ಕಾಂಗ್ರೆಸ್, ಜೆಡಿಎಸ್‌ನ 10-12 ಶಾಸಕರು ಬಿಜೆಪಿಗೆ ಶೀಘ್ರ: ಅಶೋಕ್
* ಹಳೇ ಮೈಸೂರು ಭಾಗದ 10-12 ಶಾಸಕರು ಬಿಜೆಪಿಗೆ ಶೀಘ್ರ
* ಮೊದಲ ಕಂತಿನಲ್ಲಿ ಕೆಲವಷ್ಟು ಮುಖಂಡರು ಬಂದಿದ್ದಾರೆ
* ಇನ್ನೊಂದು ಕಂತಿನಲ್ಲಿ ಮತ್ತಷ್ಟು ಶಾಸಕರನ್ನು ಕರೆ ತರಲು ತಯಾರಿ ನಡೆಯುತ್ತಿದೆ
ತುಮಕೂರು(ಜೂ.19): ಹಳೇ ಮೈಸೂರು ಪ್ರಾಂತ್ಯದ ಕಾಂಗ್ರೆಸ್, ಜೆಡಿಎಸ್‌ನ 10 ರಿಂದ 12 ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ತುರುವೇಕೆರೆ ತಾಲೂಕು ಮಾಯಸಂದ್ರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಈಗ ಶಕ್ತಿಶಾಲಿ ಆಗುತ್ತಿದ್ದು, ಈ ಭಾಗದ ಬಹಳಷ್ಟು ಜನ ಬಿಜೆಪಿಗೆ ಬರುತ್ತಿದ್ದಾರೆ ಎಂದರು.
TUMAKURU: ಆರ್. ಅಶೋಕ್ ಗ್ರಾಮ ವಾಸ್ತವ್ಯ: ಇಂದು - ನಾಳೆ ಸಾರ್ವಜನಿಕರ ಸಮಸ್ಯೆ ಆಲಿಸಲಿರುವ ಸಚಿವರು
ಮೊದಲ ಕಂತಿನಲ್ಲಿ ಕೆಲವಷ್ಟು ಮುಖಂಡರು ಬಂದಿದ್ದಾರೆ. ಈ ಭಾಗದಲ್ಲಿ ಹೆಚ್ಚಿನ ಶಾಸಕರು ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ಮಾಡುತ್ತಿದ್ದೇವೆ ಎಂದ ಅವರು, ಇನ್ನೊಂದು ಕಂತಿನಲ್ಲಿ ಮತ್ತಷ್ಟು ಶಾಸಕರನ್ನು ಕರೆ ತರಲು ತಯಾರಿ ನಡೆಯುತ್ತಿದೆ ಎಂದರು. ರಾಜ್ಯಸಭಾ ಚುನಾವಣೆಯಲ್ಲಿ ಯಾರಾರಯರು ಯಾರಿಗೆ ಮತ ಹಾಕಿದ್ದಾರೆ ಅನ್ನೋದು ಗೊತ್ತು. ಇದು ಕೇವಲ ಟ್ರೈಲರ್ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ ಎಂದರು. ರಾಜ್ಯದಲ್ಲಿ ಮೋದಿ, ಬೊಮ್ಮಾಯಿ, ಯಡಿಯೂರಪ್ಪನವರ ಆಶೀರ್ವಾದದಿಂದ ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಬಾವುಟ ಹಾರಿಸುತ್ತದೆ ಎಂದು ಇದೇ ವೇಳೆ ತಿಳಿಸಿದರು.