ಬೆಂಗಳೂರು(ಅ.19): ಕೊರೋನಾ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬವಾಗಿರುವ ಈದ್‌ ಮಿಲಾದ್‌ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ‘ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಮೆರವಣಿಗೆ ನಡೆಸುವಂತಿಲ್ಲ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವಂತಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಅ.30ರಂದು ಆಚರಿಸಲಿರುವ ಈದ್‌ ಮಿಲಾದ್‌ ಹಬ್ಬದ ವೇಳೆ ಸ್ಮಶಾನಗಳು (ಖಬ್ರಿಸ್ತಾನ) ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಪ್ರವಚನ ನಡೆಸುವಂತಿಲ್ಲ. ಜೊತೆಗೆ ಬೀದಿ ಅಥವಾ ಗಲ್ಲಿಗಳಲ್ಲಿ (ಮೊಹಲ್ಲಾ) ಹಗಲು ಅಥವಾ ರಾತ್ರಿ ಯಾವುದೇ ಸಮಯದಲ್ಲೂ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮ, ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ ಮಾಡುವಂತಿಲ್ಲ. ಇನ್ನು ಹಬ್ಬದ ಆಚರಣೆ ವೇಳೆ ಆರು ಅಡಿಗಳ ದೈಹಿಕ ಅಂತರ ಕಾಪಾಡಬೇಕು. 

ಚುನಾವಣಾ ಕಾರ್ಯಕ್ಕೆ 55 ವರ್ಷ ಮೀರಿದವರ ನಿಯೋಜನೆ: ಕೊರೋನಾ ಆತಂಕ

ಎಲ್ಲಾ ಕಡೆಯೂ ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್‌ ಹಾಗೂ ಕೈ ತೊಳೆಯಲು ಅಗತ್ಯವಾದ ಸಾಬೂನು, ನೀರಿನ ವ್ಯವಸ್ಥೆ ಮಾಡಬೇಕು. 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆಯಲ್ಲೇ ಹಬ್ಬ ಆಚರಿಸಲು ಸೂಚಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.