Asianet Suvarna News Asianet Suvarna News

ಸೇಡಂ: ಇಂದು ಅಖಿಲ ಭಾರತ 69ನೇ ಸಹಕಾರ ಸಪ್ತಾಹಕ್ಕೆ 1 ಲಕ್ಷ ಜನ

ಕನ್ನಡ ಸಾಹಿತ್ಯಕ್ಕೆ ಕವಿರಾಜ ಮಾರ್ಗ ಗ್ರಂಥ ಕೊಟ್ಟಂಥ ನೃಪತುಂಗನ ನಾಡು, ಕಾಗಿಣಾ ತೀರ ಸೇಡಂನಲ್ಲಿ ನ.14ರಂದು ಬೆಳಗ್ಗೆ 11.15ಕ್ಕೆ ಅಖಿಲ ಭಾರತ 69ನೇ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯಲಿದೆ. 

69th sahakara saptaha from november 14th at kalaburagi gvd
Author
First Published Nov 14, 2022, 7:24 AM IST

ಕಲಬುರಗಿ (ನ.14): ಕನ್ನಡ ಸಾಹಿತ್ಯಕ್ಕೆ ಕವಿರಾಜ ಮಾರ್ಗ ಗ್ರಂಥ ಕೊಟ್ಟಂಥ ನೃಪತುಂಗನ ನಾಡು, ಕಾಗಿಣಾ ತೀರ ಸೇಡಂನಲ್ಲಿ ನ.14ರಂದು ಬೆಳಗ್ಗೆ 11.15ಕ್ಕೆ ಅಖಿಲ ಭಾರತ 69ನೇ ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದಕ್ಕಾಗಿ ಸೇಡಂ ಪಟ್ಟಣ ಶೃಂಗಾರಗೊಂಡು ಸಹಕಾರಿಗಳನ್ನು ಸ್ವಾಗತಿಸಲು ಸಜ್ಜಾಗಿದೆ. ಸೇಡಂ ಶಾಸಕ, ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌ ಉಸ್ತುವಾರಿಯಲ್ಲಿ ನಡೆಯುವ ಈ ಸಪ್ತಾಹವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ರಾಜ್ಯದ ನೂರಾರು ಸಹಕಾರಿ ಸಂಘಗಳ ಒಂದು ಲಕ್ಷಕ್ಕೂ ಅಧಿಕ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. 

ನಾಲ್ಕು ಡಿಸಿಸಿ ಬ್ಯಾಂಕ್‌ಗಳ ಅಧ್ಯಕ್ಷರು, ರಾಜ್ಯ ಮಹಾಮಂಡಳದ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿ ಇನ್ನಿತರ ಪ್ರಮುಖರು ಆಗಮಿಸಲಿದ್ದಾರೆ. ಬಳ್ಳಾರಿ ಮತ್ತು ಕಲಬುರಗಿ ಜಿಲ್ಲಾ ಹಾಲು ಒಕ್ಕೂಟ ಮಹಾಮಂಡಳಕ್ಕೂ ಆಹ್ವಾನ ನೀಡಲಾಗಿದೆ. ಜೊತೆಗೆ ಆರು ಜಿಲ್ಲೆಗಳ ಸಹಕಾರಿ ಯೂನಿಯನ್‌ಗಳು ಈ ಬೃಹತ್‌ ಕಾರ್ಯಕ್ರಮಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮೇಲುಸ್ತುವಾರಿ ತಂಡ ರಚಿಸಲಾಗಿದ್ದು, ಕಾರ್ಯಕ್ರಮದ ಯಶಸ್ಸಿಗೆ ಪೂರಕವಾಗಿ ವೇದಿಕೆ, ಊಟ, ಆತಿಥ್ಯ, ಪೆಂಡಾಲ್‌ ಹಾಗೂ ನಗರಾಲಂಕಾರ ಸಮಿತಿಗಳನ್ನು ರಚಿಸಲಾಗಿದೆ.

