ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಬಗ್ಗೆ ಪ್ರತಾಪ್ ಸಿಂಹ ಚೈಲ್ಡಿಶ್ ಮಾತು: ನಿಖಿಲ್ ಕುಮಾರಸ್ವಾಮಿ
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ಸಮಸ್ಯೆಗಳಿದ್ದರೂ ಸಂಸದ ಪ್ರತಾಪ್ ಸಿಂಹ ಚೈಲ್ಡಿಶ್ ಆಗಿ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.
ರಾಮನಗರ (ಮಾ.17): ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ಸಮಸ್ಯೆಗಳಿದ್ದರೂ ಸಂಸದ ಪ್ರತಾಪ್ ಸಿಂಹ ಚೈಲ್ಡಿಶ್ ಆಗಿ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನೆ ಕಟ್ಟಿದರೂ ಸಹ ಸಣ್ಣ ಸಮಸ್ಯೆ ಆಗುತ್ತದೆ. ಹೀಗಿರುವ ರಸ್ತೆಯಲ್ಲಿಯು ಕೆಲ ಸಮಸ್ಯೆ ಆಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಆದರೆ, ಮನೆ ಅವರ ದುಡ್ಡಿನಲ್ಲಿ ಕಟ್ಟುತ್ತಾರೆ. ಆದರೆ, ರಸ್ತೆ ನಿಮ್ಮ ದುಡ್ಡಲ್ಲಿ ಕಟ್ಟಿದ್ದೀರಾ ಎಂದು ಕಿಡಿಕಾರಿದರು.
ಪ್ರತಾಪ್ ಸಿಂಹ ಸೆಲ್ಪಿ ವಿಡಿಯೋ ಮಾಡಿ ರಸ್ತೆಯನ್ನೇ ಮಾಡಿಬಿಟ್ಟಿದ್ದಾರೆ. ಜನಪ್ರತಿನಿಧಿಯಾಗಿ ಸರಿಯಾದ ಮಾಹಿತಿ ನೀಡುವ ಕೆಲಸ ಮಾಡಬೇಕು. ಚೈಲ್ಡಿಶ್ ಆಗಿ ಪ್ರತಾಪ್‌ಸಿಂಹ ಮಾತನಾಡುತ್ತಾರೆ. ಈ ರಸ್ತೆ ಜನಸಾಮಾನ್ಯರ ದುಡ್ಡಿನಲ್ಲಿ ಕಟ್ಟಿದ್ದಾರೆ ಎಂಬುದನ್ನು ಮರೆಯಬಾರದು ಎಂದರು. ಈಗಾಗಲೇ ಈ ರಸ್ತೆಯಲ್ಲಿ 80ಕ್ಕೂ ಹೆಚ್ಚು ಮಂದಿ ಮೃತ ಪಟ್ಟಿದ್ದಾರೆ. 10 ಸಾವಿರ ರುಪಾಯಿಗಳನ್ನು ತಿಂಗಳಿಗೆ ಟೊಯಿ ಗೆ ಕಟ್ಟಬೇಕಾಗುತ್ತದೆ. ಹೀಗಿರುವಾಗ ಜೀವನ ನಡೆಸುವುದಾದರೂ ಹೇಗೆ? ಸೌಲಭ್ಯಗಳನ್ನು ಕಲ್ಪಿಸುವವರೆಗೂ ಟೋಲ್ ಸಂಗ್ರಹ ನಡೆಸಬಾರದು. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ಸಹ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲ್ಲಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬಳ್ಳಾರಿಯಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡುವುದರಿಂದ ನನಗೆ ಮತ್ತಷ್ಟು ಆನೆ ಬಲ: ಶಾಸಕ ಸೋಮಶೇಖರ್ ರೆಡ್ಡಿ
ಟೋಲ್ ಸಂಗ್ರಹದ ಉದ್ದೇಶದಿಂದ ಸರ್ವಿಸ್ ರಸ್ತೆ ಕಂಟ್ಯುನಿಟಿ ನೀಡಿಲ್ಲವೆಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರೆ ಹೇಳುತ್ತಿದ್ದಾರೆ. ಹಾಗಾದರೆ ಈ ಹೆದ್ದಾರಿಯಲ್ಲಿ ಆರ್ಥಿಕವಾಗಿ ಸಬಲರಾಗಿರುವ ಶ್ರೀಮಂತರು ಮಾತ್ರ ಹೆದ್ದಾರಿಯಲ್ಲಿ ಓಡಾಡಬೇಕಾ. ರೈತರು, ಬಡವರು, ವಿದ್ಯಾರ್ಥಿಗಳು ಓಡಾಡಬಾರದಾ ಎಂದು ಪ್ರಶ್ನಿಸಿದರು.
