ಬೆಂಗಳೂರು-ಮೈಸೂರು ಮರಣ ಹೆದ್ದಾರಿ ಕ್ರೆಡಿಟ್ ಅನ್ನೂ ಬಿಜೆಪಿಯವರೇ ತೆಗೆದಕೊಳ್ಳಬೇಕು: ರಾಮಲಿಂಗಾರೆಡ್ಡಿ
ರಸ್ತೆ ನಿರ್ಮಾಣವಾಗಿದ್ದು ನಮ್ಮ ಹಣದಲ್ಲಿ. ಆದರೂ ರಸ್ತೆ ಮಾಡಿದ್ದಾಗಿ ಮಾತ್ರ ಹೇಳಿಕೊಳ್ಳುತ್ತಾರೆ. ಆ ಸಾವಿನ ಹೊಣೆ ಮಾತ್ರ ಹೊರಲ್ಲ. ಇದು ಹೈವೆಯಾಗಿ ಉಳಿದಿಲ್ಲ. ಮರಣ ಹೆದ್ದಾರಿ ಆಗಿದೆ. ಇದರ ಕ್ರೆಡಿಚ್ ಕೂಡ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ನಾಯಕರನ್ನು ಪರೋಕ್ಷವಾಗಿ ಟೀಕಿಸಿದ ರಾಮಲಿಂಗಾರೆಡ್ಡಿ
ರಾಮನಗರ(ಜೂ.27): ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಾಗಿ ಉಳಿದಿಲ್ಲ. ಅದೊಂದು ಮರಣ ಹೆದ್ದಾರಿಯಾಗಿ ರೂಪ ತಳೆದಿದೆ. ಆ ಕ್ರೆಡಿಟ್ ಅನ್ನು ಜಂಬ ಕೊಚ್ಚಿಕೊಳ್ಳುತ್ತಿರುವವರು ಪಡೆದುಕೊಳ್ಳಲಿ ಎಂದು ಬಿಜೆಪಿ ನಾಯಕರ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಕಿಡಿಕಾರಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 200ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 150ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯನ್ನು ಪ್ರಶ್ನಿಸಿದರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಗ್ಗೆ ಪ್ರತಾಪ್ ಸಿಂಹ ಚೈಲ್ಡಿಶ್ ಮಾತು: ನಿಖಿಲ್ ಕುಮಾರಸ್ವಾಮಿ
ನೀವು ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿರುವುದೇ ಇಷ್ಟೊಂದು ಸಾವು ಸಂಭವಿಸಲು ಕಾರಣವಾಗಿದೆ. ಇದರ ಹೊಣೆಯನ್ನು ಯಾರಾದರು ಹೊರುತ್ತಾರೆಯೇ. ಕೆಲವರು ಮಾಧ್ಯಮ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ನಾವೇ ರಸ್ತೆ ಮಾಡಿದ್ದು ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ. ರಸ್ತೆ ನಿರ್ಮಾಣವಾಗಿದ್ದು ನಮ್ಮ ಹಣದಲ್ಲಿ. ಆದರೂ ರಸ್ತೆ ಮಾಡಿದ್ದಾಗಿ ಮಾತ್ರ ಹೇಳಿಕೊಳ್ಳುತ್ತಾರೆ. ಆ ಸಾವಿನ ಹೊಣೆ ಮಾತ್ರ ಹೊರಲ್ಲ. ಇದು ಹೈವೆಯಾಗಿ ಉಳಿದಿಲ್ಲ. ಮರಣ ಹೆದ್ದಾರಿ ಆಗಿದೆ. ಇದರ ಕ್ರೆಡಿಚ್ ಕೂಡ ಅವರಿಗೆ ಸಲ್ಲುತ್ತದೆ ಎಂದು ಬಿಜೆಪಿ ನಾಯಕರನ್ನು ಪರೋಕ್ಷವಾಗಿ ಟೀಕಿಸಿದರು.
ಹೆದ್ದಾರಿಯಲ್ಲಿ ಅಪಘಾತಗಳು ಸಂಭವಿಸದಂತೆ ಮಾಡುವ ಹೊಣೆ ನಿಮ್ಮದು. ನೀವು ಏನು ಮಾಡುತ್ತೀರೊ ಗೊತ್ತಿಲ್ಲ. ಹೆದ್ದಾರಿಯನ್ನು ವೈಜ್ಞಾನಿಕವಾಗಿ ಮಾಡಬೇಕು. ಸರ್ವಿಸ್ ರಸ್ತೆ, ತಂಗುದಾಣ, ಅಂಡರ್ ಪಾಸ್ ಸಮಸ್ಯೆ ಬಗೆಹರಿಸಬೇಕು ಎಂದು ರಾಮಲಿಂಗಾರೆಡ್ಡಿ ಸೂಚನೆ ನೀಡಿದರು.