ಬರ ಪರಿಹಾರದ ಬಗ್ಗೆ ಅಧಿಕೃತ ಪತ್ರ ಬಂದಿಲ್ಲ, ಕೇಳಿದ್ದಷ್ಟು ಸಿಕ್ಕಿಲ್ಲ: ಸಚಿವ ಕೃಷ್ಣ ಬೈರೇಗೌಡ ಆಕ್ರೋಶ
ರಾಜ್ಯ ಸರ್ಕಾರಕ್ಕೆ ಹಣ ಬಿಡುಗಡೆಯ ಬಗ್ಗೆ ಅಧಿಕೃತ ಪತ್ರ ಬಂದಿಲ್ಲ. ಸಾಮಾಜಿಕ ಜಾಲತಾಣ ಮೂಲಕ ನಮಗೆ ತಿಳಿದದ್ದು. ಇದು ಅವರೇ ವೈಯಲೇಷನ್ ಮಾಡಿದ್ದರೆ. ಈಗ ಅಧಿಕೃತ ಬರುತ್ತೆ ಎಂಬ ನೀರಿಕ್ಷೆಯಲ್ಲಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಬೆಂಗಳೂರು (ಏ.27): ರಾಜ್ಯ ಸರ್ಕಾರದ ಹೋರಾಟಕ್ಕೆ ಜಯಕ್ಕೆ ಜಯ ಸಿಕ್ಕಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3455 ಕೋಟಿ ರೂಪಾಯಿಗಳ ಬರ ಪರಿಹಾರ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ 18,174 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಕೆ ಮಾಡಿತ್ತು.
ಈ ಸಂಬಂಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಧ್ಯಮಗೋಷ್ಠಿ ನಡೆಸಿದ್ದು ಹಣ ಬಿಡುಗಡೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ರೆ ನಮಗೆ ಅಧಿಕೃತವಾಗಿ ಯಾವುದೇ ಪತ್ರ ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪತ್ರ ಹರಿದಾಡಿದ್ದರಿಂದ ನಾವು ಕೇಂದ್ರ ಅಧಿಕಾರಿಗಳನ್ನ ಸಂಪರ್ಕ ಮಾಡಿದೆವು. ನಮ್ಮ ಅಧಿಕಾರಿಗಳು ಕೇಂದ್ರ ಸರ್ಕಾರ ಜೊತೆ ಸಂಪರ್ಕ ಮಾಡಿ ವಿಚಾರಣೆ ಮಾಡಿದಾಗ ಕೇಂದ್ರಿಂದ ಬಿಡುಗಡೆ ಆಗಿದೆ ಎಂದಿದ್ದಾರೆ. ಆದ್ರೆ ನಮಗೆ ಇನ್ನೂ ಅಧಿಕೃತವಾಗಿ ಲೆಟರ್ ಸಿಕ್ಕಿಲ್ಲ. ಹೀಗಾಗಿ ಅಧಿಕೃತ ಪತ್ರದ ನೀರಿಕ್ಷೆಯಲ್ಲಿದ್ದೇವೆ ಎಂದಿದ್ದಾರೆ.
Karnataka drought relief ರಾಜ್ಯ ಕೇಳಿದ್ದು 18 ಸಾವಿರ ಕೋಟಿ, ಕೇಂದ್ರ ಬಿಡುಗಡೆ ಮಾಡಿದ್ದು 3 ಸಾವಿರ ಕೋಟಿ
ನಾವು 18,172 ಕೋಟಿ ರೂ.ಗೆ ಮನವಿ ಸಲ್ಲಿಸಿದ್ದೆವು. 223 ತಾಲೂಕುಗಳನ್ನು ತೀವ್ರ ಬರಗಾಲ ಅಂತ ಘೋಷಣೆ ಮಾಡಿದ್ದೇವೆ. ಈಗ ಕೇಂದ್ರ 3,454 ಕೋಟಿ ರೂ. ಕೊಟ್ಟಿದೆ. ಇದು ಬಹಳ ಅಲ್ಪ ಮೊತ್ತ. ಕೇಂದ್ರ ಕರ್ನಾಟಕದ ಮೇಲೆ ಮಲತಾಯಿ ಧೋರಣೆ ನೀತಿ ನಡೆಸುತ್ತಿದೆ. ಕರ್ನಾಟಕಕ್ಕೆ ಮತ್ತೆ ಅನ್ಯಾಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ನಾವು ಕೇಂದ್ರವನ್ನು ಮನವಿ ಮಾಡಿದ್ದೇವೆ. ನವೆಂಬರ್ ತಿಂಗಳಿನಲ್ಲಿ ಕೇಂದ್ರದ ತಂಡ ಆಗಮಿಸಿತ್ತು. ಈವರೆಗೆ ಕೇಂದ್ರ ಗೃಹ ಸಚಿವರು ತಡ ಮಾಡುತ್ತಾ ಬಂದಿದ್ದರು. ಅವರ ಬಳಿ ಸಮಯ ಇದ್ದಾಗ ರಾಜ್ಯಕ್ಕೆ ಪರ ಪರಿಹಾರ ಬಿಡುಗಡೆ ಬಗ್ಗೆ ಅವಕಾಶ ತೆಗೆದುಕೊಂಡಿಲ್ಲ. ನಾಲ್ಕು ತಿಂಗಳು ನಾವು ನೀಡಿದ ಪತ್ರದ ಮೇಲೆ ಕೂತಿದ್ದರು. ಕರ್ನಾಟಕದ ಹಕ್ಕಿಗೆ ಯಾವುದೇ ಬೆಲೆಯನ್ನೂ ಕೊಡಲಿಲ್ಲ. ಅವರ ಕೈನಲ್ಲಿ ತೀರ್ಮಾನ ಇದ್ದಾಗ ರಾಜ್ಯಕ್ಕೆ ಕೊಡಬಾರದು ಅನ್ನೋ ಧೋರಣೆ ಹೊಂದಿದ್ದರು.
