ಬೆಂಗಳೂರು[ಜ.23]: ತನ್ನ ಕರ್ತವ್ಯ ಪಾಲಿಸಿದ ಮಹಿಳಾ ಎಸ್ಪಿ ದಿವ್ಯಾ ಗೋಪಿನಾಥ್ ವಿರುದ್ಧ ಕೂಗಾಡಿದ ಸಚಿವ ಸಾ.ರಾ.ಮಹೇಶ್ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದರೂ ಸಿಎಂ ಕುಮಾರಸ್ವಾಮಿ ಮಾತ್ರ ಸಚಿವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

"

ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ಸಿಎಂ ಕುಮಾರಸ್ವಾಮಿ 'ಅಚಾತುರ್ಯ ನಡೆದಿರುವುದು ನಿಜ. ಇದನ್ನು ದೊಡ್ಡದು ಮಾಡುವುದು ಬೇಡ, ಎಂದು ಅಧಿಕಾರಿನ್ನು ನಾನೇ ಕರೆದು ನೀವೆಲ್ಲಾ ಒಳ್ಳೆ ಕೆಲಸ ಮಾಡಿದ್ದೀರಿ. ಆದರೆ ಇಂತಹ ಕೆಲಸ ಮಾಡುವ ಸಂದರ್ಭದಲ್ಲಿ ತಾವು ತೆಗೆದುಕೊಳ್ಳುವ ನಿರ್ಧಾರ ಮುಜುಗರಕ್ಕೀಡು ಮಾಡುವಂತಹುದ್ದನ್ನು ಗಮನಿಸಿದ್ದೇನೆ' ಎಂದಿದ್ದಾರೆ. ಈ ಮೂಲಕ ತಮ್ಮ ಪಕ್ಷದ ನಾಯಕ ಹಾಗೂ ಸಚಿವ ಸಾ. ರಾ ಮಹೇಶ್ ರವರು ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ನಡೆದುಕೊಂಡ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಶ್ರೀಗಳ ಕ್ರಿಯಾವಿಧಿ ವೇಳೆ ಮಹಿಳಾ ಅಧಿಕಾರಿಗೆ ಸಚಿವರಿಂದ ಅವಮಾನ

ಸಚಿವರ ನಡೆಗೆ ತುಮಕೂರಿನ ಜನರು ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಸಿಎಂ ಕುಮಾರಸ್ವಾಮಿ ಮಾತ್ರ ಸಚಿವರನ್ನು ಸಮರ್ಥಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.