ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ಕಳೆದೆರಡು ದಿನಗಳಿಂದ ಕ್ಲೋಸ್ ಆಗಿದ್ದ ಮಂತ್ರಿಮಾಲ್ ಇಂದು ಓಪನ್
ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಕ್ಲೋಸ್ ಆಗಿದ್ದ ಸಂಪಿಗೆ ರಸ್ತೆಯಲ್ಲಿರುವ ಪ್ರತಿಷ್ಟಿತ ಮಂತ್ರಿಮಾಲ್ ಇಂದು ಬೆಳಗ್ಗೆಯಿಂದ ಎಂದಿನಂತೆ ಒಪನ್ ಆಗಿದೆ.
ಬೆಂಗಳೂರು (ಡಿ.29):ಆಸ್ತಿ ತೆರಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ಕ್ಲೋಸ್ ಆಗಿದ್ದ ಸಂಪಿಗೆ ರಸ್ತೆಯಲ್ಲಿರುವ ಪ್ರತಿಷ್ಟಿತ ಮಂತ್ರಿಮಾಲ್ ಇಂದು ಬೆಳಗ್ಗೆಯಿಂದ ಎಂದಿನಂತೆ ಒಪನ್ ಆಗಿದೆ.
ಕಳೆದ ಐದು ವರ್ಷಗಳಿಂದ ಸುಮಾರು 51 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರು ಅಲ್ಲದೆ ಬಾಕಿ ಇರುವ ಆಸ್ತಿ ತೆರಿಗೆಯನ್ನೂ ಪಾವತಿ ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ಬಿಬಿಎಂಪಿಯ ಪಶ್ಚಿಮ ವಲಯದ ಕಂದಾಯ ವಿಭಾಗದ ಅಧಿಕಾರಿಗಳು ಇಡೀ ಮಾಲ್‌ಗೆ ಬೀಗ ಹಾಕಿ ಸೀಜ್ ಮಾಡಿದ್ದರು. ಇದಕ್ಕೂ ಮೊದಲು ಹಲವು ಸಲ ನೋಟಿಸ್ ಕಳಿಸಿದ್ದರೂ
ಸ್ವಂತ ಉದ್ಯಮ ಪ್ರಾರಂಭಿಸೋರಿಗೆ ಸರ್ಕಾರದ ಈ ಯೋಜನೆಯಡಿ ಸಿಗುತ್ತೆ 10 ಲಕ್ಷ ರೂ. ಸಾಲ
ಸದ್ಯ ಬಿಬಿಎಂಪಿ ವಿರುದ್ದ ಕೋರ್ಟ್ ಮೆಟ್ಟಿಲೇರಿರುವ ಮಂತ್ರಿಮಾಲ್ ಆಡಳಿತ ಮಂಡಳಿ. ಕೋರ್ಟ್ ಸ್ಟೇ ನೀಡಿದ ಬೆನ್ನಲ್ಲೇ ಮಂತ್ರಿಮಾಲ್ ಎಂದಿನಂತೆ ಓಪನ್ ಆಗಿದೆ. ಬೆಳಗ್ಗೆಯಿಂದಲೇ ಗ್ರಾಹಕರು ಬರಲಾರಂಭಿಸಿದ್ದಾರೆ.
ಬುಧವಾರ ಗ್ರಾಹಕರಿಗೆ ಶಾಕ್ ನೀಡಿದ್ದ ಬಿಬಿಎಂಪಿ ಅಧಿಕಾರಿಗಳು. ನೂರಾರು ಜನರು ಸಿನಿಮಾ ವೀಕ್ಷಿಸಲು ಟಿಕೆಟ್ ಬುಕ್ ಮಾಡಿದ್ದರು. ಸಿನಿಮಾ ವೀಕ್ಷಣೆಗೆ ಬಂದಿದ್ದ ಜನರಿಗೆ ಒಳಬಿಡದೇ ಮಾರ್ಷಲ್‌ಗಳು ಶಾಕ್ ನೀಡಿದ್ದರು. ನೂರಾರು ರೂಪಾಯಿ ತೆತ್ತು ಟಿಕೆಟ್ ಬುಕ್ ಮಾಡಿದ್ದ ಜನರು ನಿರಾಸೆಯಿಂದ ಮನೆಗೆ ಹಿಂತಿರುಗಿದರು.
ಬೆಂಗಳೂರು: ಮೆಜೆಸ್ಟಿಕ್‌ನಲ್ಲಿ ಸಿಕ್ಕ ಹೊಸ ಗೆಳತಿ ನಂಬಿ ಚಿನ್ನ ಕಳೆದುಕೊಂಡ ವೃದ್ಧ..!
ಕೆಲ ಜನರು ಗೇಟಿನ ಮುಂದೆಯೇ ಬಿಬಿಎಂಪಿ ಅಧಿಕಾರಿಗಳು ಹಾಗೂ ಮಂತ್ರಿಮಾಲ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿನಿಮಾ ಟಿಕೆಟ್ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದರು. ಇದೀಗ ಮತ್ತೆ ಓಪನ್ ಆಗಿರುವುದರಿಂದ ಕಳೆದ ಬುಧವಾರ ಸಿನಿಮಾ ಟಿಕೆಟ್ ಬುಕ್ ಮಾಡಿದವರಿಗೆ ಇಂದು ಅವಕಾಶ ನೀಡುತ್ತದಾ? ಮಂತ್ರಿಮಾಲ್ ಆಡಳಿತ ಮಂಡಳಿ ಹಣ ವಾಪಸ್ ಕೊಡುತ್ತದ? ಇಂದು ಗೊತ್ತಾಗಲಿದೆ.