'ಪ್ರಪಂಚದಲ್ಲೇ ಆಗದ ಒಳ್ಳೆ ಕೆಲಸ ಪ್ರಧಾನಿ ಮೋದಿಯಿಂದಾಗಿದೆ'

  •  ರಾಜ್ಯದಲ್ಲಿ ಕಾಂಗ್ರೆಸ್ ವಿಪಕ್ಷವಾಗಿರಲು ವಿಫಲವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ 
  • ಲಸಿಕೆ ತೆಗೆದುಕೊಳ್ಳಬೇಡಿ ಎಂದು ಇಡೀ ದೇಶದಲ್ಲಿ ಸಾರಿದವರೇ ಕಾಂಗ್ರೆಸ್ಸಿಗರು
  • ಪ್ರಪಂಚದಲ್ಲಿ ಆಗದೇ ಇರುವ ಒಳ್ಳೆ ಕೆಲಸಗಳನ್ನು ನರೇಂದ್ರ ಮೋದಿ ಮಾಡಿದ್ದಾರೆಂದ ಈಶ್ವರಪ್ಪ
Minister KS Eshwarappa Praises PM Modi On Free vaccination Program snr

ಶಿವಮೊಗ್ಗ (ಜೂ.11):  ರಾಜ್ಯದಲ್ಲಿ ಕಾಂಗ್ರೆಸ್ ವಿಪಕ್ಷವಾಗಿರಲು ವಿಫಲವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಶಿವಮೊಗ್ಗದಲ್ಲಿಂದು ಮಾತನಾಡಿದ ಸಚಿವ ಕೆಎಸ್ ಈಶ್ವರಪ್ಪ ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ವಿಪಕ್ಷವಾಗಿರಲು ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಕೊಂಚ ಏರಿದ್ರೂ ಮತ್ತೆ ಲಾಕ್‌ಡೌನ್ : 2 ಡೋಸ್ ಪಡೆಯೋವರೆಗೆ ಎಚ್ಚರಿಕೆ ವಹಿಸಿ

ಸಿದ್ಧರಾಮಯ್ಯಗೆ ಬುದ್ಧಿ ಇಲ್ಲ. ಲಸಿಕೆ ತೆಗೆದುಕೊಳ್ಳಬೇಡಿ ಎಂದು ಇಡೀ ದೇಶದಲ್ಲಿ ಸಾರಿದವರೇ ಕಾಂಗ್ರೆಸ್ಸಿಗರು. ಈಗ ಲಸಿಕೆ ಸಿಗುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ದೇಶದಲ್ಲಿ, ಇಡೀ ಪ್ರಪಂಚದಲ್ಲಿ ಆಗದೇ ಇರುವ ಒಳ್ಳೆ ಕೆಲಸಗಳನ್ನು ನರೇಂದ್ರ ಮೋದಿ ಮಾಡಿದ್ದಾರೆ. ಇಡೀ ದೇಶದ ಜನರಿಗೆ ಲಸಿಕೆ ತೆಗೆದುಕೊಳ್ಳಿ ಎಂದು ಮೋದಿ ಹೇಳಿದ್ದರು. ಆದರೆ ಕಾಂಗ್ರೆಸ್ ನಾಯಕರು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದರು ಎಂದು ವಾಗ್ದಾಳಿ ನಡೆಸಿದರು.

ಕೋವ್ಯಾ​ಕ್ಸಿನ್‌, ಕೋವಿ​ಶೀ​ಲ್ಡ್‌ ಪಡೆ​ದಿದ್ದ​ರೂ ​‘ಡೆಲ್ಟಾ’ ದಾಳಿ: ಏಮ್ಸ್‌ ವರ​ದಿ! ...

ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಇಡೀ ದೇಶದೆಲ್ಲೆಡೆ ಸಾರಿದರು. ಅದು ಮೋದಿ ಮತ್ತು ಬಿಜೆಪಿ ಲಸಿಕೆ ಎಂದು ಜನರ ದಿಕ್ಕು ತಪ್ಪಿಸಿದ್ದರು. ಈಗ ಲಸಿಕೆ ಸಂಬಂಧ, ಮತ್ತೆ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇಡೀ ದೇಶದ ಜನರಿಗೆ ಉಚಿತವಾಗಿ ಲಸಿಕೆ ನೀಡುತ್ತೆವೆ ಎಂದು ಹೇಳಿದ್ದ ಏಕೈಕ ವ್ಯಕ್ತಿ ನರೇಂದ್ರ ಮೋದಿ. ನವೆಂಬರ್ ವರೆಗೂ ರೇಷನ್ ಜೊತೆಗೆ ವ್ಯಾಕ್ಸಿನ್ ಕೂಡ ಉಚಿತ ಎಂದು ಮೋದಿಯವರು ಹೇಳಿದ್ದಾರೆ ಎಂದರು.

ತೈಲ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ನಾವು ಕೂಡ ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ನವರು ಪ್ರತಿಭಟಿಸುತ್ತಿದ್ದಾರೆ.  ಇಲ್ಲವಾದರೆ ಕಾಂಗ್ರೆಸ್ ಸತ್ತೋಗಿದೆ ಎಂದು ಜನರು ತಿಳಿದುಕೊಳ್ಳುತ್ತಾರೆ. ಮಾಡಲಿ ಬಿಡಿ ಪಾಪ ಎಂದು ಕಾಂಗ್ರೆಸ್ ಪ್ರತಿಭಟನೆಗೆ ತಿರುಗೇಟು ನೀಡಿದರು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios