ಬೀದರ್, (ಏ.30) : ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಏ.27ರ ರಾತ್ರಿಯಿಂದ 14 ಕರ್ಫ್ಯೂ ವಿಧಿಸಿದೆ.

ಮೇ 12ರಕ್ಕೆ ಈ ಕರ್ಫ್ಯೂ ಅಂತ್ಯವಾಗಲಿದ್ದು, ಕೊರೋನಾ ಹೆಚ್ಚಾದರೆ ಅದನ್ನೇ ಮತ್ತೆ ಮುಂದುವರಿಸುವುದಾಗಿ ಈ ಹಿಂದೆ ಸ್ವತಃ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದರು.

ಮುಂದಿನ ದಿನಗಳಲ್ಲಿ ಭಾರತದಲ್ಲಿ 2 ಲಕ್ಷ ನರ್ಸ್, 1.5 ಲಕ್ಷ ವೈದ್ಯರ ಅಗತ್ಯ ಬೀಳಬಹುದು: ಡಾ. ದೇವಿ ಶೆಟ್ಟಿ

ಇದೀಗ ಮುಂದುವರಿಸುವ ಬಗ್ಗೆ ಸ್ವತಃ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ ಕರ್ಪ್ಯೂ ಮುಂದುವರೆಸುವುದು ಅನಿವಾರ್ಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೀದರ್‌ನಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿನ ಪ್ರಕರಣಗಳು ಕಡಿಮೆಯಾಗಬೇಕಾದರೆ ಚೈನ್ ಲಿಂಕ್ ಮುರಿಯಬೇಕು. ಅದಕ್ಕಾಗಿ 14 ದಿನ ಕರ್ಪ್ಯೂ ಜಾರಿ ಮಾಡಲಾಗಿದೆ. ಜನರು ಜವಾಬ್ದಾರಿಯಿಂದ ವರ್ತಿಸಿ ಚೈನ್ ಕಡಿತಕ್ಕೆ ಸಹಕರಿಸಬೇಕು. ಇಲ್ಲದಿದ್ದರೆ ಕೊರೋನಾ ಸೋಂಕು ಹೆಚ್ಚಳವಾದರೆ ಮತ್ತೆ ಕರ್ಪ್ಯೂ ಮುಂದುವರೆಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದರು.