ಬೆಂಗಳೂರು (ಅ.25): ಖಜಾನೆ ಖಾಲಿ ಎಂದ ಸಿಎಂ ಬೆನ್ನಲ್ಲೇ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ನೆರೆ ಸಂತ್ರಸ್ತರ ಮುಂದೆ ಸರ್ಕಾರದಲ್ಲಿ ಹಣವಿಲ್ಲ ಅಂತ ಹೇಳಿಕೊಂಡಿದ್ದಾರೆ ಸಿಸಿ ಪಾಟೀಲ್. ಬೊಕ್ಕಸದ ರಹಸ್ಯ ಬಿಚ್ಚಿಟ್ಟಿದ್ದಾರೆ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ ಸಿ ಪಾಟೀಲ್. ರಸ್ತೆ ರಿಪೇರಿಗೂ ಒಂದು ಹಿಡಿ ಮಣ್ಣು ಹಾಕಿಸಲಿಕ್ಕೂ ನಮ್ಮಲ್ಲಿ ಹಣವಿಲ್ಲ. ಪ್ರವಾಹಕ್ಕೆ ಸರ್ಕಾರ ಎಷ್ಟು ಖರ್ಚು ಮಾಡಿದೆ ಅಂತ ನಿಮಗೆ ಗೊತ್ತಿದೆ. ಶಾಸಕರ ಫಂಡ್ ಕೂಡಾ ಬರ್ತಿಲ್ಲ ಎಂದು ಪಾಟೀಲ್ ಅಳಲು ತೋಡಿಕೊಂಡಿದ್ದಾರೆ. 

ಬೊಕ್ಕಸ ಖಾಲಿ, ನಾನೇನು ಮಾಡ್ಲಿಲ ಸಿಎಂ ಹೇಳಿಕೆ ಎಬ್ಬಿಸಿದೆ ಬಿರುಗಾಳಿ!