ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮತದಾರರ ಪಟ್ಟಿಯಿಂದ ಹೆಸರುಗಳನ್ನು ವ್ಯವಸ್ಥಿತವಾಗಿ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದಾರೆ. 2021 ರ ಚುನಾವಣೆಯಲ್ಲಿ ತಮ್ಮ ಹೆಸರನ್ನೂ ಕೈಬಿಡಲಾಗಿತ್ತು ಎಂದು ತಿಳಿಸಿದ್ದಾರೆ.

ಹಾಸನ (ಆ.16): ದೇಶದಲ್ಲಿ ಮತಗಳ್ಳತನ ಆಗಿರುವುದು ನಿಜ. ಈ ಸಂಬಂಧ ವಿಧಾನಸಭೆಯಲ್ಲೂ ಚರ್ಚೆ ಆಗಿದೆ. ವ್ಯವಸ್ಥಿತವಾಗಿ ಒಂದು ಸಮುದಾಯದ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 2021ರ ಚುನಾವಣೆ ವೇಳೆ ಮತಪಟ್ಟಿಯಿಂದ ನನ್ನ ಹೆಸರನ್ನೇ ಕೈಬಿಡಲಾಗಿತ್ತು. ಮುಖ್ಯ ಚುನಾವಣಾಧಿಕಾರಿಯೊಂದಿಗೆ ಮಾತನಾಡಿದ ನಂತರ ನನ್ನ ಹೆಸರನ್ನು ಸೇರಿಸಲಾಯಿತು. ಚುನಾವಣಾ ಆಯೋಗ ಹೀಗೆ ಕೆಲಸ ಮಾಡಿದರೆ ಹೇಗೆ? ಬಿಜೆಪಿ ಏಜೆಂಟಂತೆ ವರ್ತಿಸುತ್ತಿರುವುದು ಸರಿಯಲ್ಲ ಎಂದು ದೂರಿದರು. 

ಇದನ್ನೂ ಓದಿ: Krishna Byregowda: ಹಾಡಿ, ಹಟ್ಟಿಯನ್ನೂ ಕಂದಾಯ ಗ್ರಾಮವಾಗಿಸಿ: ಸಚಿವ ಕೃಷ್ಣಬೈರೇಗೌಡ

ಧರ್ಮಸ್ಥಳದ ಉತ್ಖನನ ವಿಚಾರವಾಗಿ ಡಿಸಿಎಂ ಶಿವಕುಮಾರ್‌ ಅವರು ನೀಡಿರುವ ಹೇಳಿಕೆ ಕುರಿತು ನನಗೆ ಗೊತ್ತಿಲ್ಲ. ಎಸ್‌ಐಟಿಯವರು ಈವರೆಗೂ ಉತ್ತಮವಾಗಿ ಕೆಲಸ ಮಾಡಿದ್ದು, ಯಾರೇ ತಪ್ಪು ಮಾಡಿದ್ದರೂ ಕ್ರಮ ಆಗಲಿದೆ ಎಂದರು. ಇಲ್ಲವಾದರೆ ಪ್ರಕರಣ ಖುಲಾಸೆ ಆಗುತ್ತದೆ ಎಂದರು.