ಬೆಂಗಳೂರು :  HAL ವಿಮಾನ ನಿಲ್ದಾಣದಲ್ಲಿ  ಭಾರತೀಯ ವಾಯುಪಡೆಗೆ ಸೇರಿದ ಮಿರಾಜ್ 2000 ವಿಮಾನ ಪತಗೊಂಡಿದ್ದು, ಒಬ್ಬ ಪೈಲಟ್ ಕೊನೆಯುಸಿರೆಳೆದಿದ್ದು, ಮತ್ತೊಬ್ಬ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. 

ತರಬೇತಿ ಲಘು ಯುದ್ಧ ವಿಮಾನ ಬೆಂಕಿ ಕಾಣಿಸಿಕೊಂಡು ಪತನವಾಗಿದ್ದು,  ಟ್ರೈನರ್ ಫೈಟರ್ ವಿಮಾನದಲ್ಲಿದ್ದ ಪೈಲಟ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಮತ್ತೊಬ್ಬ ಪೈಲಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿದ್ಧಾರ್ಥ್ ಕೊನೆಯುಸಿರೆಳೆದ ಪೈಲಟ್. ಸ್ಥಳಕ್ಕೆ HAL ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸ್ಥಳದಲ್ಲಿ ಆವರಿಸಿದ ಹೆಚ್ಚಿನ ಮಂಜು ಈ ಅವಘಢಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಗೆ ಆದೇಶಿಸಲಾಗಿದೆ.