Asianet Suvarna News Asianet Suvarna News

K S Eshwarappa ವಿಶ್ವಸಂಸ್ಥೆ ಬಂದ್ರೂ ಬೆಂಗ್ಳೂರನ್ನು ರಿಪೇರಿ ಮಾಡೋದು ಸಾಧ್ಯವಿಲ್ಲ

- ಮಹಾನಗರ ಅವ್ಯವಸ್ಥೆಯ ತಾಣ

- ಎಲ್ಲೆಲ್ಲೋ ಮನೆಗಳ ನಿರ್ಮಾಣ

- ಇದನ್ನು ಸರಿಪಡಿಸುವ ಉದ್ದೇಶದದಿಂದ ಸಂಪುಟ ಉಪ ಸಮಿತಿ ರಚನೆ
 

Minister ks eshwarappa says even united nations cant repair bengaluru san
Author
Bengaluru, First Published Mar 12, 2022, 4:45 AM IST

ಬೆಂಗಳೂರು (ಮಾ. 12):  ಖುದ್ದಾಗಿ ವಿಶ್ವಸಂಸ್ಥೆಯೇ (United Nations) ಬಂದರೂ ಬೆಂಗಳೂರನ್ನು (Bengaluru) ರಿಪೇರಿ  ಮಾಡಲು ಸಾಧ್ಯವಿಲ್ಲ. ಈ ಮಹಾನಗರ ಅಷ್ಟೊಂದು ಅವ್ಯವಸ್ಥೆಯಿಂದ ಕೂಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ (Rural Development and Panchayat Raj Minister ) ಕೆ.ಎಸ್‌.ಈಶ್ವರಪ್ಪ ( K S Eshwarappa  )ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ ( Congress ) ಸದಸ್ಯ ಪಿ.ಆರ್‌. ರಮೇಶ್‌ ( PR Ramesh ) ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ ಎಲ್ಲೆಲ್ಲೋ ಮನೆ ನಿರ್ಮಾಣ ಆಗಿದೆ. ಅದನ್ನು ಸರಿಪಡಿಸುವ ಉದ್ದೇಶದಿಂದ ಸಂಪುಟ ಉಪ ಸಮಿತಿ ( Cabinet Sub Commite ) ರಚಿಸಲಾಗಿದೆ. ಕೊಳಚೆ ನೀರು ಕೆರೆಗಳಿಗೆ ಹೋಗದಂತೆ ಕ್ರಮಕೈಗೊಳ್ಳುತ್ತಿದ್ದು 554 ಕೆರೆಗಳ ಅಭಿವೃದ್ಧಿಗೆ ಯೋಜನಾ ವರದಿ ಸಿದ್ಧಪಡಿಸುತ್ತಿದ್ದೇವೆ ಎಂದರು.

ಬೆಂಗಳೂರು ನಗರ ( Bengaluru City ) ಜಿಲ್ಲೆ ವ್ಯಾಪ್ತಿಯಲ್ಲಿನ 86 ಗ್ರಾಮ ಪಂಚಾಯತಿಗಳಲ್ಲಿ ಭೂ ಪರಿವರ್ತನೆಯಾದ ಜಮೀನುಗಳಲ್ಲಿ 1306 ಬಡಾವಣೆಗಳು ನಿರ್ಮಾಣವಾಗಿವೆ. ಸರ್ಕಾರದಿಂದ ಅಥವಾ ಸರ್ಕಾರಿ ಸಂಸ್ಥೆಗಳಿಂದ, ಯೋಜನಾ ಪ್ರಾಧಿಕಾರಗಳಿಂದ ಅನುಮತಿ ಪಡೆದು ನಿರ್ಮಾಣವಾದ ವಸತಿ ಸಮುಚ್ಛಯಗಳು ಮತ್ತು ಬಡಾವಣೆಗಳ ಸಂಖ್ಯೆ 970. ಗ್ರಾಮ ಪಂಚಾಯತಿ ಆಡಳಿತ ಸುಪರ್ದಿಗೆ ಅಧಿಕೃತವಾಗಿ 336 ಬಡಾವಣೆಗಳನ್ನು ಬಿಟ್ಟುಕೊಡಲಾಗಿದೆ. ಗ್ರಾಮ ಪಂಚಾಯಿತಿಗಳು ( Grama Panchayat )  ಈ ಬಡಾವಣೆಗಳಲ್ಲಿ ನಾಗರೀಕ ಮೂಲಸೌಲಭ್ಯಗಳ ನಿರ್ವಹಣೆ ಮಾಡುತ್ತಿವೆ ಎಂದು ತಿಳಿಸಿದರು.