Kalaburagi: ನ.14ರಂದು ಸೇಡಂನಲ್ಲಿ ಸಹಕಾರಿ ಸಪ್ತಾಹ: ಉದ್ಘಾಟನೆಗೆ ಸಿಎಂ ಬೊಮ್ಮಾಯಿ ಆಗಮನ

ಹಲವು ಫಲ ಜನತೆಗೆ ಅರ್ಪಣೆ: ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಯಶಸ್ವಿನಿ ಕಾರ್ಡ್‌ಗಳನ್ನು ಫಲಾನುಭವಿಗಳಿಗೆ ವಿತರಿಸಲಿದ್ದಾರೆ. ಇದರ ಜೊತೆಗೆ, ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದಲ್ಲಿ ದುಡಿದಿರುವ ಮುತ್ಸದ್ದಿಗಳಿಗೆ ‘ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಹಕಾರ ಕ್ಷೇತ್ರದ ಬೃಹತ್‌ ಪ್ರದರ್ಶನ ಏರ್ಪಡಿಸಲಾಗುತ್ತಿದೆ. ಜೊತೆಗೆ ಎಲ್ಲ ಇಲಾಖೆಗಳ ಮಾಹಿತಿ ಕೇಂದ್ರ ತೆರೆಯಲಾಗುತ್ತಿದ್ದು, ಸಾರ್ವಜನಿಕರು ತಮ್ಮ ದೂರುಗಳನ್ನು ಈ ಮಾಹಿತಿ ಕೇಂದ್ರದಲ್ಲಿ ನೀಡಬಹುದಾಗಿದೆ. ಇದೇ ವೇಳೆ 25 ಸಾವಿರ ಬಿಪಿಎಲ್‌-ಎಪಿಎಲ್‌ ಕಾರ್ಡ್‌ ಬಳಕೆದಾರ ಫಲಾನುಭವಿಗಳಿಗೆ ಆರೋಗ್ಯ ಕಾರ್ಡ್‌ ವಿತರಣೆ ಮಾಡಲಾಗುವುದು. ಇದಕ್ಕಾಗಿ ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ 100 ಅಧಿಕಾರಿಗಳ ತಂಡ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಗೆ ಕಾರ್ಮಿಕ ಇಲಾಖೆಯಿಂದ ನೋಂದಾಯಿತರಿಗೆ 10 ಸಾವಿರ ಕಾರ್ಡ್‌ ವಿತರಿಸಲಾಗುತ್ತಿದೆ.

ಶಾಸಕ ತೇಲ್ಕೂರ್‌ಗೆ ಸಹಕಾರ ರತ್ನ ಪುರಸ್ಕಾರ: ತೇಲ್ಕೂರ ರಾಜ್ಯದಲ್ಲೇ 21ನೇ ಸ್ಥಾನದಲ್ಲಿ ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್‌ ಈಗ 11 ಸ್ಥಾನಕ್ಕೆರಿರುವುದು ಅಭಿವೃದ್ಧಿಗೆ ಹಿಡಿದ ಕನ್ನಡಿ. ಕಲಬುರಗಿ-ಯಾದಗಿರಿ ಬ್ಯಾಂಕ್‌ನ ಸರ್ವಾಂಗೀಣ ಅಭಿವೃದ್ಧಿಗೆ ಹಗಲಿರಳು ಶ್ರಮಿಸದ ರಾಜಕುಮಾರ ಪಾಟೀಲ್‌ ತೇಲ್ಕೂರ ಅವರಿಗೆ ಸೋಮವಾರ ನ.14ರಂದು ಸೇಡಂ ಪಟ್ಟಣದಲ್ಲಿ ನಡೆಯುವ 69 ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಸಮಾರಂಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಬಿಜೆಪಿ ಗೂಂಡಾ ಸಂಸ್ಕೃತಿ ಹುಟ್ಟು ಹಾಕುತ್ತಿದೆ: ಪ್ರಿಯಾಂಕ್‌ ಖರ್ಗೆ

ಸೇಡಂ ಪಟ್ಟಣ ಅಲಂಕಾರ: ಸಹಕಾರ ಸಪ್ತಾಹದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಸೇಡಂ ಪಟ್ಟಣವನ್ನು ಅಲಂಕರಿಸಲಾಗುತ್ತಿದ್ದು, ಬೆಂಗಳೂರಿನ ಚಿತ್ರಕಲಾ ಪರಿಷತ್ತಿಗೆ ಅಲಂಕಾರದ ಹೊಣೆ ವಹಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಗಣ್ಯರಿಗಾಗಿ 10 ಸಾವಿರ ವಿಐಪಿ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದ್ದು, ಸುಸಜ್ಜಿತ ಪಾಕಿಂರ್‍ಗ್‌ ವ್ಯವಸ್ಥೆ ಸಹ ಮಾಡಲಾಗುತ್ತಿದೆ.

Follow Us:
Download App:
  • android
  • ios