ಪ್ರತಾಪ್‌ಸಿಂಹ ಹೆದ್ದಾರಿ ಸಮರ್ಥನೆ ಮಾಡಿಕೊಳ್ಳುತ್ತಿರುವ ಏಕೈಕ ಭೂಪ: ಅವ್ಯವಸ್ಥೆಯಿಂದ ಕೂಡಿರುವ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಸದ ಪ್ರತಾಪ್ ಸಿಂಹ ಸಮರ್ಥನೆ ಮಾಡಿಕೊಳ್ಳುತ್ತಿರುವ ಏಕೈಕ ಭೂಪ ಎಂದು ಮಾಗಡಿ ಕ್ಷೇತ್ರ ಶಾಸಕ ಎ.ಮಂಜುನಾಥ್ ಲೇವಡಿ ಮಾಡಿದರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಭ್ರಷ್ಟತೆಗೆ ಇನ್ನೊಂದು ಹೆಸರು ಎನ್ನಬಹುದು. ಹೆದ್ದಾರಿ ಹೆಸರಿನಲ್ಲಿ ಸಾವಿರಾರು ಕೋಟಿ ರುಪಾಯಿಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.
ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಳಪೆ ಕಾಮಗಾರಿ ಮಾಡಲಾಗಿದೆ. ಎರಡು ಪಥದ ರಸ್ತೆ ಮಾಡೋಕೆ ಸಾವಿರಾರು ಕೋಟಿ ಹಣ ವ್ಯಯಿಸಲಾಗಿದೆ. ಬೇನಾಮಿಗಳಿಗೆ ಹಣ ನೀಡಿ ಲೂಟಿ ಮಾಡಲಾಗಿದೆ. ಆದರೆ, ಇದನ್ನು ಸಮರ್ಥಿಸಿಕೊಳ್ಳುವ ಭೂಪ ಅಂದರೆ ಪ್ರತಾಪ್ ಸಿಂಹ ಎಂದು ಕಿಡಿಕಾರಿದರು. ಈ ರಸ್ತೆಯಲ್ಲಿ ಒಬ್ಬರು ಇಬ್ಬರು ಹೋಗಲು ಆಗುವುದಿಲ್ಲ. ನಾವು ಲೋಕಲ್ ಜನ. ನಾವ್ಯಾಕೆ ಟೋಲ್ ಕಟ್ಟಿಓಡಾಡಬೇಕು. ರೈತರು ಎಕ್ಸ್ ಪ್ರೆಸ್ ವೇನಲ್ಲಿ ಓಡಾಡದೆ ಸರ್ವಿಸ್ ರಸ್ತೆಯಲ್ಲಿಯೇ ಓಡಾಡಬೇಕೆಂದು ಎಲ್ಲಿ ರೂಲ್ಸ್ ಇದೆ. ಡೈರೆಕ್ಟ್ ಮೈಸೂರು ಹೋಗುವವರಿಗೆ ಮಾತ್ರ ಟೋಲ್ ಪಡೆದುಕೊಳ್ಳಬೇಕು. ಹೆದ್ದಾರಿಯಲ್ಲಿನ ಅವ್ಯವಸ್ಥೆ ಸರಿಪಡಿಸುವವರೆಗೂ ಟೋಲ್ ಸಂಗ್ರಹ ಮಾಡಬಾರದೆಂದು ಮಂಜುನಾಥ್ ಒತ್ತಾಯಿಸಿದರು.
ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ಬಿಜೆಪಿ ಸಮಾವೇಶ ಮಾಡುವುದಿಲ್ಲ: ನಳಿನ್ ಕುಮಾರ್ ಕಟೀಲ್
ಪ್ರಧಾನಿಗಳು ಹೆದ್ದಾರಿ ಲೋಕಾರ್ಪಣೆ ಬದಲಿಗೆ ಟೋಲಾರ್ಪಾಣೆ ಮಾಡಿರಬೇಕು ಎಂದು ಜನ ಕೇಳುತ್ತಿದ್ದಾರೆ. ಸವೀರ್‍ಸ್ ರಸ್ತೆ ಓಪನ್ ಆಗಿಲ್ಲ. ಹೀಗಿದ್ದರೂ, ತರಾತುರಿಯಲ್ಲಿ ಟೋಲ್ ಸಂಗ್ರಹಣೆ ಮಾಡುತ್ತಿರುವ ಬಗ್ಗೆ ಜನ ಪ್ರಶ್ನೆ ಮಾಡುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಸ್ವಚ್ಛ ಭಾರತ್ ಅಂಥ ಬಿಜೆಪಿ ಹೇಳುತ್ತಿದೆ. ಆದರೆ, ಈ ಟೋಲ್ ರಸ್ತೆಯಲ್ಲಿ ಶೌಚಾಲಯ ಎಲ್ಲಿದೆ?.
-ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