ಲಂಡನ್‌[ಡಿ.18]: ಕಳೆದ ಕೆಲ ತಿಂಗಳನಿಂದ ನನ್ನ ಮಗಳ ಜೊತೆ ಸಂಪರ್ಕ ಸಾಧಿಸುವುದು ಸಾಧ್ಯವಿಲ್ಲ. ದಯವಿಟ್ಟು ಮತ್ತೆ ಆಕೆಯ ಜೊತೆ ಸಂಪರ್ಕ ಸಾಧಿಸಲು ಅವಕಾಶ ಮಾಡಿಕೊಡಿ ಎಂದು ಪ್ರಿನ್ಸ್‌ ಹ್ಯಾರಿಯ ಪತ್ನಿ ಮೇಘನ್‌ ಮಾರ್ಕೆಲ್‌ಳ ತಂದೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಅವರು ನೇರವಾಗಿ ಬ್ರಿಟನ್‌ನ ರಾಣಿ ಎಲಿಜಬೆತ್‌ ಅವರಿಗೇ ಪತ್ರ ಬರೆದಿದ್ದಾರೆ. ಹಲವು ತಿಂಗಳನಿಂದ ಆಕೆ ನನ್ನ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಸಂದೇಶ ಕಳುಹಿಸಿದರೆ ಅದಕ್ಕೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಮೇಘನ್‌ರ ತಂದೆ ಮಾರ್ಕೆಲ್‌ ತಿಳಿಸಿದ್ದಾರೆ.

ಮದುವೆಗೆ ಕೆಲ ದಿನಗಳ ಮುನ್ನವಷ್ಟೇ ಮಾರ್ಕೆಲ್‌ ಹೃದಯ ಶಸ್ತ್ರಚಿಕಿತ್ಸೆಗೆ ಗುರಿಯಾದ ಕಾರಣ, ಅವರು ಮಗಳ ಮದುವೆಗೂ ಭಾಗಿಯಾಗಲು ಸಾಧ್ಯವಿರಲಿಲ್ಲ.