ಮಂಗಳೂರು [ಡಿ.26]: ಮಂಗಳೂರಿನಲ್ಲಿ ಡಿಸೆಂಬರ್ 19 ರಂದು ನಡೆದ ಗಲಭೆ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಮಂಗಳೂರು ಪೊಲೀಸರಿಗೆ ಸರ್ಕಾರ ಬಹುಮಾನ ಘೋಷಿಸಿದೆ. 

ಸರ್ಕಾರದಿಂದ ಪೊಲೀಸರಿಗೆ ನಗದು ಬಹುಮಾನ ಘೋಷಣೆ ಮಾಡಲಾಗಿದೆ. ಹಿಂಸಾಚಾರ ನಡೆದಾಗಲೂ ಪರಿಸ್ಥಿತಿಯನ್ನು ಹತೋಟಿಗೆ ತಂದ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

ಈ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದ ಒಟ್ಟು 149 ಮಂದಿ ಪೊಲೀಸರಿಗೆ ಕರ್ನಾಟಕ ಸರ್ಕಾರ ನಗದು ಬಹುಮಾನ ಘೋಷಣೆ ಮಾಡಲಾಗಿದೆ. 

ಪರಿಸ್ಥಿತಿಯನ್ನು ಶಾಂತಗೊಳಿಸಿದ ಪೊಲೀಸರಿಗೆ ಒಟ್ಟು 10 ಲಕ್ಷ ಬಹುಮಾನವನ್ನು ಸರ್ಕಾರ ಘೋಷಿಸಿದೆ. 

ಫೈರ್ ಮಾಡಿದ್ರೂ ಒಬ್ರೂ ಸಾಯಲಿಲ್ಲ ಎಂದ SI ವಿರುದ್ಧ ದೂರು...

ಡಿಸೆಂಬರ್ 19 ರಂದು ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಏಕಾ ಏಕಿ ಹಿಂಸಾಚಾರಕ್ಕೆ ತಿರುಗಿದ್ದು, ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ಪೊಲೀಸರು ಸಫಲರಾಗಿದ್ದರು.  

ಅಲ್ಲದೇ ಈ ವೇಳೆ ಗೋಲಿಬಾರ್ ನಡೆದು ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದರು. ಅಲ್ಲದೇ ಮೂರು ದಿನಗಳ ಕಾಲ ನಗರದಲ್ಲಿ ಕರ್ಫ್ಯೂ ವಿಧಿಸಿ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಯಲ್ಲಿ ಇಡಲಾಗಿತ್ತು. ಪರಿಸ್ಥಿತಿ ಸಮಪೂರ್ಣವಾಗಿ ಶಾಂತವಾಗುವ ವರೆಗೂ ಕೂಡ ನಗರದಲ್ಲಿ ಪೊಲೀಸರು ಕಾರ್ಯನಿರ್ವಹಿಸಿದ್ದರು.