ಜೈ ಶ್ರೀರಾಮ್ ಎಂದರೆ ಊಟ ಸಿಗುತ್ತಾ? ನೌಕರಿ ಸಿಗುತ್ತಾ?: ಸಚಿವ ತಿಮ್ಮಾಪುರ
ಜೈ ರಾಮ್, ಶ್ರೀರಾಮ್ ಅಂದ್ರೆ ಏನು ಯುವಕರಿಗೆ ಊಟಕ್ಕೆ ಸಿಗುತ್ತಾ? ನೌಕರಿ ಸಿಗುತ್ತಾ? ಬದುಕು ಸಿಗುತ್ತಾ ? ಎಂದು ಪ್ರಶ್ನಿಸುವ ಮೂಲಕ ಸಚಿವ ತಿಮ್ಮಾಪೂರ ಗ್ಯಾರಂಟಿ ಸಮಾವೇಶದಲ್ಲಿ ಬಿಜೆಪಿ ವಿರುದ್ದ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.
ಬಾಗಲಕೋಟೆ (ಮಾ.7): ಜೈ ರಾಮ್, ಶ್ರೀರಾಮ್ ಅಂದ್ರೆ ಏನು ಯುವಕರಿಗೆ ಊಟಕ್ಕೆ ಸಿಗುತ್ತಾ? ನೌಕರಿ ಸಿಗುತ್ತಾ? ಬದುಕು ಸಿಗುತ್ತಾ ? ಎಂದು ಪ್ರಶ್ನಿಸುವ ಮೂಲಕ ಸಚಿವ ತಿಮ್ಮಾಪೂರ ಗ್ಯಾರಂಟಿ ಸಮಾವೇಶದಲ್ಲಿ ಬಿಜೆಪಿ ವಿರುದ್ದ ಪರೋಕ್ಷವಾಗಿ ವಾಗ್ಧಾಳಿ ನಡೆಸಿದರು.
ಬಾಗಲಕೋಟೆ ತೋಟಗಾರಿಕೆ ವಿವಿ ಪಕ್ಕದ 112 ನೇ ಸೆಕ್ಟರ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಸಚಿವ ತಿಮ್ಮಾಪೂರ, ಯುವಕರು ಎಂತಹ ಸ್ಥಿತಿಯಲ್ಲಿದ್ದಾರೆ. ಎಲ್ಲಾ ಓದಿ ಮನೆಯಲ್ಲಿ ಕುಳಿತಿದ್ದಾರೆ. ಅಂತಹ ಯುವಕರಿಗೆ ಯುವ ನಿಧಿ ಮೂಲಕ ಹಣ ಕೊಡ್ತಿದ್ದೇವೆ. ಆದ್ರೆ ಇನ್ನೊಬ್ರು ಹುಡುಗರ ಕೈಯಲ್ಲಿ ಏನು ಕೊಡ್ತಾರೆ, ಜೈ ಶ್ರೀ ರಾಮ್, ಜೈ ರಾಮ್ ಕೊಡ್ತಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ನಾವು ಹಿಂದುಗಳಲ್ವ? ನಾವೆಲ್ಲ ಜೈ ಶ್ರೀ ರಾಮ್, ಜೈ ಶ್ರೀ ರಾಮ್, ಹನುಮಂತ, ಬಸವಣ್ಣ ಎಲ್ಲಾ ಅನ್ನುವವರೆ. ಆದ್ರೆ ಇವ್ರು ಏಕೆ ಅಂತಾರೆ ಅಂದ್ರೆ ಅಧಿಕಾರಕ್ಕಾಗಿ ಅಂತಾರೆ. ಭಕ್ತಿ ಭಾವದಿಂದ ಅನ್ನಬೇಕು. ಆದ್ರೆ ಇವ್ರು ಎಂಪಿ, ಎಂಎಲ್‌ಎ ಆಗಲಿಕ್ಕೆ ಅಂತಾರೆ. ಜೈಶ್ರೀರಾಮ್ ಜೊತೆಗೆ ಮಾತೆತ್ತಿದರೆ ಪಾಕಿಸ್ತಾನ ಹೆಸರು ಹೇಳೋದು. ಮುಸ್ಲಿಂರ ಹೆಸರು ಹೇಳೋದು. ಈ ದೇಶದ ಒಬ್ಬ ಎಂಪಿ ನಮಗೆ ಇಷ್ಟು ಹಣ ಬೇಕು ಅಂತ ಕೇಳಲಿಲ್ಲ. ಬೆಳಗ್ಗೆ ಎದ್ದ ತಕ್ಷಣವೇ ಪಾಕಿಸ್ತಾನ ಅಂತಾರೆ ಎಂದು ಬಿಜೆಪಿಗರ ವಿರುದ್ಧ ಸಚಿವರು ವಾಗ್ಧಾಳಿ ನಡೆಸಿದ್ರು.