ಬೆಂಗಳೂರು: ನಟಿ ಶ್ರುತಿ ಹರಿಹರನ್ ಅವರಿಂದ ಲೈಂಗಿಕ ಕಿರುಕುಳ (ಮೀಟೂ) ಆರೋಪಕ್ಕೆ ಒಳಗಾಗಿರುವ ನಟ ಅರ್ಜುನ್ ಸರ್ಜಾ ಸೋಮವಾರ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್‌ರನ್ನು ಭೇಟಿಯಾದರು. 

ಆಯುಕ್ತರ ಕಚೇರಿಗೆ ಬಂದಿದ್ದ ಅವರು ಆಯುಕ್ತರನ್ನು ಭೇಟಿಯಾಗಿ ಕೆಲ ನಿಮಿಷ ಚರ್ಚೆ ನಡೆಸಿದರು. ಭೇಟಿಯ ಕಾರಣ, ಚರ್ಚೆಯ ವಿವರ ಲಭ್ಯವಾಗಿಲ್ಲ.

ವಿಸ್ಮಯ ಕನ್ನಡ ಚಿತ್ರ ಶೂಟಿಂಗ್ ವೇಳೆ ತಮಗೆ ನಟ ಅರ್ಜುನ್ ಸರ್ಜಾ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಶ್ರುತಿ ಹರಿಹರನ್ ದೂರಿದ್ದರು. ಬಳಿಕ ಈ ಬಗ್ಗೆ ಪ್ರಕರಣ ದಾಖಲಾಗಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು.