ಗಂಡು ಹೆಣ್ಣಿನ ನಡುವೆ ತಾರತಮ್ಯ ಮಾಡುವ ಕಾನೂನು ಸಮಂಜವಲ್ಲ. ಮದುವೆಯಾದ ಬಳಿಕ ಪುತ್ರಿಯ ಸ್ಥಾನಮಾನ ಬದಲಾಗುವುದಿಲ್ಲ. ಪೋಷಕರಿಂದ ಬರಬೇಕಾದ ಎಲ್ಲಾ ಸವಲತ್ತು ಪಡೆಯಲು ಅರ್ಹಳು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಮಾಜಿ ಯೋಧರ ಪುತ್ರಿಯ ಮನವವಿ ಪುರಸ್ಕರಿಸಿ ಈ ಆದೇಶ ನೀಡಲಾಗಿದೆ.
ಬೆಂಗಳೂರು(ಜ.04): ಸೈನಿಕ ಕಲ್ಯಾಣ ಇಲಾಖೆ ವಿರುದ್ಧ ಕರ್ನಾಟಕ ಹೈಕೋರ್ಟ್ ಗರಂ ಆಗಿದೆ. ಮಾಜಿ ಯೋಧರ ಪುತ್ರಿಯನ್ನು ನಿವೃತ್ತ ಯೋಧರ ಕೋಟಾದಲ್ಲಿ ಪರಿಗಣಿಸಲು ನಿರಾಕರಿಸಿದ ಕಾರಣಕ್ಕೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಹಾಯಕ ಪ್ರಾಧ್ಯಾಪರ ಹುದ್ದೆಗೆ ಮಾಜಿ ಯೋಧರ ಪುತ್ರಿ ಅರ್ಜಿ ಹಾಕಿದ್ದರು. ಆದರೆ ಸಾಮಾನ್ಯ ಕೋಟಾದಲ್ಲಿ ಇವರ ಅರ್ಜಿ ಪರಿಗಣಿಸಲಾಗಿತ್ತು. ಇದರ ವಿರುದ್ದ ಹೈಕೋರ್ಟ್ ಮೆಟ್ಟಿಲೇರಿದ್ದ ಮಾಜಿ ಯೋಧರ ಪುತ್ರಿ ಪರ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಸಹಾಯಕ ಪ್ರಾಧ್ಯಾಪರ ಹುದ್ದೆಗೆ ನಿವೃತ್ತ ಯೋಧರ ಕೋಟಾದಲ್ಲಿ ಗುರತಿನ ಚೀಟಿ ನೀಡಲು ನಿರಾಕರಿಸಿದ ಸೈನಿಕರ ಕಲ್ಯಾಣ ಇಲಾಖೆ ವಿರುದ್ಧ ಮೈಸೂರಿನ ದಿವಗಂತ ಯೋಧ ಸುಬೇದಾರ್ ರಮೇಶ್ ಪಾಟೀಲ್ ಪುತ್ರಿ ಪ್ರಿಯಾಂಕ್ ಆರ್ ಪಾಟೀಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ಜಸ್ಟೀಸ್ ಎಂ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ, ಮಹತ್ವದ ಆದೇಶ ನೀಡಿದೆ.
ಥಿಯೇಟರ್‌ಗಳಲ್ಲಿ ಹೊರಗಿನ ಆಹಾರ ತೆಗೆದುಕೊಂಡು ಹೋಗದಂತೆ ನಿರ್ಬಂಧಿಸಬಹುದು : ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ಮಾಜಿ ಯೋಧರ ಪುತ್ರ ಅಥವಾ ಪುತ್ತಿಗೆ ಒಂದೇ ಮಾನದಂಡವಿರಬೇಕು. ಇಲ್ಲಿ ತಾರಮತ್ಯ ಇರಬಾರದು. 25 ವರ್ಷದ ಕೆಳಗಿನ ಪುತ್ರಿ ಮದುವೆಯಾಗಿದ್ದಾರೆ ಅನ್ನೋ ಕಾರಣಕ್ಕೆ ಅವರ ಸ್ಥಾನಮಾನ ಬದಲಾಗುವುದಿಲ್ಲ. ಹೀಗಾಗಿ ಪುತ್ರಿಯನ್ನು ಯಾವುದೇ ಹಕ್ಕಿನಿಂದ ವಂಚಿತರಾಗಿ ಮಾಡಲು ಸಾಧ್ಯವಿಲ್ಲ. ಇದು ಸಂವಿಧಾನದ 14 ಮತ್ತು 15 ವಿಧಿಯ ಉಲ್ಲಂಘನೆಯಾಗಿದೆ. ಪುತ್ರ ಮದುವೆಯಾದರೂ ಅಥವಾ ಆಗದೇ ಇದ್ದರ ತಂದೆಯ ಕೋಟಾದಡಿ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ಆದರೆ ಪುತ್ರಿ ಮದುವೆಯಾಗದೇ ಉಳಿದರೆ ಮಾತ್ರ ಪ್ರಯೋಜನಕ್ಕೆ ಅರ್ಹರಾಗಿರುತ್ತಾರೆ, ಮದುವೆಯಾದರೆ ಪ್ರಯೋಜನದಿಂದ ವಂಚಿರಾಗುತ್ತಾರೆ ಅನ್ನೋ ನಿಯಮ ಸಂವಿಧಾನ ಬಾಹಿರವಾಗಿದೆ. ಇದಕ್ಕೆ ತಿದ್ದುಪಡಿಅಗತ್ಯ ಎಂದು ಹೈಕೋರ್ಟ್ ಹೇಳಿದೆ.
ಹೆಣ್ಣ, ಗಂಡು ಲಿಂಗದ ಆಧಾರದಲ್ಲಿ ಸವಲತ್ತು, ಪ್ರಯೋಜನ ನೀಡುವುದು ಸರಿಯಲ್ಲ. ಮದುವೆಯಾಗುವುದರಿಂದ ಪುತ್ರನ ಸ್ಥಾನಮಾನ ಬದಲಾಗಲ್ಲ ಎಂದರೆ ಪುತ್ರಿಯ ಸ್ಥಾನಮಾನ ಕೂಡ ಬದಲಾಗಲ್ಲ ಎಂದು ಹೈಕೋರ್ಟ್ ಹೇಳಿದೆ. ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿ ಸಮಾನ ಅವಕಾಶ ಸಿಗಬೇಕು. ಇದಕ್ಕೆ ತೊಡಕಾಗಿರುವ ನಿಯಮಗಳಿಗೆ ತಿದ್ದುಪಡಿ ಅಗತ್ಯ. ಭಾರತ ಪುರುಷ ಪ್ರಧಾನ ವ್ಯವಸ್ಥೆಯಿಂದ ಹೊರಬಂದಿದೆ. ಆದರೆ ಕೆಲವು ಕಡೆಗಳಲ್ಲಿ ಈ ವ್ಯವಸ್ಥೆ ಇನ್ನೂ ಹಾಗೇ ಇದೆ ಎಂದು ಹೈಕೋರ್ಟ್ ಹೇಳಿದೆ.
Karnataka high court: ಅಪಘಾತಕ್ಕೀಡಾದ ವಾಹನವನ್ನು ವಿಮೆ ಇಲ್ದಿದ್ರೂ ಬಿಡಿ: ಹೈಕೋರ್ಟ್ ಆದೇಶ
ಸಹಾಯಕ ಪ್ರಾದ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಪರಿಯಾಂಕ್ ಪಾಟೀಲ್, ನಿವೃತ್ತ ಯೋಧರ ಕೋಟಾದಡಿ ಅವಕಾಶ ನೀಡಲು ಸೈನಿಕ ಕಲ್ಯಾಣ ಇಲಾಖೆಯನ್ನು ಕೋರಿದ್ದರು. ಈ ವೇಳೆ ಮದುವೆಯಾಗಿರುವ ಕಾರಣ ನಿಯಮದ ಪ್ರಕಾರ ನಿವೃತ್ತ ಸೈನಿಕ ಕೋಟಾದಡಿ ಅವಕಾಶ ನೀಡಲು ಸಾಧ್ಯವಿಲ್ಲ ಎಂದಿತ್ತು. ಇದರ ವಿರುದ್ಧ ಪ್ರಿಯಾಂಕ್ ಪಾಟೀಲ್ ಹೈಕೋರ್ಟ್ ಮೆಟ್ಟಿಲೇರಿದ್ದರು.
