ಸಿದ್ದರಾಮಯ್ಯ ಅಪ್ಪಟ ಚಿನ್ನ, ಪ್ರಾಮಾಣಿಕ ವ್ಯಕ್ತಿ: ಸಚಿವ ಹೆಚ್‌ಸಿ ಮಹದೇವಪ್ಪ

ಆರ್ಥಿಕ ಸಂಕಷ್ಟ ಏನೇ ಬರಲಿ ನಿಭಾಯಿಸ್ತೀನಿ ಎಂದು ಸಿದ್ದರಾಮಯ್ಯನವರು ಕನಸಿನ ಗ್ಯಾರೆಂಟಿ ಯೋಜನೆ ಜಾರಿಗೆ ತಂದ್ರು. ಇಂದು ಗ್ಯಾರಂಟಿ ಯೋಜನೆ ಸಂಬಂಧಿತ ಪುಸ್ತಕವನ್ನ ಸಿಎಂರವರೇ ಬಿಡುಗಡೆ ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್‌ಸಿ ಮಹದೇವಪ್ಪ ನುಡಿದರು.

Minister HC Mahadevappa speech at Congress Guarantee book release event rav

ಬೆಂಗಳೂರು (ಸೆ.29): ಆರ್ಥಿಕ ಸಂಕಷ್ಟ ಏನೇ ಬರಲಿ ನಿಭಾಯಿಸ್ತೀನಿ ಎಂದು ಸಿದ್ದರಾಮಯ್ಯನವರು ಕನಸಿನ ಗ್ಯಾರೆಂಟಿ ಯೋಜನೆ ಜಾರಿಗೆ ತಂದ್ರು. ಇಂದು ಗ್ಯಾರಂಟಿ ಯೋಜನೆ ಸಂಬಂಧಿತ ಪುಸ್ತಕವನ್ನ ಸಿಎಂರವರೇ ಬಿಡುಗಡೆ ಮಾಡಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್‌ಸಿ ಮಹದೇವಪ್ಪ ನುಡಿದರು.

ಇಂದುಇಂದು ಮೈಸೂರು ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ "ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ" ಕೃತಿ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವರು, ಎಲ್ಲರೂ ಸಿದ್ದರಾಮಯ್ಯ ಮಲಗಿದ್ದಾರೆ ಅಂದುಕೊಳ್ತೀರಿ. ಆದರೆ ಅವರು ಎಲ್ಲವನ್ನೂ ಕೇಳಿಸಿಕೊಳ್ತಿರ್ತಾರೆ. ಯಾರಾರು ಏನೇನು ಮಾತಾಡಿದ್ರು ಎಲ್ಲವನ್ನೂ ಕೇಳಿಸಿಕೊಳ್ತಾರೆ. ಬೇಕಿದ್ರೆ ಹೇಳುತ್ತಾರೆ. ಸಿದ್ದರಾಮಯ್ಯ ಏನು ಅಂತಾ ನನಗೆ ಗೊತ್ತು. ಸಿದ್ದರಾಮಯ್ಯ ಅಪ್ಪಟ ಚಿನ್ನ, ಪ್ರಾಮಾಣಿಕ ವ್ಯಕ್ತಿ. ಸ್ವಾರ್ಥಕ್ಕೆ ಉತ್ತೇಜನ ಕೊಡುವವರಲ್ಲ. ನೇರ ನಿಷ್ಠುರವಾಗಿ ಮಾತನಾಡುವವರು. ಜನಪರ ಕಾಳಜಿ ಇರುವ ಸಿದ್ದರಾಮಯ್ಯ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಆದರೆ ಕೆಲವರಿಗೆ ಸಿದ್ದರಾಮಯ್ಯರನ್ನು ಕಂಡರೆ ಹೊಟ್ಟೆಉರಿ. ಕೆಲವರು ಯಾವಾಗ ಸಿಎಂ ಕುರ್ಚಿ ಖಾಲಿಯಾಗುತ್ತೋ ಅಂತಾ ಕಾಯ್ತಿದ್ದಾರೆ. ಆನೆ ನಡೆಯುವಾಗ ನರಿಗಳು ನೋಡುತ್ತಿರುತ್ತವೆ ಏನೋ ಬಿಳಬಹುದು ಅಂತ ಕಾಯ್ತಿರ್ತಾರೆ ಎನ್ನುವ ಮೂಲಕ ಈ ರೀತಿಯಾಗಿದೆ ಈಗಿನ ಕಥೆ ಎಂದು ಪರೋಕ್ಷವಾಗಿ ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟ ಸ್ವಪಕ್ಷ ಹಾಗೂ ವಿರೋಧ ಪಕ್ಷದವರಿಗೆ ಸಚಿವ ಮಹದೇವಪ್ಪ ಟಾಂಗ್ ನೀಡಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ ನಿಜವಾಗುತ್ತಾ?

ಸಿದ್ದರಾಮಯ್ಯ ನಾಯಕತ್ವಕ್ಕೆ ಗಂಡಾಂತರ ತರಲು ಪಟ್ಟಭಧ್ರ ಹಿತಾಸಕ್ತಿಗಳು ಹೊರಟಿವೆ. ಗ್ಯಾರಂಟಿ ಯೋಜನೆ ಫಲಾನುಭವಿಗಳು ಇದರ ವಿರುದ್ಧ ಹೋರಾಟಕ್ಕೆ ಇಳಿಯಬೇಕು. ಯುವ ಚಳವಳಿ ಸಿದ್ದರಾಮಯ್ಯ ಪರ ಶುರುವಾಗಬೇಕಿದೆ. ಸಿದ್ದರಾಮಯ್ಯರನ್ನು ಅನುಮಾನಪಡಲು ಸಾಧ್ಯನಾ? ಪಟ್ಟಭದ್ರ ಹಿತಾಸಕ್ತಿಗಳು ಒಂದಾಗಿ ಸಿದ್ದರಾಮಯ್ಯ ವಿರುದ್ದ ಈ ಸರಕಾರದ ವಿರುದ್ದ ಕೆಲಸ ಮಾಡುತ್ತಿವೆ. ಸಿದ್ದರಾಮಯ್ಯ ಅಪರೂಪದ ಪ್ರಾಮಾಣಿಕ ರಾಜಕಾರಣಿ. ಸಿದ್ದರಾಮಯ್ಯಗೆ ಖಾಸಗಿ ಜೀವನ ಇಲ್ಲ. ಮನೆ, ಮಠ, ಹೆಂಡತಿ, ಮಕ್ಕಳ ಬಗ್ಗೆ ಯೋಚನೆ ಮಾಡಲ್ಲ. ಇಂಥಹದೆ ಊಟ ಬೇಕು ಅಂತಾ ಕೂತವರು ಅಲ್ಲ‌. ಇಂತಹ ನಾಯಕರನ್ನು ಉಳಿಸಿ ಕೊಳ್ಳಬೇಕಿದೆ ಎಂದರು.

Latest Videos
Follow Us:
Download App:
  • android
  • ios