ಮಂಗಳೂರು [ಡಿ.26]: ಗೋಲಿಬಾರ್ ವೇಳೆ ‘ಫೈರ್ ಮಾಡಿದ್ರೂ ಒಬ್ಬರೂ ಸಾಯಲಿಲ್ಲ’ ಎಂದು ಹೇಳಿಕೆ ನೀಡಿದ್ದರು ಎನ್ನಲಾದ ಪೊಲೀಸ್ ಇನ್ಸ್‌ಪೆಕ್ಟರ್ ಶಾಂತರಾಮ್ ವಿರುದ್ಧ ಮಂಗಳೂರಿನ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ. 

ಡಿ.19ರಂದು ಮಂಗಳೂರು ನಗರದಲ್ಲಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯ ಸಂದರ್ಭ ನಡೆದ ಘಟನೆಯಲ್ಲಿ ಇಬ್ಬರು ವ್ಯಕ್ತಿಗಳು ಪೊಲೀಸ್ ಗುಂಡಿಗೆ ಮೃತಪಟ್ಟಿದ್ದರು. 

ಸರ್ಕಾರದ ಪರಿಹಾರ ನಿರಾಕರಿಸಲು ಮುಸ್ಲಿಂ ಒಕ್ಕೂಟ ಕರೆ...

ಗಲಭೆ ನಿಯಂತ್ರಿಸುವ ಸಂದರ್ಭ ಕದ್ರಿ ಠಾಣೆ ಇನ್‌ಸ್ಪೆಕ್ಟರ್ ಶಾಂತರಾಮ್ ಅವರು ಪ್ರಾರ್ಥನಾ ಸ್ಥಳದ ಸಮೀಪ ಪ್ರತಿಭಟನಾಕಾರರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ ಅವರನ್ನು ಕೊಲ್ಲುವ ಕುರಿತು ಆತಂಕಕಾರಿ ಹೇಳಿಕೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. 

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊವೊಂದರ ಆಧಾರದಲ್ಲಿ ಹನೀಫ್ ಕಾಟಿಪಳ್ಳ ಎಂಬುವರು ದೂರು ನೀಡಿದ್ದಾರೆ.