ಇರಾನ್‌-ಇಸ್ರೇಲ್‌ ಯುದ್ಧದಿಂದಾಗಿ ಕಾರವಾರ ಬಂದರಿಗೆ ಗಲ್ಫ್ ದೇಶಗಳಿಂದ ಬಿಟುಮಿನ್ (ಡಾಂಬರು) ಹಡಗುಗಳು ವಾರದಿಂದ ಆಗಮಿಸಿಲ್ಲ.ಮಧ್ಯಪ್ರಾಚ್ಯದಿಂದ ಕೇವಲ ಬಿಟುಮಿನ್ ಹಡುಗುಗಳು ಮಾತ್ರ ಕಾರವಾರ ಬಂದರಿಗೆ ಬರುತ್ತಿದ್ದವು.

ಕಾರವಾರ : ಇರಾನ್‌-ಇಸ್ರೇಲ್‌ ಯುದ್ಧದಿಂದಾಗಿ ಕಾರವಾರ ಬಂದರಿಗೆ ಗಲ್ಫ್ ದೇಶಗಳಿಂದ ಬಿಟುಮಿನ್ (ಡಾಂಬರು) ಹಡಗುಗಳು ವಾರದಿಂದ ಆಗಮಿಸಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಧ್ಯಪ್ರಾಚ್ಯದಿಂದ ಕೇವಲ ಬಿಟುಮಿನ್ ಹಡುಗುಗಳು ಮಾತ್ರ ಕಾರವಾರ ಬಂದರಿಗೆ ಬರುತ್ತಿದ್ದವು. ತಿಂಗಳಿಗೆ 6-7 ಹಡಗುಗಳು ಬರುತ್ತಿದ್ದವು. ಆದರೆ, ಈಗ ಇರಾನ್, ಹೋರ್ಮುಜ್ ಜಲಸಂಧಿಯಲ್ಲಿ ಸಂಚರಿಸುವ ಸರಕು ಹಡಗಿಗೆ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಿಂದ ಬರುತ್ತಿದ್ದ ಕಚ್ಚಾ ಡಾಂಬರ್ ಸಂಪೂರ್ಣ ಬಂದ್‌ ಆಗಿದೆ. ಕಾರವಾರದ ವಾಣಿಜ್ಯ ಬಂದರಿನಲ್ಲಿ ಡಾಂಬರ್ ಲಾರಿಗಳು ಸಾಲುಗಟ್ಟಿ ನಿಂತಿವೆ.

ಮಾ.1ರಂದು ಬಿಟುಮಿನ್ ತುಂಬಿದ್ದ ಹಡಗು ಬಂದಿದ್ದು ಇದುವರೆಗೆ ಬಂದಿಲ್ಲ

ಮಾ.1ರಂದು ಬಿಟುಮಿನ್ ತುಂಬಿದ್ದ ಹಡಗು ಬಂದಿದ್ದು, ಮಾ.3ರಂದು ತಿರುಗಿ ಹೋಗಿದೆ. ನಂತರ ಇದುವರೆಗೆ ಬಂದಿಲ್ಲ. ಒಂದು ಬಿಟುಮಿನ್ ಹಡಗು ಬಂದರೆ ಬಂದರಿಗೆ ₹8 ರಿಂದ 10 ಲಕ್ಷ ಆದಾಯ ಬರುತ್ತಿತ್ತು. ಹೀಗಾಗಿ, ಬಂದರು ವಾಣಿಜ್ಯ ಚಟುವಟಿಕೆ ನಂಬಿದ್ದ ಲಾರಿ ಮಾಲಿಕರಿಗೆ ಸಂಕಷ್ಟ ಉಂಟಾಗಿದೆ. ಕಳೆದ 10 ದಿನದಿಂದ ಕೆಲಸವಿಲ್ಲದೇ ಡಾಂಬರ್ ಲಾರಿಗಳು ಖಾಲಿ ನಿಂತಿವೆ.

ಆದರೆ, ಮಾ.9ರಂದು ಡೀಸೆಲ್ ತರುತ್ತಿದ್ದ ಹಡಗು ಕಾರವಾರ ಬಂದರಿಗೆ ಬಂದಿದೆ. ಕಾರವಾರ ಬಂದರಿಗೆ ಡೀಸೆಲ್ ತುಂಬಿದ ಹಡಗುಗಳು ಮುಂಬೈಯಿಂದ ಬರುವುದರಿಂದ ಡೀಸೆಲ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿಲ್ಲ. ಇನ್ನು 2 ದಿನಗಳಲ್ಲಿ ಇಂಡೋನೇಷ್ಯಾದಿಂದ ಸಾಲ್ಟ್ (ಉಪ್ಪು) ಹೇರಿಕೊಂಡ ಹಡಗು ಬರಲಿದೆ

ಕಾರವಾರ ಬಂದರಿಗೆ ಮಧ್ಯಪ್ರಾಚ್ಯದಿಂದ ಕೇವಲ ಬಿಟುಮಿನ್ ತುಂಬಿದ ಹಡಗುಗಳು ಮಾತ್ರ ಬರುತ್ತವೆ. ಉಳಿದ ಹಡಗುಗಳು ಬೇರೆ, ಬೇರೆ ದೇಶಗಳಿಂದ ಬರುತ್ತಿದ್ದು, ಆ ಹಡಗುಗಳು ಎಂದಿನಂತೆ ಬರುತ್ತಿವೆ.

- ನಿತೀಶ್, ಬಂದರು ಅಧಿಕಾರಿ.

ಕಾರವಾರ ಬಂದರಿಗೆ ವಿವಿಧ ಕೊಲ್ಲಿ ದೇಶಗಳಿಂದ ಕೇವಲ ಬಿಟುಮಿನ್‌ ತುಂಬಿದ ಹಡಗುಗಳು ಮಾತ್ರವೇ ಆಗಮಿಸುತ್ತವೆ

ತಿಂಗಳಿಗೆ 6-7 ಹಡಗು ಆಗಮನ. ಪ್ರತಿ ಹಡಗಿನಿಂದ ಬಂದರಿಗೆ 10 ಲಕ್ಷ ರು. ಆದಾಯ. ಲಾರಿಗಳ ಮಾಲೀಕರಿಗೂ ಕೆಲಸ

ಮಾ.1ರಂದು ಒಂದು ಹಡಗು ಬಂದು ಹೋಗಿದ್ದು ಬಿಟ್ಟರೆ ಮತ್ತೆ ಕೊಲ್ಲಿ ದೇಶಗಳಿಂದ ಬಿಟುಮಿನ್‌ ಹಡಗುಗಳು ಆಗಮಿಸಿಲ್ಲ

ಹೀಗಾಗಿ ರಾಜ್ಯದ ವಿವಿಧೆಡೆ ಬಿಟುಮಿನ್‌ ಸಾಗಣೆಯನ್ನೇ ನಂಬಿದ್ದ ಲಾರಿಗಳ ಮಾಲೀಕರಿಗೆ ವಾರದಿಂದ ಕೆಲಸವಿಲ್ಲದೆ ಆತಂಕ