ಕಾಶಿಯಲ್ಲಿರುವ ಕರ್ನಾಟಕ ಛತ್ರ ಅಭಿವೃದ್ಧಿ: ಸಚಿವೆ ಶಶಿಕಲಾ ಜೊಲ್ಲೆ
ಕಾಶಿಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕರ್ನಾಟಕದ ಛತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಬೆಂಗಳೂರು (ನ.14): ಕಾಶಿಯಾತ್ರೆಗೆ ತೆರಳುವ ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕರ್ನಾಟಕದ ಛತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಕಾಶಿಯಲ್ಲಿರುವ ಕರ್ನಾಟಕ ರಾಜ್ಯ ಛತ್ರಕ್ಕೆ ಭಾನುವಾರ ಭೇಟಿ ನೀಡಿ ಕಾಶಿಯಾತ್ರೆಯ ಸಹಾಯಧನ ರಶೀದಿಗಳನ್ನು ಫಲಾನುಭವಿಗಳಿಗೆ ವಿತರಿಸಿದ ಬಳಿಕ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಕರ್ನಾಟಕ ಸರ್ಕಾರ ಕಾಶಿಯಾತ್ರೆಗೆ ಸಹಾಯಧನ ಘೋಷಣೆ ಮಾಡಿದ ನಂತರ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಯಾತ್ರಾರ್ಥಿಗಳಿಗೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸಿಕೊಡಬೇಕು. ಕಾಶಿಯಲ್ಲಿರುವ ಹಳೆಯ ಛತ್ರ ಮೈಸೂರು ಮಹಾರಾಜರು ಕಟ್ಟಿಸಿದ್ದಾರೆ. ಅದರ ನೈಜ ಶೈಲಿಯನ್ನು ಉಳಿಸಿಕೊಂಡು ಅಭಿವೃದ್ಧಿ ಸಾಧ್ಯವೇ ಎನ್ನುವುದನ್ನು ಪರಿಶೀಲಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕದ ಛತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗುವುದು ಎಂದರು.
ರೈಲು ಆಯ್ತು ಈಗ ಮೈಸೂರು ವಿಮಾನ ನಿಲ್ದಾಣಕ್ಕೂ ಒಡೆಯರ್ ಹೆಸರು: ಸಂಸದ ಪ್ರತಾಪ್ ಸಿಂಹ
ರೈಲಿನಲ್ಲಿ ತೆರಳಿದವರಿಗೆ ಸರ್ಕಾರದಿಂದ ಉಚಿತ ಛತ್ರಿ ವಿತರಣೆ: ‘ಕರ್ನಾಟಕ -ಭಾರತ್ ಗೌರವ್ ಕಾಶಿ ದರ್ಶನ್’ ರೈಲಿನಲ್ಲಿ ಕಾಶಿಯಾತ್ರೆ ತೆರಳಿರುವ ಯಾತ್ರಾರ್ಥಿಗಳಿಗೆ ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ) ಉಚಿತವಾಗಿ ಕೊಡೆಯನ್ನು ವಿತರಿಸಿದೆ. ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಭಾರತ್ ಗೌರವ್ ರೈಲಿನಲ್ಲಿ 547 ಮಂದಿ ಯಾತ್ರಾರ್ಥಿಗಳು ಕಾಶಿಗೆ ತೆರಳಿದ್ದರು. ಯಾತ್ರೆ ಸಂದರ್ಭದಲ್ಲಿ ಅವರುಗಳ ಅನುಕೂಲಕ್ಕಾಗಿ ಎಲ್ಲರಿಗೂ ಉಚಿತವಾಗಿ ಕೊಡೆಯನ್ನು ನೀಡಲಾಗಿದೆ. ರೈಲು ಭಾನುವಾರ ಮಧ್ಯಾಹ್ನ ವಾರಾಣಸಿ ತಲುಪಲಿದೆ. ನ.18ಕ್ಕೆ ಯಾತ್ರಾರ್ಥಿಗಳು ರಾಜ್ಯಕ್ಕೆ ಹಿಂದಿರುಗಲಿದ್ದಾರೆ.
