ಕೊರೋನಾ ಎರಡನೇ ಅಲೆಯ ನಡುವೆ ಮಾರತ್ ಹಳ್ಳಿ ಮಹಿಳಾ ಪಿಎಸ್ ಐ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ.

ಬೆಂಗಳೂರು, (ಏ.17): ಸಂಕಷ್ಟ ಕಾಲದಲ್ಲಿ ಯಾರು ನಮ್ಮವರು ಎಂಬುದನ್ನ ಕೊರೋನಾ ತೋರಿಸಿಕೊಟ್ಟಿದೆ. ಕೊರೋನಾ ಮಹಾಮಾರಿಯಿಂದಾಗಿ ಸಂಬಂಧಿಗಳೇ ದೂರವಾಗಿದ್ದುಂಟು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದ್ರೆ, ಮಾನವೀಯತೆ ಎಲ್ಲಕ್ಕಿಂತ ಮೇಲು....ಕಷ್ಟ ಕಾಲದಲ್ಲೂ ಸಂಕಷ್ಟದಲ್ಲಿದ್ದವರನ್ನು ಮಾನವೀಯತೆಯಿಂದ ಕಾಣಬೇಕು. ಅದರಂತೆ ಕೊರೋನಾ ಎರಡನೇ ಅಲೆಯ ನಡುವೆ ಮಾರತ್ ಹಳ್ಳಿ ಮಹಿಳಾ ಪಿಎಸ್ ಐ ಮಾನವೀಯತೆ ಮೆರೆದಿದ್ದಾರೆ.

ಅನಾಥ ಮಹಿಳೆ ರಕ್ಷಿಸಿ ಮಾನವೀಯತೆ ಮೆರೆದ‌ ಸರ್ಕಾರಿ ಅಧಿಕಾರಿ..! 

ಫುಟ್ ಬಾತ್ ನಲ್ಲಿದ್ದ ಮಹಿಳೆಗೆ ಸ್ನಾನ‌ಮಾಡಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಬೆಂಗಳೂರಿನ ಮಾರತ್ ಹಳ್ಳಿಯ ಮಹಿಳಾ ಪಿಎಸ್ ಐ ಅನಿತಾ ಅವರು ಆಶ್ರಯವಾಗಿದ್ದಾರೆ. 

ಅಲ್ಲದೇ ಚಿಕಿತ್ಸೆ ಜೊತೆಗೆ ಹೊಸ ಬಟ್ಟೆ ಕೊಡಿಸಿ ನಿರಾಶ್ರಿತರ‌ ಕೇಂದ್ರಕ್ಕೆ ಮಹಿಳೆಯನ್ನು ಬಿಟ್ಟು ಮಾದರಿಯಾಗಿದ್ದಾರೆ. ಹೀಗೆ ದೊಡ್ಡ ಹುದ್ದೆಯಲ್ಲಿ ಇದ್ದವರು ಮಾದರಿ ಕೆಲಸ ಮಾಡಿದರೆ ಇತರರಿಗೆ ಪ್ರೇರಣೆಯಾದಂತಾಗುತ್ತದೆ.