ಧಾರವಾಡಕ್ಕೆ ಐಐಐಟಿ ಬೇಡ ಎಂದು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ  ಈಗ ಅದನ್ನು ತಾವೇ ತಂದಿದ್ದು ಎಂದು ಹೇಳಿಕೊಳ್ಳುತ್ತಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ ಹೇಳಿಕೆ

 ಹುಬ್ಬಳ್ಳಿ (ಆ.30): ಧಾರವಾಡಕ್ಕೆ ಐಐಐಟಿ ಬೇಡ ಎಂದು ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಈಗ ಅದನ್ನು ತಾವೇ ತಂದಿದ್ದು ಎಂದು ಹೇಳಿಕೊಳ್ಳುತ್ತಾರೆ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು. 

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಗೊತ್ತಿದ್ದೇ ಕಾಂಗ್ರೆಸ್‌ ಮುಖಂಡರು ಆಕಾಶದಿಂದ ಚಂದ್ರನನ್ನು ತಂದು ಕೊಡುತ್ತೇನೆ ಎನ್ನುವ ಭರವಸೆ ನೀಡುತ್ತಿದ್ದಾರೆ. ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತಾಗುತ್ತಿದೆ ಎಂದು ವ್ಯಂಗ್ಯವಾಡಿದರು.

ಜಾತಿಗಣತಿ ಮಾಹಿತಿ ಸೋರಿಕೆ ಆಗಿದ್ದರೆ ಬೊಮ್ಮಾಯಿ ತನಿಖೆ ಮಾಡಲಿ: ಸಿದ್ದು

ಧಾರವಾಡಕ್ಕೆ 2013ರಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್‌ಗೆ ನಿರಂತರ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಾಗಿರಲಿಲ್ಲ. ಆನಂತರ ಬಿಜೆಪಿ ಅನುಷ್ಠಾನ ಮಾಡಿ, ಇದೀಗ ಎಲ್ಲ ವಾರ್ಡ್‌ಗಳಿಗೂ ವಿಸ್ತರಿಸಲಾಗುತ್ತಿದೆ.

 ಬಿಜೆಪಿ ಆಡಳಿತದಲ್ಲಿ ಇದ್ದಾಗಲೇ ಮಹತ್ವದ ಯೋಜನೆಗಳು ಮಹಾನಗರದಲ್ಲಿ ಅನುಷ್ಠಾನಗೊಂಡಿವೆ. ನೈಋುತ್ಯ ರೈಲ್ವೆ ವಲಯ, ಐಐಐಟಿ, ಬಿಆರ್‌ಟಿಎಸ್‌, ಸ್ಮಾರ್ಟ್‌ಸಿಟಿ ಹೀಗೆ ಅನೇಕ ಪ್ರಮುಖ ಯೋಜನೆ ಬಿಜೆಪಿ ಕೊಡುಗೆ ಎಂದರು.