ಶ್ರೀಮಂತರು ಸಾಮೂಹಿಕ ಮದುವೆ ಮಾಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ಹೇಳಿದರು.

ಹೊಸಪೇಟೆ (ಜ.13): ಶ್ರೀಮಂತರು ಸಾಮೂಹಿಕ ಮದುವೆ ಮಾಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ಹೇಳಿದರು.

ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಬಂಡಿಹಳ್ಳಿಯಲ್ಲಿ ಭಾನುವಾರ ನಡೆದ ಸಾಮೂಹಿಕ ಮದುವೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶ್ರೀಮಂತರು ಬಹಳಷ್ಟು ಜನರಿದ್ದಾರೆ. ಆದರೆ ಮಾಜಿ ಶಾಸಕ ಸಿರಾಜ್‌ ಶೇಕ್‌ ಅವರಂತೆ ಮಗನ ಮದುವೆಯಲ್ಲಿ ಸಾಮೂಹಿಕ ವಿವಾಹ ಮಾಡಿಸುವ ಗುಣ ಹೊಂದಬೇಕು. ಸಾಮೂಹಿಕ ಮದುವೆ ಮಾಡಿಸಿದರೆ ಬಡವರಿಗೆ ಅನುಕೂಲ ಆಗಲಿದೆ ಎಂದರು.

ಸಂಸದ ಈ. ತುಕಾರಾಂ ಮಾತನಾಡಿ, ಸಮಾಜದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತ ಪಾಲನೆ ಮಾಡಬೇಕು. ದಕ್ಷಿಣ ಭಾರತದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಮುಖ್ಯಮಂತ್ರಿ ಆಗಿದ್ದಾರೆ ಎಂದರು.

ಜೆಡಿಎಸ್‌ನ 11 ಶಾಸಕರು ಶೀಘ್ರ ಕಾಂಗ್ರೆಸ್ ಸೇರ್ಪಡೆ ಕೈ ಶಾಸಕ ಸ್ಫೋಟಕ ಹೇಳಿಕೆ, ದೇವೇಗೌಡ ತಿರುಗೇಟು!

ಮಾಜಿ ಶಾಸಕ ಸಿರಾಜ್‌ ಶೇಕ್‌ ಮಾತನಾಡಿ, ಸಾಮೂಹಿಕ ಮದುವೆಯಿಂದ ದುಂದುವೆಚ್ಚಕ್ಕೆ ಕಡಿವಾಣ ಹಾಕಬಹುದು. ಮಗನ ಆರತಕ್ಷತೆಯಲ್ಲಿ ಸಾಮೂಹಿಕ ಮದುವೆ ಮಾಡಿಸುವ ಇರಾದೆಯೊಂದಿಗೆ ಮಠಾಧೀಶರ ಬಳಿ ಚರ್ಚಿಸಿದೆ. ಅವರು ಅಸ್ತು ಅಂದ ಬಳಿಕ ಆಯೋಜನೆ ಮಾಡಿದೆ ಎಂದರು.

ಕೊಟ್ಟೂರು ಸಂಸ್ಥಾನಮಠದ ಕೊಟ್ಟೂರು ಬಸವಲಿಂಗ ಸ್ವಾಮೀಜಿ, ನಂದಿಪುರದ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಒಪ್ಪತ್ತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಿಟಿ ರವಿ-ಹೆಬ್ಬಾಳ್ಕರ್‌ ಅವಾಚ್ಯ ಶಬ್ದ ಪ್ರಕರಣ; ಸಿಐಡಿ ತನಿಖೆಗೆ ಆಕ್ಷೇಪ ಎತ್ತಿದ್ದ ಹೊರಟ್ಟಿಗೆ ಗೃಹ ಸಚಿ ತಿರುಗೇಟು!

ಶಾಸಕರಾದ ಎಚ್‌.ಆರ್‌. ಗವಿಯಪ್ಪ, ಡಾ.ಎನ್.ಟಿ. ಶ್ರೀನಿವಾಸ್, ಎಂ.ಪಿ. ಲತಾ, ಬಿ.ಎಂ. ನಾಗರಾಜ, ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ, ಎಂ.ಎಲ್ಸಿ ನಸೀರ್‌ ಅಹಮದ್‌, ಮುಖಂಡರಾದ ದೋಟಿಹಾಳ, ಭರತ್, ಕವಿತಾ ಸಿಂಗ್, ನಾಗರಾಜ, ಜಿಲ್ಲಾಧಿಕಾರಿ ದಿವಾಕರ ಬಾಬು, ಜಿಪಂ ಸಿಇಒ ಅಕ್ರಂ ಶಾ ಮತ್ತಿತರರಿದ್ದರು.
ಸಚಿವ ಜಮೀರ್ ಅಹಮದ್ ಖಾನ್‌ ಮಾತನಾಡಿದರು.