ತು ಮರದ ದಿಮ್ಮಿಗಳನ್ನು ದುರುದ್ದೇಶದಿಂದ ಇರಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ನಂಜನಗೂಡು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಯುವಕ ಆತ್ಮಹತ್ಯೆ

ಚಾಮರಾಜನಗರದಿಂದ ಮೈಸೂರಿಗೆ ಎಕ್ಸ್‌ಪ್ರೆಸ್‌ ರೈಲು(ಸಂಖ್ಯೆ-06275) ಬರುತ್ತಿದ್ದಾಗ ಹಳಿಗಳಿಗೆ ಅಡ್ಡಲಾಗಿ ಮರದ ದಿಮ್ಮಿಗಳನ್ನಿಟ್ಟಿರುವುದನ್ನು ದೂರದಿಂದಲೇ ಗಮನಿಸಿದ ಲೋಕೋ ಪೈಲಟ್‌ ತಕ್ಷಣ ರೈಲು ನಿಲ್ಲಿಸಿದ್ದಾರೆ. ನಂತರ ತಕ್ಷಣ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ರವಾನಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ರೈಲ್ವೆ ಸಂರಕ್ಷಣಾ ದಳದ ಸಹಾಯಕ ರಕ್ಷಣಾ ಆಯುಕ್ತ ಎಂ.ಎನ್.ಎ. ಖಾನ್, ಪೋಸ್ಟ್ ಕಮಾಂಡರ್ ಕೆ.ವಿ.ವೆಂಕಟೇಶ್‌ ಮತ್ತು ಅವರ ತಂಡ, ಆರ್‌ಪಿಎಫ್‌ನ ಶ್ವಾನ ದಳ ಘಟನಾ ಸ್ಥಳಕ್ಕೆ ಕ್ಷಿಪ್ರವಾಗಿ ತೆರಳಿ ಸ್ಪಂದಿಸಿದೆ. ಈ ವೇಳೆ ಒಡಿಶಾದ ಮಯೂರ್ ಗಂಜ್‌ನ ಸೋಮಯ್ ಮರಾಂಡಿ ಎಂಬಾತ ಸ್ಥಳದಲ್ಲಿ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ತನ್ನ ಸಹಚರರೊಂದಿಗೆ ಈ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ಮೈಸೂರಿನ ಸರ್ಕಾರಿ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಎಕ್ಸ್‌ಪ್ರೆಸ್‌ ರೈಲು ಸಂಚಾರ ಕೆಲ ನಿಮಿಷಗಳ ಕಾಲ ವ್ಯತ್ಯಯಗೊಂಡಿದೆ.

ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಅವರು ರೈಲಿನ ಚಾಲಕನ ಸಮಯೋಚಿತ ಕ್ರಮ ಮತ್ತು ಭದ್ರತಾ ಪಡೆಗಳ ತ್ವರಿತ ಪ್ರತಿಕ್ರಿಯೆ ಶ್ಲಾಘಿಸಿ, ಪ್ರಯಾಣಿಕರ ಯೋಗಕ್ಷೇಮ ವಿಚಾರಿಸಿ, ಕೃತಜ್ಞತೆ ಸಲ್ಲಿಸಿದರು.

Follow Us:
Download App:
  • android
  • ios