ಕೃಷಿ ವಿಜ್ಞಾನಿ ಸ್ವಾಮಿನಾಥನ್‌ ಬದುಕಿರುವಾಗ್ಲೇ ಸಚಿವ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿ ಎಡವಟ್ಟು ಮಾಡಿಕೊಂಡಿಕೊಂಡಿರುವ ಘಟನೆ ನಡೆದಿದೆ. 

ಬೆಂಗಳೂರು, (ಮೇ.24): ಕೃಷಿ ವಿಜ್ಞಾನಿ, ಹಸಿರು ಕ್ರಾಂತಿಯ ಹರಿಕಾರ ಡಾ. ಎಂ.ಎಸ್.ಸ್ವಾಮಿನಾಥನ್ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿದೆ.

ಇದು ಸುಳ್ಳು ಸುದ್ದಿ, ಸ್ವಾಮಿನಾಥನ್(94) ಅವರು ಆರೋಗ್ಯವಾಗಿದ್ದಾರೆ ಎಂದು ಎಂಎಸ್ ಸ್ವಾಮಿನಾಥನ್ ಟ್ರಸ್ಟ್ ಸ್ಪಷ್ಟಪಡಿಸಿದೆ. ಆದ್ರೆ ಕರ್ನಾಟಕ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ವಾಮಿನಾಥನ್ ನಿಧನಕ್ಕೆ ಸಂತಾಪ ಸೂಚಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

''ಕೃಷಿ ವಿಜ್ಞಾನಿ ಡಾ|| ಎಂ. ಎಸ್. ಸ್ವಾಮಿನಾಥನ್ ನಿಧನರಾಗಿದ್ದಾರೆ'' ಎಂದು ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿ ಶ್ರದ್ಧಾಂಜಲಿ ಅರ್ಪಿಸಿದ್ದು ಗೊಂದಲ ಹೆಚ್ಚಾಗುವಂತೆ ಮಾಡಿತ್ತು.

ಆದರೆ, ಟ್ವೀಟ್ ವೊಂದಕ್ಕೆ ಪ್ರತಿಕ್ರಿಯಿಸಿರುವ ಎಂಎಸ್ ಸ್ವಾಮಿನಾಥನ್ ಟ್ರಸ್ಟ್, ಡಾ.ಎಂಎಸ್ ಎಸ್ ಆರೋಗ್ಯವಾಗಿದ್ದು, ಸಕ್ರಿಯವಾಗಿ ತಮ್ಮ ದೈನಂದಿನ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಹೇಳಿದೆ.

Scroll to load tweet…

ನಂತರ ಬಸವರಾಜ್ ಬೊಮ್ಮಾಯಿ ತಪ್ಪಿನ ಅರಿವಾಗಿ, ಹಳೆ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಅಲ್ಲದೇ ಕ್ಷಮೆಯಾಚಿಸಿ ಮತ್ತೊಂದು ಟ್ವೀಟ್ ಮಾಡಿ ವಿಷಾದ ವ್ಯಕ್ತಪಡಿಸಿದ್ದಾರೆ.