Asianet Suvarna News Asianet Suvarna News

2 ತಿಂಗಳ ಗೃಹಲಕ್ಷ್ಮೀ ಬಾಕಿ ಒಂದೇ ಬಾರಿ ಖಾತೆಗೆ ಜಮೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌

ಗೃಹಲಕ್ಷ್ಮೀ ಯೋಜನೆ ನಿತ್ಯ, ಸತ್ಯ, ನಿರಂತರವಾದುದು. ಕಳೆದ 2 ತಿಂಗಳಿನ ಬಾಕಿ ಹಣವನ್ನು ಒಂದೇ ಬಾರಿ ಖಾತೆಗೆ ಜಮಾ ಮಾಡಲಾಗುವುದು. ಲಿಂಗತ್ವ ಅಲ್ಪಸಂಖ್ಯಾತರಿಗೆ 3 ತಿಂಗಳ ಹಿಂದಷ್ಟೇ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಅವರಿಗೂ ಸಹ ಒಮ್ಮೆಲೇ ಹಣ ಪಾವತಿಯಾಗಲಿದೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ 

Minister Lakshmi Hebbalkar Talks Over Gruha Lakshmi scheme grg
Author
First Published Sep 17, 2024, 6:30 AM IST | Last Updated Sep 17, 2024, 6:30 AM IST

ಬೆಂಗಳೂರು(ಸೆ.17): ಮಹಿಳೆಯರಿಗೆ ಪ್ರತಿ ತಿಂಗಳೂ 2 ಸಾವಿರ ರು. ಪಾವತಿಸುವ 'ಗೃಹ ಲಕ್ಷ್ಮೀ' ಯೋಜನೆ ಎಂದಿಗೂ ಬಂದ್ ಆಗುವುದಿಲ್ಲ. ಇದು ನಿತ್ಯ, ಸತ್ಯ, ನಿರಂತರ ವಾಗಿದೆ. ಬಾಕಿ ಇರುವ 2 ತಿಂಗಳ ಹಣ ಒಂದೇ ಸಲ ಖಾತೆಗೆ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್‌ ಸ್ಪಷ್ಟಪಡಿಸಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆ ನಿತ್ಯ, ಸತ್ಯ, ನಿರಂತರವಾದುದು. ಕಳೆದ 2 ತಿಂಗಳಿನ ಬಾಕಿ ಹಣವನ್ನು ಒಂದೇ ಬಾರಿ ಖಾತೆಗೆ ಜಮಾ ಮಾಡಲಾಗುವುದು. ಲಿಂಗತ್ವ ಅಲ್ಪಸಂಖ್ಯಾತರಿಗೆ 3 ತಿಂಗಳ ಹಿಂದಷ್ಟೇ ಅರ್ಜಿ ಹಾಕಲು ಅವಕಾಶ ನೀಡಲಾಗಿತ್ತು. ಅವರಿಗೂ ಸಹ ಒಮ್ಮೆಲೇ ಹಣ ಪಾವತಿಯಾಗಲಿದೆ ಎಂದು ವಿವರಿಸಿದರು. 

ಬಡವರ ಪಾಲಿಗೆ ನಂದಾದೀಪವಾದ ಗೃಹಲಕ್ಷ್ಮೀ ಯೋಜನೆ: ಡಿಸಿಎಂ ಡಿ.ಕೆ.ಶಿವಕುಮಾರ್‌ ವಿಶೇಷ ಲೇಖನ

ಇದೇ ವೇಳೆ ಅಂಗನವಾಡಿಯಲ್ಲಿ ಅ.1ರಿಂದಲೇ ಗಟ್ಟಿ ಬೆಲ್ಲ ನೀಡಲಾಗುವುದು ಎಂದು ಹೇಳಿದರು. 

Latest Videos
Follow Us:
Download App:
  • android
  • ios