* ಮಧ್ಯಾಹ್ನ 12 ಗಂಟೆಯವರೆಗೆ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ * ಮಧ್ಯಾಹ್ನ ಮೂರು ಗಂಟೆಗೆ ಅಂತ್ಯಕ್ರಿಯೆ* ವಯೋಸಹಜ ಕಾಯಿಲೆಯಿಂದ ಇಹಲೋಕ ತ್ಯಜಿಸಿದ ಕಾಳಮ್ಮ ಚನ್ನಿಗಪ್ಪರವರು 

ಬೆಂಗಳೂರು(ಜು.09): ಅಬಕಾರಿ ಸಚಿವ ಕೆ. ಗೋಪಾಲಯ್ಯ ಅವರ ತಾಯಿ ಕಾಳಮ್ಮ ಚನ್ನಿಗಪ್ಪರವರು(92) ವಯೋಸಹಜ ಕಾಯಿಲೆಯಿಂದ ಇಂದು(ಶುಕ್ರವಾರ) ಬೆಳಿಗ್ಗೆ ನಗರದಲ್ಲಿ ನಿಧನರಾಗಿದ್ದಾರೆ. 

ನಗರದ ಸಚಿವರ ಸ್ವಗೃಹದಲ್ಲಿ ಇಂದು ಮಧ್ಯಾಹ್ನ 12 ಗಂಟೆಯವರೆಗೆ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 

ಕನ್ನಡದ ನಟ ದುನಿಯಾ ವಿಜಯ್‌ಗೆ ಮಾತೃ ವಿಯೋಗ

ಇಂದು ಮಧ್ಯಾಹ್ನ ಮೂರು ಗಂಟೆಗೆ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಹಾಲಪ್ಪನ ಗುಡ್ಡೆ ಗ್ರಾಮದಲ್ಲಿರುವ ಫಾರಂ ಹೌಸ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ.