ಬಿಎಲ್ ಸಂತೋಷ್ ಯೋಗ್ಯತೆಗೆ ಜನರು ಉತ್ತರ ಕೊಟ್ಟಿದ್ದಾರೆ: ಸಚಿವ ಎಚ್‌ಸಿ ಮಹದೇವಪ್ಪ
ಬಜೆಟ್ ಅಧಿವೇಶನ, ಜಂಟಿ ಅಧಿವೇಶನ ನಡೆದ್ರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ ಎಂದರೆ ಇದೆಷ್ಟು ಪ್ರಬಲ ಪಕ್ಷ ಎಂದು ಸಚಿವ ಎಚ್ ಸಿ ಮಹದೇವಪ್ಪ ಪ್ರಶ್ನಿಸಿದರು.
ಗದಗ ಸೆ.3): ಬಜೆಟ್ ಅಧಿವೇಶನ, ಜಂಟಿ ಅಧಿವೇಶನ ನಡೆದ್ರೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ ಎಂದರೆ ಇದೆಷ್ಟು ಪ್ರಬಲ ಪಕ್ಷ ಎಂದು ಸಚಿವ ಎಚ್ ಸಿ ಮಹದೇವಪ್ಪ ಪ್ರಶ್ನಿಸಿದರು.
ಗದಗನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆದು ಮೂರು ತಿಂಗಳಾದ್ರೂ ಬಿಜೆಪಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇದು ಕರ್ನಾಟಕ ಇತಿಹಾಸದಲ್ಲಿ ಮೊದಲು ಎಂದರು.
ಬಿಜೆಪಿ ಪಕ್ಷದಲ್ಲಿ ಒಗ್ಗಟ್ಟು ಇಲ್ಲ, ಸಹಮತ ಇಲ್ಲ, ಹೊಂದಾಣಿಕೆ ಇಲ್ಲ, ನಾಯಕತ್ವ ಮೊದಲೇ ಇಲ್ಲ ಎನ್ನೋದು ಇದರಿಂದ ಸ್ಪಷ್ಟವಾಗಿದೆ.ಆದರೆ ನಮ್ಮ ಕಾಂಗ್ರೆಸ್ ಹಾಗಲ್ಲ, ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ನಾಯಕತ್ವ ವಹಿಸಿದ ಪಕ್ಷ ಕಾಂಗ್ರೆಸ್. ನಮ್ಮ ಪಕ್ಷಕ್ಕೆ ದೊಡ್ಡದೊಂದು ಇತಿಹಾಸ ಇದೆ, ಸಿದ್ಧಾಂತ ಇದೆ. ದೇಶದ ಅಭಿವೃದ್ಧಿಗಾಗಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿ ಮಾಡಿದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಯಾರು ಬರ್ತಾರೆ ಅವರಿಗೆ ಕಾಂಗ್ರೆಸ್ ಬಾಗಿಲು ತೆರೆದಿರುತ್ತದೆ. ಆದರೆ ನಾವಾಗಿಯೇ ಬನ್ನಿ ಬನ್ನಿ ಎಂದು ಕರೆಯುವ ಪ್ರಶ್ನೆಯೇ ಇಲ್ಲ ಎಂದರು.
ತನಿಖೆ ಮಾಡುತ್ತೇವೆಂದು ಬರೀ ತಮಟೆ ಹೊಡೆಯುತ್ತಿದ್ದಾರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಎಚ್‌ಡಿಡಿ ಕಿಡಿ
ಬಿಜೆಪಿಯಿಂದ ಒಬ್ಬರು ಹೋದ್ರೆ, 40 ಜನರನ್ನು ತರುತ್ತೇನೆ ಎಂದಿದ್ದಾರೆ ಎನ್ನಲಾದ ಬಿ ಎಲ್ ಸಂತೋಷ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಎಲ್ ಸಂತೋಷ್(BL Santosh) ಯೋಗ್ಯತೆ ಏನು ಎಂಬುದಕ್ಕೆ ಜನರೇ ಈಗಾಗಲೇ ಉತ್ತರ ಕೊಟ್ಟಿದ್ದಾರೆ. ನಮ್ಮ ಪಕ್ಷದಿಂದ ಯಾರೂ ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಎಚ್‌ಡಿಕೆ ಡಿಸ್ಚಾರ್ಜ್; ಆಪತ್ತಿಗಾದ ಆಪ್ತ ಸಹಾಯಕನಿಗೆ ಧನ್ಯವಾದ ತಿಳಿಸಿದ ಕುಮಾರಣ್ಣ
ಕರ್ನಾಟಕ-ತಮಿಳನಾಡಿನ ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕಾವೇರಿ ವಿವಾದ 100 ವರ್ಷದ ಇತಿಹಾಸ ಇರುವ ಸಮಸ್ಯೆ. ಕಾನೂನಾತ್ಮಕ ಹೋರಾಟಗಳಿಗೆ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಕಾವೇರಿ ವಾಟರ್ ಬೋರ್ಡ್ ಸ್ಥಾಪನೆ ಮಾಡಿದೆ. ಮಳೆ ಇಲ್ಲ, ಜಲಾಶಯಗಳಲ್ಲಿ ನೀರಿನ ಸಂಗ್ರಹವಾಗಿಲ್ಲ. ಹೀಗಾಗಿ ನಾವು ಬೇರೆಯವರಿಗೆ ನೀರು ಕೊಡುವ ಪರಿಸ್ಥಿತಿಯಲ್ಲಿಲ್ಲ. ಕುಡಿಯುವ ನೀರು ಹಾಗೂ ನಮ್ಮ ರೈತರ ಹಿತ ಕಾಪಾಡಲು ಮೊದಲ ಆದ್ಯತೆ ನೀಡುತ್ತೇವೆ ಎಂದರು.