ದೈಹಿಕ ಶಿಕ್ಷಣ ವಿಭಾ​ಗದ ಮುಖ್ಯಸ್ಥರು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮೈಸೂರು ವಿಶ್ವ ವಿದ್ಯಾಲಯ ಕುಲ​ಸ​ಚಿ​ವರ ಕಚೇರಿ ಎದುರೇ ವಿದ್ಯಾರ್ಥಿಯೊಬ್ಬ ಮಾತ್ರೆ ಸೇವಿಸಿ ಆತ್ಮ​ಹತ್ಯೆಗೆ ಯತ್ನಿಸಿದ ಘಟನೆ ವಿವಿಯ ಕ್ರಾಫರ್ಡ್‌ ಭವನದಲ್ಲಿ ಶನಿವಾರ ನಡೆದಿದೆ.

ಮೈಸೂರು (ಸೆ.10) : ದೈಹಿಕ ಶಿಕ್ಷಣ ವಿಭಾ​ಗದ ಮುಖ್ಯಸ್ಥರು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮೈಸೂರು ವಿಶ್ವ ವಿದ್ಯಾಲಯ ಕುಲ​ಸ​ಚಿ​ವರ ಕಚೇರಿ ಎದುರೇ ವಿದ್ಯಾರ್ಥಿಯೊಬ್ಬ ಮಾತ್ರೆ ಸೇವಿಸಿ ಆತ್ಮ​ಹತ್ಯೆಗೆ ಯತ್ನಿಸಿದ ಘಟನೆ ವಿವಿಯ ಕ್ರಾಫರ್ಡ್‌ ಭವನದಲ್ಲಿ ಶನಿವಾರ ನಡೆದಿದೆ.

ಎಂಪಿಎಡ್‌ ಅಂತಿಮ ವರ್ಷದ ವಿದ್ಯಾರ್ಥಿ ಕೆ.ಜೆ.ಗಗನ್‌ ಎಂಬವರು ಆತ್ಮಹತ್ಯೆಗೆ ಯತ್ನಿಸಿದವರು. ‘ದೈಹಿಕ ಶಿಕ್ಷಣ ಮುಖ್ಯಸ್ಥರ ಕಿರುಕುಳ ಕುರಿತು ಈಗಾಗಲೇ ದೂರು ನೀಡಿದ್ದರೂ ವಿವಿಯ ಆಡಳಿತ ಇನ್ನೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ನಾನು ಬದುಕಬಾರದು ಎಂದು ನಿರ್ಧರಿಸಿ, ಕುಲಸಚಿವರ ಕಚೇರಿ ಎದುರೇ ಆತ್ಮಹತ್ಯೆಗೆ ನಿರ್ಧರಿಸಿದ್ದೇನೆ’ ಎಂದು ವಿಡಿಯೋವೊಂದನ್ನು ಮಾಡಿ ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿರುವ ಗಗನ್‌, ಇದರ ಬೆನ್ನಲ್ಲೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದವರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೈವಿವಿ: ದೈನಂದಿನ ವ್ಯವಹಾರಗಳ ಬಗ್ಗೆ ತೀರ್ಮಾನಕ್ಕೆ ಕುಲಸಚಿವರು, ಹಣಕಾಸು ಅಧಿಕಾರಿಗೆ ಹೊಣೆ

ಮೈಸೂರು ವಿವಿ ಕುಲಸಚಿವೆ ವಿ.ಆರ್‌.ಶೈಲಜಾ ಹಾಗೂ ಅಧಿಕಾರಿಗಳು ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿಯನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದು, ವಿದ್ಯಾರ್ಥಿ ಚಿಕಿತ್ಸೆ ಪಡೆದು ಮರಳಿದ ಬಳಿಕ ಸಮಿತಿ ರಚಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಮಳೆ ಕೈಕೊಟ್ಟಿದ್ದಕ್ಕೆ ಬೆಳೆ ಹಾಳು: ರೈತ ಆತ್ಮಹತ್ಯೆ

ದಾವಣಗೆರೆ: ಸಾಲಬಾಳು ಗ್ರಾಮದ ಸತೀಶ್‌ ನಾಯ್ಕ ಮತ್ತು ಸಹೋದರರ ಹೆಸರಿಗೆ ಜಂಟಿ ಖಾತೆಯಲ್ಲಿದ್ದ 2.10 ಎಕರೆ ಜಮೀನಿನಲ್ಲಿ ಅಡಿಕೆ ತೋಟದ ಜೊತೆ ಮೆಕ್ಕೆ ಜೋಳ ಕೃಷಿ ಮಾಡಿಕೊಂಡಿದ್ದರು. ಬೀಜ, ಗೊಬ್ಬರ ಸೇರಿ ಜಮೀನು ಅಭಿವೃದ್ಧಿಗಾಗಿ ಹೊನ್ನಾಳಿ ಪಿಎಲ್ಡಿ ಬ್ಯಾಂಕ್‌ನಲ್ಲಿ .1.40 ಲಕ್ಷ ಸಾಲ, ಧರ್ಮಸ್ಥಳ ಸಂಘದಲ್ಲಿ .50 ಸಾವಿರ ಸಾಲ ಹಾಗೂ ಕೈಗಡವಾಗಿ ಸುಮಾರು .5 ಲಕ್ಷ ಸಾಲ ಮಾಡಿಕೊಂಡಿದ್ದರು. ಜಿಲ್ಲಾದ್ಯಂತ ಮಳೆ ಕೈಕೊಟ್ಟಿದ್ದರಿಂದ ಸಹಜವಾಗಿಯೇ ಸತೀಶ ನಾಯ್ಕ ಸಹ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಮಳೆ ಬಾರದ್ದರಿಂದ ಬೆಳೆಯೂ ಕೈಗೆ ಬರಲಿಲ್ಲ. ಹೀಗಾಗಿ ಸಾಲ ತೀರಿಸುವುದು ಹೇಗೆಂಬ ಆತಂಕದಲ್ಲಿ ಸತೀಶ ನಾಯ್ಕ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ನ್ಯಾಮತಿ ಠಾಣೆಯಲ್ಲಿ ಪ್ರಕ​ರಣ ದಾಖ​ಲಾ​ಗಿ​ದೆ.

ಮೈವಿವಿ: ದೈನಂದಿನ ವ್ಯವಹಾರಗಳ ಬಗ್ಗೆ ತೀರ್ಮಾನಕ್ಕೆ ಕುಲಸಚಿವರು, ಹಣಕಾಸು ಅಧಿಕಾರಿಗೆ ಹೊಣೆ