ಆವಲಹಳ್ಳಿಯಲ್ಲಿ 40, ದೊಡ್ಡಗುಬ್ಬಿ 25, ಹಾಲನಾಯಕನಹಳ್ಳಿ 10, ಕಣ್ಣೂರು 23, ಮಂಡೂರು 20, ಬನ್ನೇರುಘಟ್ಟ5, ಬಿದರಗುಪ್ಪೆ 3, ಮಂಟಪ 54, ಮಾಯಸಂದ್ರ 20, ಸರ್ಜಾಪುರ 28, ಶಾಂತಿಪುರ 20, ಹುಸ್ಕೂರು 25, ಕಡಬಗೆರೆ 20, ಹುಲಿ ಮಂಗಲ 17 ಸೇರಿದಂತೆ ಒಟ್ಟು ಅನಧಿಕೃತ ವಸತಿ ಸಮುಚ್ಛಯಗಳು ಅಥವಾ ಬಡಾವಣೆಗಳು 336 ಇವೆ. 2013 ಜೂನ್‌ 14ಕ್ಕೂ ಮೊದಲು ಒಂದು ಬಾರಿ ಕ್ರಮವಾಗಿರುವ ಕ್ರಮಬದ್ಧವಲ್ಲದ ನಿವೇಶನಗಳು ಮತ್ತು ವಿದ್ಯುಚ್ಛಕ್ತಿ ಬಿಲ್‌ ಹೊಂದಿರುವ ಕಟ್ಟಡಗಳಿಂದ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಭಾಗದ ಆಸ್ತಿಗಳ ತಂತ್ರಾಂಶ ಇ-ಸ್ವತ್ತು( E-Swattu)  ಹಾಗೂ ನಗರ ಆಸ್ತಿಗಳ ತಂತ್ರಾಂಶ ಇ-ಆಸ್ತಿ ( E-Aasti ) ಈ ಎರಡು ತಂತ್ರಾಂಶಗಳ ಅನುಷ್ಠಾನದಿಂದ ಉಂಟಾಗುತ್ತಿರುವ ಸಮಸ್ಯೆಗಳ ಕುರಿತು ಪರಿಶೀಲಿಸಿ ಪರಿಹಾರಗಳನ್ನು ಕಂಡು ಕೊಳ್ಳುವ ಉದ್ದೇಶದಿಂದ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ಶಿಫಾರಸುಗಳು ಬಂದ ನಂತರ ತೆರಿಗೆ ವಸೂಲಾತಿಗೆ ಕ್ರಮಕೈಗೊಳ್ಳುವುದಾಗಿ ಹೇಳಿದರು.

ಇಬ್ರಾಹಿಂ ನಿವಾಸಕ್ಕೆ ಸಿದ್ದು ಹೋಗ್ಲಿಲ್ಲ, ಬಿರಿಯಾನಿ ತಿನ್ಲಿಲ್ಲ, ರಾಜೀನಾಮೆಗೆ ಮುಹೂರ್ತ ಫಿಕ್ಸ್
ವಸತಿಶಾಲೆ ಕನ್ನಡ ಶಿಕ್ಷಕರ ಪರಿಷ್ಕೃತ ಪಟ್ಟಿಬಿಡುಗಡೆ
ಬೆಂಗಳೂರು
: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ಮೊರಾರ್ಜಿ ದೇಸಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಖಾಲಿಯಿದ್ದ ಕನ್ನಡ ಭಾಷಾ ಶಿಕ್ಷಕರ ನೇಮಕಕ್ಕೆ ಸಂಬಂಧಿಸಿದಂತೆ ಪರಿಷ್ಕೃತ ಆಯ್ಕೆ ಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಬಿಡುಗಡೆ ಮಾಡಿದೆ.

ದತ್ತಾತ್ರೇಯನ ದರ್ಶನ ಪಡೆದು ವಾಪಸ್​​ ಆಗ್ತಿದ್ದವರು, ನಿಶ್ಚಿತಾರ್ಥಕ್ಕೆ ಹೊರಟಿದ್ದವರು, ಒಟ್ಟು 9 ಜನ ಮಸಣಕ್ಕೆ
ಕಲ್ಯಾಣ ಕರ್ನಾಟಕ ಸೇರಿದಂತೆ ಒಟ್ಟು 253 ಹುದ್ದೆಗಳ ನೇಮಕ್ಕೆ 2017ರ ಜೂ.23ರಂದು ಅಧಿಸೂಚನೆ ಹೊರಡಿಸಲಾಗಿತ್ತು. 2019ರ ಜು.31ರಂದು ಅಂತಿಮ ಪಟ್ಟಿಬಿಡುಗಡೆ ಮಾಡಲಾಗಿತ್ತು. ಆದರೆ, ಅಧಿಸೂಚನೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಪರಿಣಾಮ ಅಂತಿಮ ಪಟ್ಟಿಹಿಂಪಡೆಯಲಾಗಿತ್ತು. ವಿಚಾರಣೆ ಪೂರ್ಣಗೊಂಡು ಆದೇಶ ಹೊರಬಂದಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಪಟ್ಟಿಬಿಡುಗಡೆ ಮಾಡಿರುವುದಾಗಿ ಕೆಪಿಎಸ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.

Follow Us:
Download App:
  • android
  • ios