Asianet Suvarna News Asianet Suvarna News

Grama Vastavya: ಜಗ್ಗೇಶ್‌ ಹುಟ್ಟೂರಲ್ಲಿ ಸಚಿವ ಅಶೋಕ್‌ ಗ್ರಾಮ ವಾಸ್ತವ್ಯ

‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಭಾಗವಾಗಿ ಕಂದಾಯ ಸಚಿವ ಆರ್‌.ಅಶೋಕ್‌ ಅವರು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಹುಟ್ಟೂರು ತುಮಕೂರು ಜಿಲ್ಲೆಯ ಮಾಯಸಂದ್ರದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಮಾಡಿದರು.

minister r ashok grama vastavya in tumakuru district gvd
Author
Bangalore, First Published Jun 19, 2022, 10:54 AM IST

ತುರುವೇಕೆರೆ (ಜೂ.19): ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಭಾಗವಾಗಿ ಕಂದಾಯ ಸಚಿವ ಆರ್‌.ಅಶೋಕ್‌ ಅವರು ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್‌ ಹುಟ್ಟೂರು ತುಮಕೂರು ಜಿಲ್ಲೆಯ ಮಾಯಸಂದ್ರದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಮಾಡಿದರು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ ಆರ್‌.ಅಶೋಕ್‌ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಗ್ರಾಮ ದೇವತೆ ದೇಗುಲದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಾರ್ಯಕ್ರಮದ ವೇದಿಕೆವರೆಗೆ ಟ್ರ್ಯಾಕ್ಟರ್‌ನಲ್ಲಿ ಕರೆತರಲಾಯಿತು.

ಈ ವೇಳೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗ್ರಾಮ ವಾಸ್ತವ್ಯ ಎಂಬುದು ಒಂದು ಪಾಠಶಾಲೆ ಇದ್ದಂತೆ. ಪ್ರತಿಯೊಂದು ಗ್ರಾಮ ವಾಸ್ತವ್ಯದಲ್ಲಿ ಹತ್ತಾರು ವಿಷಯಗಳು ಮತ್ತು ಹತ್ತಾರು ಸಮಸ್ಯೆ ಬಗ್ಗೆ ಅರಿಯಲು ಸಾಧ್ಯವಾಗಲಿದೆ ಎಂದರು. ಗ್ರಾಮ ವಾಸ್ತವ್ಯ ಕೇವಲ ನನಗೊಬ್ಬನಿಗೆ ಮಾತ್ರ ಪಾಠವಲ್ಲ. ನನ್ನೊಂದಿಗೆ ಅಧಿಕಾರಿಗಳಿಗೂ ನಿಜ ಸ್ಥಿತಿಯ ಅರಿವಾಗಲಿದೆ. ಈ ಕಾರ್ಯಕ್ರಮದಿಂದ ಸಾವಿರಾರು ಜನರಿಗೆ ಅನುಕೂಲ ಆಗಿದೆ. ಇದು ಜನಸಾಮಾನ್ಯರ ಪರವಾದ ಕಾರ್ಯಕ್ರಮ. ಈವರೆಗೂ ಸಾಮಾನ್ಯ ಜನರು ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಿತ್ತು. ಆದರೆ ಇಂದು ಸರ್ಕಾರಿ ಆಡಳಿತ ವ್ಯವಸ್ಥೆಯೇ ಜನರ ಮುಂದೆ ಬಂದಿದೆ. ಇದು ನಿಜವಾದ ಬದಲಾವಣೆ ಎಂದು ಅಶೋಕ್‌ ಹೇಳಿದರು.