ಸಚಿವೆ ಸ್ವಾಗತ: ಮುಜರಾಯಿ ಇಲಾಖೆಯು ರೈಲ್ವೆ ಇಲಾಖೆ ಸಹಕಾರದೊಂದಿಗೆ ಆಯೋಜಿಸಿರುವ ಮೊದಲ ಯಾತ್ರೆ ಇದಾಗಿದ್ದು, ಯಾತ್ರಾರ್ಥಿಗಳಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಕಾಶಿಯಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಭಾನುವಾರ ಬೆಳಿಗ್ಗೆ ವಾರಾಣಸಿ ರೈಲು ನಿಲ್ದಾಣದಲ್ಲಿ ಯಾತ್ರಾರ್ಥಿಗಳನ್ನು ಸ್ವಾಗತಿಸಲಿರುವ ಸಚಿವೆ, ಕಾಶಿಯಲ್ಲಿರುವ ಹನುಮಾನ್ ಘಾಟ್‌ನಲ್ಲಿರುವ ಕರ್ನಾಟಕ ರಾಜ್ಯ ಛತ್ರಕ್ಕೂ ಭೇಟಿ ನೀಡಲಿದ್ದಾರೆ ಎಂದು ಮುಜರಾಯಿ ಇಲಾಖೆ ಮಾಹಿತಿ ನೀಡಿದೆ.
ಮುದ್ರಾಧಾರಣೆ ನಿಷೇಧ ಸುತ್ತೋಲೆ ಹಿಂಪಡೆದ ಸರ್ಕಾರ: ಧಾರ್ಮಿಕ ಸ್ಥಳಗಳಲ್ಲಿ ಮುದ್ರಾಧಾರಣೆ ಮಾಡುವುದನ್ನು ನಿಷೇಧಿಸಿ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಸರ್ಕಾರ ಹಿಂಪಡೆದುಕೊಂಡಿದೆ. ದೇವಾಲಯಗಳಲ್ಲಿ ಚಾಲ್ತಿಯಲ್ಲಿರುವ ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧ ಆಚರಣೆ ನಡೆಸುವಂತಿಲ್ಲ, ಸಂಪ್ರದಾಯಗಳಿಗೆ ವಿರುದ್ಧವಾಗಿ ಭಾವಚಿತ್ರ, ವಿಗ್ರಹಗಳನ್ನು ಅಳವಡಿಸುವಂತಿಲ್ಲ, ಮುದ್ರಾಧಾರಣೆಗೆ ಅವಕಾಶವಿಲ್ಲ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಸುತ್ತೋಲೆಯಲ್ಲಿ ಹೇಳಲಾಗಿತ್ತು.
ಸೇಡಂ: ಇಂದು ಅಖಿಲ ಭಾರತ 69ನೇ ಸಹಕಾರ ಸಪ್ತಾಹಕ್ಕೆ 1 ಲಕ್ಷ ಜನ
ಉಡುಪಿ ಮತ್ತು ಇತರೆಡೆಯ ಮಾಧ್ವ ಮಠಗಳಲ್ಲಿ ತಪ್ತ ಮುದ್ರಾಧಾರಣೆ ಮಾಡುವುದು ಅನಾದಿಕಾಲದ ಸಂಪ್ರದಾಯವಾಗಿದ್ದು, ಸರ್ಕಾರದ ಸುತ್ತೋಲೆಯ ವಿರುದ್ಧ ಮಾಧ್ವ ಮತಸ್ಥರಿಂದ ವಿರೋಧ ವ್ಯಕ್ತವಾಗಿತು. ಉಡುಪಿ ಶಾಸಕ ಕೆ.ರಘುಪತಿ ಭಟ್ ಅವರು ಈ ಸುತ್ತೋಲೆಯನ್ನು ಹಿಂಪಡೆಯುವಂತೆ ಆಗ್ರಹಿಸಿದ್ದರು. ಇದೀಗ ಧಾರ್ಮಿಕ ದತ್ತಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಈ ಸುತ್ತೋಲೆಯನ್ನು ಹಿಂಪಡೆದಿರುವುದಾಗಿ ಹೇಳಿದ್ದಾರೆ.