Asianet Suvarna News Asianet Suvarna News

ಪಶ್ಚಿಮಘಟ್ಟ ಬಗ್ಗೆ ಚರ್ಚೆಗೆ ಜು.18ರಂದು ಮಲೆನಾಡು ಶಾಸಕರ ಸಭೆ

 ಪಶ್ಚಿಮಘಟ್ಟ ಕುರಿತ ಕೇಂದ್ರ ಪರಿಸರ ಸಚಿವಾಲಯದ ಅಧಿಸೂಚನೆ ವಿರೋಧಿಸಿ  ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಜು.18ರಂದು ಮಲೆನಾಡು ಶಾಸಕರ ಸಭೆ.

Minister Araga Jnanendra calls western ghat region mlas meeting against centrals draft notification gow
Author
Bengaluru, First Published Jul 14, 2022, 12:07 PM IST

ಬೆಂಗಳೂರು (ಜು.14): ಪಶ್ಚಿಮಘಟ್ಟ ಕುರಿತ ಕೇಂದ್ರ ಪರಿಸರ ಸಚಿವಾಲಯದ ಅಧಿಸೂಚನೆ ವಿರೋಧಿಸಿ ನಿರ್ಣಯ ಕೈಗೊಳ್ಳುವ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇದೇ ತಿಂಗಳ 18ರಂದು ಮಲೆನಾಡು ಭಾಗದ ಶಾಸಕರ ಸಭೆ ಕರೆದಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಸಚಿವರು, ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುವ ಜನತೆಯ ಭವಿಷ್ಯಕ್ಕೆ ಮಾರಕವಾಗುವ ಈ ಅಧಿಸೂಚನೆಯನ್ನು ಕಳೆದ ವಾರ ಹೊರಡಿಸಲಾಗಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಕರ್ನಾಟಕ ರಾಜ್ಯವೂ ಒಳಗೊಂಡಂತೆ ಒಟ್ಟು 56,826 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆ ಸಲ್ಲಿಸಲು ಎರಡು ತಿಂಗಳು ಗಡುವು ನೀಡಲಾಗಿದೆ. ಒಂದು ವೇಳೆ ಈ ಅಧಿಸೂಚನೆ ಅನುಷ್ಠಾನ ಗೊಂಡರೆ, ಮಲೆನಾಡು ನಿವಾಸಿಗಳ ಬದುಕು ಮಸುಕಾಗುತ್ತದೆ. ಅಭಿವೃದ್ದಿ ಕುಂಠಿತವಾಗುತ್ತದೆ. ಜತೆಗೆ ತೀವ್ರ ಆರ್ಥಿಕ ಹಾನಿಗೆ ತುತ್ತಾಗಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಸರಕಾರ ಈ ಹಿಂದೆ ಈ ಕಸ್ತೂರಿ ರಂಗನ್‌ ಸಮಿತಿ ವರದಿಯನ್ನು ತಿರಸ್ಕರಿಸಿ ತನ್ನ ನಿಲುವಿನ ಬಗ್ಗೆ ಸ್ಪಷ್ಟಅಭಿಪ್ರಾಯ ತಿಳಿಸಿದೆ. ಆ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂಬುದು ಮಲೆನಾಡ ಭಾಗದ ಶಾಸಕರ ಆಗ್ರಹವಾಗಿದೆ. 18ರಂದು ನಡೆಯುವ ಸಭೆಯಲ್ಲಿ ಅಧಿಸೂಚನೆಯನ್ನು ವಿರೋಧಿಸಿ ಗೊತ್ತುವಳಿಯನ್ನು ಮಂಡನೆ ಮಾಡಲಾಗುವುದು ಎಂದು ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

 

Follow Us:
Download App:
  • android
  • ios