ಬೆಂಗಳೂರು(ಆ.06): 2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 14,500 ಕೋಟಿ ರು.ಗಳವರೆಗೆ ಬೆಳೆ ಸಾಲ ನೀಡುವ ಗುರಿ ಹೊಂದಲಾಗಿದೆ. ಏಪ್ರಿಲ್‌ 1ರಿಂದ ಈವರೆಗೆ 9,46,796 ರೈತರಿಗೆ 6345.31 ಕೋಟಿ ರು. ಬೆಳೆ ಸಾಲ ವಿತರಣೆ ಮಾಡಲಾಗಿದೆ ಎಂದು ಸಹಕಾರ ಇಲಾಖೆ ತಿಳಿಸಿದೆ.

ಕಳೆದ ಸಾಲಿನಲ್ಲಿ 22.58 ಲಕ್ಷ ರೈತರಿಗೆ 13577 ಕೋಟಿ ರು. ಬೆಳೆ ಸಾಲ ವಿತರಣೆ ಮಾಡಲಾಗಿತ್ತು. ಈ ಬಾರಿ 9,46,796 ರೈತರಿಗೆ ಕೇವಲ ನಾಲ್ಕು ತಿಂಗಳಲ್ಲಿ 6345.31 ಕೋಟಿ ರು. ಬೆಳೆ ಸಾಲ ನೀಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರ ಕಾರ್ಯಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ರೈತರಿಗೆ 13 ಸಾವಿರ ಕೋಟಿ ಬೆಳೆ ಸಾಲ: ಸಚಿವ ಎಸ್‌.ಟಿ.​ಸೋ​ಮ​ಶೇ​ಖರ್

ಪ್ರೋತ್ಸಾಹ ಧನ ವಿತರಣೆ: 

ಕೋವಿಡ್‌-19 ಸಂಕಷ್ಟದ ಕಾಲದಲ್ಲಿ ಕೊರೋನಾ ವಾರಿಯರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರಿಗೆ ಸಹಕಾರ ಇಲಾಖೆ ತಲಾ ಮೂರು ಸಾವಿರ ರು.ಪೋ›ತ್ಸಾಹ ಧನ ನೀಡುತ್ತಿದೆ. ರಾಜ್ಯದಲ್ಲಿ ಅಂದಾಜು 42608 ಮಂದಿ ಆಶಾ ಕಾರ್ಯಕರ್ತೆಯರಿದ್ದು, ಅವರಲ್ಲಿ 35121 ಮಂದಿಗೆ ತಲಾ ಮೂರು ಸಾವಿರ ರು. ಪೋತ್ಸಾಹ ಧನ ವಿತರಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.