ಕಾಂಗ್ರೆಸ್‌, ಜೆಡಿಎಸ್‌ನ 10-12 ಶಾಸ​ಕರು ಬಿಜೆ​ಪಿಗೆ ಶೀಘ್ರ: ಅಶೋಕ್‌

ಆ್ಯಸಿಡ್‌ ದಾಳಿಗೆ ಒಳಗಾಗಿ ಜೀವನವೇ ನಶ್ವರ ಎಂಬ ಸ್ಥಿತಿಗೆ ಬಂದಿದ್ದವರ ಪಾಲಿಗೆ ಗ್ರಾಮ ವಾಸ್ತವ್ಯ ವರದಾನವಾಯಿತು. ಆ್ಯಸಿಡ್‌ ದಾಳಿಗೆ ತುತ್ತಾಗಿದ್ದವರಿಗೆ ಈವರೆಗೂ .3 ಸಾವಿರ ನೀಡಲಾಗುತ್ತಿತ್ತು. ಆದರೆ ಗ್ರಾಮ ವಾಸ್ತವ್ಯದ ಫಲಶೃತಿ ಎಂಬಂತೆ ತಮಗೆ ಆ್ಯಸಿಡ್‌ ದಾಳಿಗೆ ಒಳಗಾದವರ ನೇರ ದರ್ಶನವಾಯಿತು. ಅವರ ಜೀವನದ ಪ್ರಶ್ನೆ ನನ್ನ ಕಣ್ಣ ಮುಂದೆ ಕಾಡಿತು. ಆದ್ದರಿಂದ ತಾವು ಆ್ಯಸಿಡ್‌ ದಾಳಿಗೆ ತುತ್ತಾದವರಿಗೆ .10 ಸಾವಿರ ಮಾಸಿಕ ಪಿಂಚಣಿ ನೀಡುವ ಆದೇಶ ಹೊರಡಿಸಲು ಸಾಧ್ಯವಾಯಿತು ಎಂದರು.

ಹಲೋ ಕಂದಾಯ ಸಚಿವರೇ ಕಾರ್ಯಕ್ರಮವನ್ನು ಪ್ರಾರಂಭಿಸಿ ಕೇವಲ 30 ದಿನಗಳು ಆಗಿವೆ. ಇದರ ಫಲವಾಗಿ ಸುಮಾರು 5159 ಮಂದಿಗೆ ವಿವಿಧ ಸವಲತ್ತುಗಳು ಅವರ ಮನೆ ಬಾಗಿಲಿಗೆ ತಲುಪಿದೆ ಎಂದು ತಿಳಿಸಿದ ಅವರು, ಮುಂಬರುವ ದಿನಗಳಲ್ಲಿ ಹಟ್ಟಿಗಳನ್ನು ಗ್ರಾಮಗಳನ್ನಾಗಿ ಮಾರ್ಪಡಿಸುವ ಯೋಜನೆ ಇದೆ ಎಂದರು.

ಆಶ್ರಮ ಶಾಲೆಯಲ್ಲಿ ವಾಸ್ತವ್ಯ: ವೇದಿಕೆ ಕಾರ್ಯಕ್ರಮ, ಸವಲತ್ತು ವಿತರಣೆ ಬಳಿಕ ಗ್ರಾಮಸ್ಥರ ಅಹವಾಲು ಆಲಿಸಿದ ಸಚಿವ ಅಶೋಕ್‌ ಅವರು ಗ್ರಾಮದ ಕಲ್ಪತರು ಆಶ್ರಮದ ಬಾಲಕರ ವಸತಿ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಹೂಡಿದರು.

ಆರ್. ಅಶೋಕ್ ಗ್ರಾಮ ವಾಸ್ತವ್ಯ: ಇಂದು - ನಾಳೆ ಸಾರ್ವಜನಿಕರ ಸಮಸ್ಯೆ ಆಲಿಸಲಿರುವ ಸಚಿವರು

ಸಂಸದರಾಗುವ ಜಗ್ಗೇಶ್‌ ಬಯಕೆ ಈಡೇರಿತು: ರಾಜ್ಯಸಭಾ ಸದಸ್ಯ ಜಗ್ಗೇಶ್‌ ಅವರ ಕೋರಿಕೆಯಂತೆ ಅವರ ಊರಾದ ಮಾಯಸಂದ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ. ಜಗ್ಗೇಶ್‌ ಅವರು ರಾಜ್ಯಸಭಾ ಸದಸ್ಯರಾಗಲು ರಾಘವೇಂದ್ರ ಸ್ವಾಮಿ ಕೃಪಾಕಟಾಕ್ಷ ಇದೆ ಎಂಬುದು ನಿಜ. ಅವರನ್ನು ಎಂಎಲ್ಸಿ ಮಾಡಿ ರಾಜ್ಯದಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸಿದ್ವಿ. ಆದರೆ ದೇವರನ್ನು ಅವರಿಗೆ ಉನ್ನತ ಹುದ್ದೆ ಕೊಟ್ಟರು. ಈ ಹಿಂದೆ ಅವರೊಂದು ಬಾರಿ ಸಂಸದನಾಗಬೇಕೆಂದು ನನ್ನ ಬಳಿ ಹೇಳಿಕೊಂಡಿದ್ದರು. ಇದೀಗ ಅಂದುಕೊಂಡಂತೆ ಸಂಸದರಾಗಿದ್ದಾರೆ ಎಂದರು.

Follow Us:
Download App:
  • android
  • ios