ಬೆಂಗಳೂರು (ಏ.04):   ಯಾರ ಟೀಕೆಗಳ ಬಗ್ಗೆಯೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೆ ಜನರ ರಕ್ಷಣೆ ಆರೋಗ್ಯ ಕಾಪಾಡುವುದು ಮುಖ್ಯ ಎಂದು ಆರೋಗ್ಯ ಸಚಿವ ಡಿ. ಸುಧಾಕರ್ ಹೇಳಿದ್ದಾರೆ. 

ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಆರೋಗ್ಯ ಸಚಿವ ಸುಧಾಕರ್  ಖಾತೆ ಬದಲಾಯಿಸಿ ಎಂದು ನಿರ್ಮಾಪಕ ಕೆ.‌ಮಂಜು ಆಕ್ರೋಶ ವ್ಯಕ್ತಪಡಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.  

ಕೆ.ಮಂಜುಗೆ ಸಚಿವ ಸುಧಾಕರ್ ತಿರುಗೇಟು ನೀಡಿದ್ದು, ಕೆ. ಮಂಜು ಅಂದ್ರೆ ಯಾರೂ ಅಂತಾನೆ ನನಗೆ ಗೊತ್ತಿಲ್ಲ. ಯಾರ ಟೀಕೆಗಳ ಬಗ್ಗೆಯೂ ತಲೆ ಕೆಡಿಸಿಕೊಳ್ಳೋದಿಲ್ಲ. ಆರೋಗ್ಯ ಸಚಿವನಾಗಿ ಏನು ಮಾಡಬೇಕೋ ಅದನ್ನ ಮಾಡುತ್ತಿದ್ದೇನೆ. ನಮಗೆ ಜನರ ರಕ್ಷಣೆ ಬಹಳ ಮುಖ್ಯ. ಟೀಕೆಗಳಿಗೆಲ್ಲಾ ತಲೆಕೆಡಿಕೊಳ್ಳುವುದಿಲ್ಲ. ಸರ್ಕಾರ ಎಲ್ಲವನ್ನೂ ಸರಿದೂಗಿಸಬೇಕಾಗುತ್ತೆ
ಹಾಗಾಗಿ ಸಿಎಂ ಚಿತ್ರರಂಗದ ಮನವಿಗೆ ಸ್ಪಂದಿಸಿದ್ದಾರೆ. ಇದು ತಪ್ಪು ಎಂದು ಹೇಳಲ್ಲ ಎಂದರು.

"

ಆದರೆ, ಈಗ ಕಠಿಣ ಕ್ರಮ ಕೈಗೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಜಿಮ್ ಮಾಲೀಕರು, ಶಿಕ್ಷಣ ಸಂಸ್ಥೆಗಳಿಂದ ಒತ್ತಡ ಬರುತ್ತಿದೆ. ನಮಗೆ ಜನರ ಜೀವ, ಜೀವನೋಪಾಯ ಎರಡೂ ಮುಖ್ಯ ಎಂದು ಸಚಿವರ ಸುಧಾಕರ್ ಹೇಳಿದರು.

ಕೊರೋನಾ ಬಗ್ಗೆ ಆಘಾತಕಾರಿ ಸುದ್ದಿ: ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಗಂಡಾಂತರ..!

ಚಿತ್ರರಂಗಕ್ಕೆ ಮೂರು ದಿನ ಪೂರ್ಣ ರಿಯಾಯಿತಿ  :  ಚಿತ್ರರಂಗಕ್ಕೆ ಮೂರು ದಿನ ಪೂರ್ಣ ರಿಯಾಯಿತಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಾವು ಯಾರನ್ನೂ ಮೆಚ್ಚಿಸಲು ತೀರ್ಮಾನ ಬದಲು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರಿನಲ್ಲಿಂದು ಮಾತನಾಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ನಮಗೆ ರಾಜ್ಯದ ಜನರ ಆರೋಗ್ಯ ಮುಖ್ಯ. ಕೆಲವರು ನನ್ನನ್ನ ಟೀಕೆ ಮಾಡುತ್ತಿದ್ದಾರೆ. ಅದರ ಬಗ್ಗೆ ಬೇಜಾರಿಲ್ಲ. 
ರಾಜ್ಯದ ಜನರ ಆರೋಗ್ಯ ಕಾಪಾಡೋದು ಮೊದಲ ಆದ್ಯತೆ.  ಕೆಲವರಿಗೆ ರಿಯಾಯಿತಿ ಕೊಟ್ಟಿದ್ದಾರೆ.  ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ.  ಜನರ ಜೀವನ, ಜೀವನೋಪಾಯ ಎರಡೂ ಮುಖ್ಯ ಎಂದರು. 

ಸಿಎಂ ಯಡಿಯೂರಪ್ಪ ಅವರಿಗೂ ಒತ್ತಡ ಬಂದಿದೆ.  ಎಲ್ಲರ ಜೊತೆ ಸಮಾಲೋಚಿಸಿ ಸರಿದೂಗಿಸಬೇಕಾಗುತ್ತದೆ.  ಹಾಗಾಗಿಯೇ ಸಿಎಂ ಚಿತ್ರರಂಗದ ಮನವಿಗೆ ಸ್ಪಂದಿಸಿದ್ದಾರೆ. ಶಿಕ್ಷಣ ಸಂಸ್ಥೆಗಳು, ಚಿತ್ರರಂಗದ ಅಭಿಮಾನಿಗಳು ಹಾಗೂ ಜಿಮ್ ಮಾಲೀಕರಿಂದ ಒತ್ತಡ ಬಂದಿದೆ.  ನನಗೂ ಒತ್ತಡ ಬಂದಿದೆ. ಹಾಗಂತ ಎಲ್ಲರಿಗೂ ರಿಯಾಯಿತಿ ಕೊಡಲು ಸಾಧ್ಯವಿಲ್ಲ. 
ಕೇಂದ್ರ ಆರೋಗ್ಯ ಸಚಿವರು, ಇಲಾಖಾ ಕಾರ್ಯದರ್ಶಿ ಜೊತೆ ಚರ್ಚೆ ನಡೆಸಿದ್ದೇನೆ ಎಂದು ಸಚಿವರು ತಿಳಿಸಿದರು.

 ಇನ್ನು ಈಗಿರುವ 8  ಲಕ್ಷ ಡೋಸ್ ಇನ್ನು ಮೂರು ದಿನಕ್ಕೆ ಮುಗಿಯುತ್ತದೆ. ಈಗಾಗಲೇ 25 ಲಕ್ಷ ಡೋಸ್ ಗೆ ಬೇಡಿಕೆ ಇಟ್ಟಿದ್ದೇನೆ. ಎರಡು ಕಂತುಗಳಲ್ಲಿ ಡೋಸ್ ಪೂರೈಸುವುದಾಗಿ ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ.   ಎರಡು ದಿನಗಳಲ್ಲಿ ಮೊದಲ ಕಂತು ನಂತರ ಉಳಿದದ್ದು ಕಳುಹಿಸುವ ಭರವಸೆ ಸಿಕ್ಕಿದೆ ಎಂದು ಹೇಳಿದರು.