ಮತದಾರರಿಗೆ ಹಣ, ಗಿಫ್ಟ್ ಕೊಡುವವರೇ ರಣಹೇಡಿಗಳು: ಡಿಕೆಶಿ ವಿರುದ್ಧ ಗುಡುಗಿದ ಎಚ್‌ಡಿಕೆ
ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಹಣ ಬಿಡುಗಡೆ ಮಾಡಬೇಕಿತ್ತು. ಬಿಡುಗಡೆ ಮಾಡದ ಕಾರಣ ನಾವು ಕೇಂದ್ರದ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಅನಿವಾರ್ಯತೆ ಎದುರಾಯಿತು. ಕೋರ್ಟ್ ನಲ್ಲಿ ಎರಡು ಬಾರಿ ಹಿಯರಿಂಗ್ ಆಗಿದೆ. ನಾವು ಕೊಟ್ಟಿರುವುದಕ್ಕೆ ಎಲ್ಲವೂ ಸರಿ ಇದೆ. ಕ್ರಮಬದ್ಧವಾಗಿತ್ತು, ಅದಕ್ಕೆ ಹೆಚ್ಚು ಚರ್ಚೆ ಆಗಲಿಲ್ಲ. ವಾದ ಬೇಡ ಅಂತ ಕೇಂದ್ರದ ಪರ ವಕೀಲರು ಮನವಿ ಮಾಡಿದ್ದಾರೆ. ಈಗ ನಮ್ಗೆ ಒಂದು ಹಂತದ ಜಯ ಸಿಕ್ಕದೆ. ಆದ್ರೆ ನಾವು ಕೇಳಿದಷ್ಟು ಪರಿಹಾರ ಸಿಕ್ಕಿಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೆ ಹಣ ಬಿಡುಗಡೆಯ ಬಗ್ಗೆ ಅಧಿಕೃತ ಪತ್ರ ಬಂದಿಲ್ಲ. ಸಾಮಾಜಿಕ ಜಾಲತಾಣ ಮೂಲಕ ನಮಗೆ ತಿಳಿದದ್ದು. ಇದು ಅವರೇ ವೈಯಲೇಷನ್ ಮಾಡಿದ್ದರೆ. ಈಗ ಅಧಿಕೃತ ಬರುತ್ತೆ ಎಂಬ ನೀರಿಕ್ಷೆಯಲ್ಲಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಬಂದ ಮೇಲೆ ನಮ್ಮ ಅಧಿಕಾರಿಗಳು ಕೇಂದ್ರಕ್ಕೆ ಕೇಳಿದಾಗ ಆರ್ಡರ್ ಕಾಪಿ ಕಳಿಸಿದ್ದಾರೆ ಅಷ್ಟೆ. ಅವರು ಅಧಿಕೃತವಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಲ್ಲ. ಇವತ್ತೆ ಮತ್ತೆ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ. ನಮಗೆ ಈಗ ಕೊಟ್ಟಿರುವ ಹಣ ಕಡಿಮೆಯಾಗಿದೆ ಎಂದು ಪತ್ರ ಬರೆಯುತ್ತೇವೆ ಎಂದ ಕೃಷ್ಣ ಬೈರೇಗೌಡ ಹೇಳಿದ್ದಾರೆ.