Asianet Suvarna News Asianet Suvarna News

4 ಜಿಲ್ಲೆಗಳ 234 ಕೆರೆಗಳಿಗೆ ಸಂಸ್ಕರಿತ ನೀರು: ಮಾಧುಸ್ವಾಮಿ

ವೃಷಭಾವತಿ ವ್ಯಾಲಿ ಯೋಜನೆಯಡಿ ಪೂರೈಕೆ| ಬೆಂಗಳೂರು, ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರಿಗೆ ಕೊಡಿ|ಬೆಂಗಳೂರು ನಗರದ 12, ಬೆಂ.ಗ್ರಾಮಾಂತದ 202, ಚಿಕ್ಕಬಳ್ಳಾಪುರದ 29 ಮತ್ತು ತುಮಕೂರಿನ 12 ಕೆರೆಗಳು ಸೇರಿ ಒಟ್ಟು 234 ಕೆರೆಗಳಿಗೆ ನೀರು ತುಂಬಿಸಲು ಉದ್ದೇಶ| 
 
 

Minister JC Madhuswamy Talks Over Vrushbhavati Valley Project grg
Author
Bengaluru, First Published Mar 10, 2021, 7:47 AM IST

ಬೆಂಗಳೂರು(ಮಾ.10): ವೃಷಭಾವತಿ ವ್ಯಾಲಿ ಯೋಜನೆಯಡಿ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರನ್ನು ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಒಟ್ಟು 234 ಕೆರೆಗಳಿಗೆ ತುಂಬಿಸಲು ಉದ್ದೇಶಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಮ್ಮ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಯೋಜನೆಯಡಿ ಬೆಂಗಳೂರು ನಗರದ 12, ಬೆಂ.ಗ್ರಾಮಾಂತದ 202, ಚಿಕ್ಕಬಳ್ಳಾಪುರದ 29 ಮತ್ತು ತುಮಕೂರಿನ 12 ಕೆರೆಗಳು ಸೇರಿ ಒಟ್ಟು 234 ಕೆರೆಗಳಿಗೆ ನೀರು ತುಂಬಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ದೇವನಹಳ್ಳಿ ಕ್ಷೇತ್ರದ 10 ಕರೆಗಳಿಗೆ ನೀರು ತುಂಬಿಸಲು ಉದ್ದೇಶಿಸಿದ್ದು ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದರು.

'ನನ್ನದು ಅಂತ ಸೀಡಿಗಳೆಲ್ಲಾ ಇಲ್ಲಾರೀ.. ನಾನು ಕೋರ್ಟ್ ಮೊರೆ ಹೋಗಲ್ಲ'

ಈಗಾಗಲೇ 947 ಕೋಟಿ ರು. ವೆಚ್ಚದ ಹೆಬ್ಬಾಳ ನಾಗವಾರ ವ್ಯಾಲಿ ಮೂಲಕ ತುಮಕೂರು ಬಿಟ್ಟು ಉಳಿದ ಮೂರು ಜಿಲ್ಲೆಗಳ 65 ಕರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈ ಯೋಜನೆಯಲ್ಲೂ ದೇವನಹಳ್ಳಿ ವ್ಯಾಪ್ತಿಯ 9 ಕೆರೆಗಳಿಗೆ ನೀರು ಹರಿಸಲಾಗುವುದು. ವೃಷಭಾವತಿ ವ್ಯಾಲಿಯಡಿ 1500  ಕೋಟಿ ರು.ಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲಾಗಿದೆ. ಈ ಯೋಜನೆಯಲ್ಲಿ ಲಭ್ಯ ನೀರು ಈಗಾಗಲೇ 234 ಕೆರೆಗಳಿಗೆ ಹಂಚಿಕೆಯಾಗಿದ್ದು ಹೆಚ್ಚಿನ ಕೆರೆಗಳಿಗೆ ಹಂಚಲು ನೀರು ಲಭ್ಯವಿಲ್ಲ ಎಂದರು.
 

Follow Us:
Download App:
  • android
  • ios