ನಮಗೆ ಮನೆಗೆಲ್ಲ ಎರಡು ಮೂರು ಬಾಗಿಲು ಇರುತ್ತವೆ. ಬಿಜೆಪಿಯವರು ಕಾಂಗ್ರೆಸ್ ನಲ್ಲಿ ಮೂರು ಬಾಗಿಲು ಇದೇ ಅಂತ ಹೇಳ್ತಾರೆ. ಆದ್ರೆ ಬಿಜೆಪಿ ಮನೆಯಲ್ಲಿ ಬಾಗಿಲೇ ಇಲ್ಲ, ಬಿಜೆಪಿ ಮನೆಗೆ ಎಲ್ಲಿದೆ ಬಾಗಿಲು? ಕಳೆದು ಚುನಾವಣೆಯಲ್ಲಿ ಸೋತು ಚಿಂದಿ ಚಿತ್ರಾನ್ನ ಆಗಿಬಿಟ್ಟಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

ಬೆಂಗಳೂರು (ಅ.29): ಬಿಜೆಪಿಯವರು ತಮ್ಮ ಹಳೆ ಚಾಳಿಯನ್ನು ಮುಂದುವರಿಸಿದ್ದಾರೆ. ಬೆಂಕಿ ಇಲ್ಲದೆ ಹೊಗೆ ಆಡೋದಿಲ್ಲ ಎಂದು ಬಿಜೆಪಿ ಆಪರೇಷನ್ ಕಮಲಕ್ಕೆ ಯತ್ನಿಸುತ್ತಿರುವುದಕ್ಕೆ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಆನೇಕಲ್ ತಾಲೂಕಿನ ಹಂದೇನಹಳ್ಳಿ ಸಮೀಪ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಹಿಂದೆ ಬಿಜೆಪಿಯವರು ಮಾಡಿರೋದನ್ನ ಮತ್ತೆ ಮುಂದುವರಿಸಿದ್ದಾರೆ. ಇದನ್ನು ನಮ್ಮ ಪಕ್ಷದ ಹಲವು ಶಾಸಕರು ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ತಮ್ಮ ಕೈನಲ್ಲಿ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿಕೊಳ್ಳೋಕೆ ಆಗ್ತಿಲ್ಲ. ನಾಲ್ಕು ವರ್ಷಗಳ ಕಾಲ ಸರಿಯಾದ ಆಡಳಿತ ಕೋಡೋಕೆ ಆಗಲಿಲ್ಲ. ಬಿಜೆಪಿಯವರನ್ನು ನಂಬಿ ಯಾರೂ ಯಾವ ಶಾಸಕರೂ ಹೋಗೋದಿಲ್ಲ. ಹಾಗೇನಾದರೂ ನಂಬಿ ಹೋದರೆ ಹೋದವರಿಗೆ ಮೂರು ನಾಮ ಗ್ಯಾರಂಟಿ ಎಂದು ವ್ಯಂಗ್ಯ ಮಾಡಿದರು.

ಬಿಜೆಪಿ ಶಾಸಕರಿಂದ ಬ್ಲಾಕ್‌ಮೇಲ್‌ ತಂತ್ರ: ಸಚಿವ ಸತೀಶ ಜಾರಕಿಹೊಳಿ

ಇನ್ನು ಕಾಂಗ್ರೆಸ್‌ ಒಡೆದ ಮನೆ, ಮೂರು ಬಾಗಿಲು ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮಗೆ ಮನೆಗೆಲ್ಲ ಎರಡು ಮೂರು ಬಾಗಿಲು ಇರುತ್ತವೆ. ಬಿಜೆಪಿಯವರು ಕಾಂಗ್ರೆಸ್ ನಲ್ಲಿ ಮೂರು ಬಾಗಿಲು ಇದೇ ಅಂತ ಹೇಳ್ತಾರೆ. ಆದ್ರೆ ಬಿಜೆಪಿ ಮನೆಯಲ್ಲಿ ಬಾಗಿಲೇ ಇಲ್ಲ, ಬಿಜೆಪಿ ಮನೆಗೆ ಎಲ್ಲಿದೆ ಬಾಗಿಲು? ಕಳೆದು ಚುನಾವಣೆಯಲ್ಲಿ ಸೋತು ಚಿಂದಿ ಚಿತ್ರಾನ್ನ ಆಗಿಬಿಟ್ಟಿದೆ. ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ ಈಗ ಮತ್ತೆ ಅಧಿಕಾರ ಹಿಡಿಯುವ ಹಗಲುಗನಸು ಕಾಣುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನನ್ನ ಮೌನವೂ ವೀಕ್ನೆಸ್‌ ಅಲ್ಲ: ಜಾರಕಿಹೊಳಿಗೆ ತಿರುಗೇಟು ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಇನ್ನು ಡಿಸಿಎಂರನ್ನು ಹೊರಗಿಟ್ಟು ರಾಜಕೀಯ ಮಾಡಲಾಗುತ್ತಿದೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾರೆಡ್ಡಿ, ಯಾರೋ ನಾಲ್ಕು ಜನ ಊಟಕ್ಕೆ ಸೇರಿಕೊಂಡ್ರೆ ಹೊರಗಿಟ್ಟಂತೆ ಅಲ್ಲ ಎಂದರು.