Asianet Suvarna News Asianet Suvarna News

ಮತ್ತೆ ಗಡಿಕ್ಯಾತೆ ತೆಗೆದ ಎಂಇಎಸ್; ಶರದ್ ಪವಾರ್‌ ಭೇಟಿಯಾಗಿ ಗಡಿ ವಿಚಾರ ಚರ್ಚೆ!

ಖಾನಾಪುರ, ಬೆಳಗಾವಿ ಸೇರಿ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಎಂಇಎಸ್‌ ಮುಖಂಡರು ಮಹಾರಾಷ್ಟ್ರದ ಎನ್‌ಸಿಪಿ ಮುಖಂಡ ಶರದ್‌ ಪವಾರ್‌ರನ್ನು ಭೇಟಿಯಾಗಿದ್ದಾರೆ. ಈ ವೇಳೆ ಕರ್ನಾಟಕ ಸರ್ಕಾರ ವಿರುದ್ಧ ಕಿಡಿಕಾರಿ ಗಡಿವಿವಾದಕ್ಕೆ ಸಂಬಂಧಿಸಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.

MES leaders met sharad pawar and discussed the border issue at belgum rav
Author
First Published Aug 27, 2023, 7:44 PM IST

ಖಾನಾಪುರ(ಬೆಳಗಾವಿ): ಖಾನಾಪುರ, ಬೆಳಗಾವಿ ಸೇರಿ ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಎಂಇಎಸ್‌ ಮುಖಂಡರು ಮಹಾರಾಷ್ಟ್ರದ ಎನ್‌ಸಿಪಿ ಮುಖಂಡ ಶರದ್‌ ಪವಾರ್‌ರನ್ನು ಭೇಟಿಯಾಗಿದ್ದಾರೆ. ಈ ವೇಳೆ ಕರ್ನಾಟಕ ಸರ್ಕಾರ ವಿರುದ್ಧ ಕಿಡಿಕಾರಿ ಗಡಿವಿವಾದಕ್ಕೆ ಸಂಬಂಧಿಸಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.

ಎನ್‌ಸಿಪಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಲ್ಲಾಪುರಕ್ಕೆ ಆಗಮಿಸಿದ್ದ ಪವಾರ್‌ರನ್ನು ಭೇಟಿಯಾದ ಎಂಇಎಸ್‌ ಮುಖಂಡರು, ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದ ಮರಾಠಿ ಶಾಲೆಗಳ ಸ್ಥಿತಿ ದಯನೀಯವಾಗಿದೆ. ಹಳಿಯಾಳ, ಜೋಯಿಡಾ, ಕಾರವಾರ, ಬೆಳಗಾವಿ, ಖಾನಾಪುರ ಮತ್ತು ನಿಪ್ಪಾಣಿ ತಾಲೂಕಿನ ಗ್ರಾಮೀಣ ಭಾಗದ ಮರಾಠಿ ಶಾಲೆಗಳಲ್ಲಿ ಮರಾಠಿ ಶಿಕ್ಷಕರ ಕೊರತೆ ಇದೆ ಎಂದು ದೂರಿದರು. ಜತೆಗೆ, ಮರಾಠಿಗರಿಗೆ ಮರಾಠಿಯಲ್ಲೇ ಕಾಗದಪತ್ರ ನೀಡಬೇಕು ಮತ್ತು ಗಡಿಯಲ್ಲಿ ದ್ವಿಭಾಷಾ ನೀತಿ ಕಡ್ಡಾಯಗೊಳಿಸಬೇಕು, ಗಡಿ ವಿವಾದ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದರು.

ಬೆಳಗಾವಿ ಪಾಲಿಕೆಯಲ್ಲಿ ಮತ್ತೆ ಎಂಇಎಸ್‌ ಖ್ಯಾತೆ: ಮರಾಠಿ ಭಾಷೆಯಲ್ಲೇ ಸಭೆ ನಡಾವಳಿ ಪತ್ರ ನೀಡುವಂತೆ ಮೊಂಡುತನ!

ಈ ವೇಳೆ ವೇಳೆ ಪವಾರ್‌ ಅವರು, ಮುಂಬೈಗೆ ತೆರಳಿದ ಕೂಡಲೇ ಸಿಎಂ ಏಕನಾಥ ಶಿಂದೆ ಅವರನ್ನು ಭೇಟಿಯಾಗಿ ಗಡಿಭಾಗದ ಮರಾಠಿಗರ ಪರ ಹಕ್ಕೊತ್ತಾಯ ಮಂಡಿಸಲು ಉನ್ನತಾಧಿಕಾರ ಸಮಿತಿ ಸಭೆ ನಡೆಸಲು ದಿನ ನಿಗದಿ ಮಾಡಲಾಗುವುದು, ಗಡಿ ವಿವಾದದ ತೀರ್ಪು ಮಹಾರಾಷ್ಟ್ರದ ಪರವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

Follow Us:
Download App:
  • android
  • ios