ವಾಲ್ಮೀಕಿ ನಿಗಮದ ಹಗರಣ: ಸಚಿವ ನಾಗೇಂದ್ರ ಇಂದು ರಾಜೀನಾಮೆ?

ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನಕ್ಕೂ ಮುನ್ನ ಅಂದರೆ ನಿನ್ನೆ(ಶುಕ್ರವಾರ) ರಾಜೀನಾಮೆ ಪಡೆದರೇ ಮತದಾನದ ದಿನವಾದ ಇಂದು(ಶನಿವಾರ) ದೊಡ್ಡ ಸದ್ದು ಮಾಡುವ ಸಾಧ್ಯತೆಯಿರುತ್ತದೆ. ಹೀಗಾಗಿ ಶನಿವಾರ ಸಂಜೆಯ ನಂತರ ಈ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

Minister B Nagendra Likely Resign His Minister Post in Karnataka grg

ಬೆಂಗಳೂರು(ಜೂ.01): ವಾಲ್ಮೀಕಿ ನಿಗಮದ ಅವ್ಯವಹಾರ ದಿನದಿಂದ ದಿನಕ್ಕೆ ರಾಜ್ಯ ಸರ್ಕಾರಕ್ಕೆ ಕಂಟಕವಾಗಿ ಬದಲಾಗುತ್ತಿದ್ದು, ಸಚಿವ ಬಿ. ನಾಗೇಂದ್ರ ರಾಜೀನಾಮೆ ಕುರಿತು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ವಿಸ್ತ್ರತವಾಗಿ ಚರ್ಚೆ ನಡೆಸಲಾಯಿತು. ಈ ವೇಳೆ ಲೋಕಸಭೆ ಅಂತಿಮ ಹಂತದ ಚುನಾವಣೆ ಮುಗಿಯುವವರೆಗೂ ಕಾದು ನೋಡುವ ತಂತ್ರ ಅನುಸರಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ತನ್ಮೂಲಕ ಜೂ.1ರವರೆಗೆ ನಾಗೇಂದ್ರ ಅವರಿಗೆ ಜೀವದಾನ ದೊರತಂತಾಗಿದ್ದು, ಜೂ.2ರ ಬಳಿಕ ಮುಖ್ಯಮಂತ್ರಿಗಳು ಅಂತಿಮ ನಿರ್ಧಾರ ಮಾಡುವುದಾಗಿ ತಿಳಿದು ಬಂದಿದೆ.

ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನಕ್ಕೂ ಮುನ್ನ ಅಂದರೆ ನಿನ್ನೆ(ಶುಕ್ರವಾರ) ರಾಜೀನಾಮೆ ಪಡೆದರೇ ಮತದಾನದ ದಿನವಾದ ಇಂದು(ಶನಿವಾರ) ದೊಡ್ಡ ಸದ್ದು ಮಾಡುವ ಸಾಧ್ಯತೆಯಿರುತ್ತದೆ. ಹೀಗಾಗಿ ಶನಿವಾರ ಸಂಜೆಯ ನಂತರ ಈ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ನಾಗೇಂದ್ರ ವಿರುದ್ಧದ ಆರೋಪದ ವಾಸ್ತವಾಂಶ ಪರಿಶೀಲನೆ: ಡಿ.ಕೆ. ಶಿವಕುಮಾರ್‌

ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಕೆಲ ಸಚಿವರು. ಪ್ರಕರಣದಲ್ಲಿ ನಾಗೇಂದ್ರ ಅವರ ಪಾತ್ರ ಇದ್ದರೆ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಲಿ. ನಿರ್ದೋಷಿ ಎಂದು ಸಾಬೀತಾರೆ ಮತ್ತೆ ಸಂಪುಟಕ್ಕೆ ಬರಲಿ ಎಂಬ ಸಲಹೆ ನೀಡಿದರೆ, ಮತ್ತೊಂದೆಡೆ ಬಿಜೆಪಿ ಒತ್ತಡ ಹೇರುತ್ತದೆ ಎಂಬ ಕಾರಣಕ್ಕೆ ಸಕಾರಣವಿಲ್ಲದೆ ನಾಗೇಂದ್ರ ರಾಜೀನಾಮೆ ನೀಡುವ ಅಗತ್ಯವಿಲ್ಲ. ಅವರ ಮೇಲೆ ಎಫ್‌ಐಆರ್ ಕೂಡ ದಾಖಲಾಗಿಲ್ಲ, ಸಿಬಿಐ ತನಿಖೆ ನಡೆಯುವುದಾದರೇ ನಡೆಯಲಿ ಕಾದು ನೋಡೋಣ ಎಂದು ಕೆಲವರು ಸಲಹೆ ನೀಡಿದರು ಎನ್ನಲಾಗಿದೆ. 

Latest Videos
Follow Us:
Download App:
  • android
  • ios