ಕೊರೋನಾ ಬಗ್ಗೆ ಆಘಾತಕಾರಿ ಸುದ್ದಿ: ಎಚ್ಚೆತ್ತುಕೊಳ್ಳದಿದ್ರೆ ಕಾದಿದೆ ಗಂಡಾಂತರ..!
ಕೋವಿಡ್ 2ನೇ ಅಲೆ ವೇಗ ಭಾರಿ ಹೆಚ್ಚು| ಜನರು ಸರ್ಕಾರದ ಮಾರ್ಗಸೂಚಿ ಪಾಲಿಸಿ| ಕೊರೋನಾ ಎರಡನೇ ಅಲೆಯನ್ನು ಗೆಲ್ಲಲು ಸಾರ್ವಜನಿಕರ ಸಹಕಾರ ಮುಖ್ಯ| 45 ವರ್ಷಕ್ಕೆ ಮೇಲ್ಪಟ್ಟು ಎಲ್ಲರಿಗೂ ಲಸಿಕೆ ನೀಡುತ್ತಿದ್ದು ಆದಷ್ಟು ಬೇಗ ಲಸಿಕೆ ಪಡೆಯಬೇಕು| ನಮ್ಮ ಸುರಕ್ಷತೆಗೆ ನಾವೇ ಜವಾಬ್ದಾರಿ: ತಜ್ಞರು|
ಬೆಂಗಳೂರು(ಏ.04): ಕೊರೋನಾ ಮೊದಲ ಅಲೆ ವೇಳೆ ಎಂಟು ವಾರಗಳಲ್ಲಿ ವರದಿಯಾಗಿದ್ದಷ್ಟು ಸೋಂಕು ಪ್ರಕರಣ ಈಗ ನಾಲ್ಕೇ ವಾರಗಳಲ್ಲಿ ವರದಿಯಾಗಿವೆ. ಇದರಿಂದ ಸೋಂಕಿನ ಪ್ರಭಾವ ಎಷ್ಟಿದೆ ಎಂಬುದನ್ನು ಅರ್ಥೈಸಿ ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸದಸ್ಯ ಹಾಗೂ ವೈರಾಣು ತಜ್ಞ ಡಾ.ವಿ. ರವಿ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ತಾಂತ್ರಿಕ ಸಲಹಾ ಸಮಿತಿಗೆ ದೊರೆತಿರುವ ಮಾಹಿತಿ ಪ್ರಕಾರ ಕೊರೋನಾ ಸೋಂಕು ವೇಗವಾಗಿ ಹಬ್ಬುತ್ತಿದೆ. ಮೊದಲ ಅಲೆಯ ವೇಳೆ 6-8 ವಾರದಲ್ಲೇ ವರದಿಯಾಗಿದ್ದಷ್ಟು ಪ್ರಕರಣ ಇದೀಗ 4 ವಾರದಲ್ಲೇ ದೃಢಪಟ್ಟಿವೆ. ಇದರಿಂದ ಸೋಂಕಿನ ಪ್ರಭಾವ ಹೆಚ್ಚಿರುವುದು ಸ್ಪಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲೇ ಸರ್ಕಾರ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಯುಗಾದಿಗೆ ಊರಿಗೆ ಹೋಗುವ ಪ್ಲ್ಯಾನ್ ಇದ್ದರೆ ಬಿಟ್ಹಾಕಿ, ನಿಮ್ಮಿಂದ ಹಳ್ಳಿಗಳಿಗೂ ಹರಡಬಹುದು ವೈರಸ್!
ಸಾರ್ವಜನಿಕರು ಕೊರೋನಾ ಮಾರ್ಗಸೂಚಿಯನ್ನು ನಿರ್ಬಂಧಗಳು ಎಂದು ಭಾವಿಸದೆ ತಮ್ಮ ಸುರಕ್ಷಿತೆಗಾಗಿ ತೆಗೆದುಕೊಂಡಿರುವ ಕ್ರಮಗಳು ಎಂದು ಭಾವಿಸಬೇಕು. ಕೊರೋನಾ ಎರಡನೇ ಅಲೆಯನ್ನು ಗೆಲ್ಲಲು ಸಾರ್ವಜನಿಕರ ಸಹಕಾರ ಮುಖ್ಯ. 45 ವರ್ಷಕ್ಕೆ ಮೇಲ್ಪಟ್ಟು ಎಲ್ಲರಿಗೂ ಲಸಿಕೆ ನೀಡುತ್ತಿದ್ದು ಆದಷ್ಟು ಬೇಗ ಲಸಿಕೆ ಪಡೆಯಬೇಕು. ನಮ್ಮ ಸುರಕ್ಷತೆಗೆ ನಾವೇ ಜವಾಬ್ದಾರಿ ಎಂದು ಹೇಳಿದ್ದಾರೆ.