ಬೆಂಗಳೂರು(ಮೇ.21): ಮೇ 31ರ ವರೆಗೂ ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಇರುತ್ತದೆ. ಅಂದು ಮದುವೆ ಮತ್ತಿತರರ ಸಮಾರಂಭಗಳಿಗೆ ಪರವಾನಗಿ ನೀಡಿದ್ದರೂ ರದ್ದು ಮಾಡಲಾಗಿದ್ದು, ಭಾನುವಾರ ಮದುವೆ ಮಾಡುವಂತಿಲ್ಲ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಅವರು ಆದೇಶ ಹೊರಡಿಸಿದ್ದರು. 

ಹೀಗಾಗಿ ಭಾನುವಾರ ಮದುವೆ ಸಿದ್ಧತೆ ಮಾಡಿಕೊಂಡವರು ಬಹಳ ಆತಂಕದಲ್ಲಿದ್ದರು. ಈ ಸಂಬಂಧ ಸುವರ್ಣ ನ್ಯೂಸ್‌ ವರದಿಯನ್ನ ಪ್ರಸಾರ ಮಾಡಿತ್ತು. ಇದೀಗ ವರದಿ ಬಿತ್ತರವಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ ಭಾನುವಾರದ ಮದುವೆಗೆ ಅಡ್ಡಿಯಿಲ್ಲ, ವಿವಾಹವನ್ನ ನಡೆಸಬಹುದು ಎಂದು ಸ್ಪಷ್ಟಪಡಿಸಿದೆ. 

ಲಾಕ್‌ಡೌನ್‌ ಎಫೆಕ್ಟ್‌: ಭಾನುವಾರ ಮದುವೆ ಮಾಡುವಂತಿಲ್ಲ..!

ಈ ಸಂಬಂಧ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಸಚಿವ ಸುರೇಶ್‌ ಕುಮಾರ್‌ ಅವರು, ಭಾನುವಾರದ ಮದುವೆಗೆ ಅಡ್ಡಿಯಿಲ್ಲ. ಮದುವೆ ವಿಶೇಷ ಪ್ರಕರಣ ಅಂತ ಪರಿಗಣಿಸಿದ್ದೇವೆ. ಹೀಗಾಗಿ ನಿಯಮ ಪಾಲನೆ ಮಾಡಿ ಮದುವೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಮದುವೆ ಮಾಡುವ ಸಂಬಂಧ ಜಿಲ್ಲಾಡಳಿತ, ಸ್ಥಳೀಯ ಆಡಳಿತಕ್ಕೆ ಮೊದಲೇ ಮಾಹಿತಿ ನೀಡಿರಬೇಕು. ಗ್ರಾಮ ಪಂಚಾಯತ್, ಪೊಲೀಸ್ ಠಾಣೆ, ನಗರಸಭೆ, ಬಿಬಿಎಂಪಿ ಯಂತಹ ಸ್ಥಳೀಯ ಆಡಳಿತಕ್ಕೆ ಮಾಹಿತಿ ಇರಬೇಕು. ನಿಗದಿತ ದಿನಾಂಕ ದಂದು ನಿಗದಿಯಾಗಿರುವ ಮದುವೆಗಳಿಗೆ ಅಡ್ಡಿ ಇಲ್ಲ ಎಂದು ಮುಖ್ಯಮಂತ್ರಿ ಕಚೇರಿಯ ಸ್ಪಷ್ಟನೆ ಹೊರಬಿದ್ದಿದೆ.