ಶರಣ್ ಪಂಪ್‌ವೆಲ್ ಬಂಧಿಸಿ: ಸಚಿವ ದಿನೇಶ್ ಅಂಗಳ ತಲುಪಿದ ಮಂಗಳಾದೇವಿ ಧರ್ಮದಂಗಲ್!

ಮಂಗಳೂರಿನ ಇತಿಹಾಸ ಪ್ರಸಿದ್ದ ಮಂಗಳಾದೇವಿ ದೇವಸ್ಥಾನದಲ್ಲಿ ಮುಸ್ಲಿಮರ ವ್ಯಾಪಾರ ಬಹಿಷ್ಕಾರ ವಿವಾದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಂಗಳ ತಲುಪಿದ್ದು, ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಬಂಧನಕ್ಕೆ ಸಮಾನ ಮನಸ್ಕ ಸಂಘಟನೆಗಳು ಆಗ್ರಹಿಸಿದೆ.
 

Mangaluru Mangaladevi Dharmadangal reached Minister Dinesh Gindu Rao gvd

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ಅ.18): ಮಂಗಳೂರಿನ ಇತಿಹಾಸ ಪ್ರಸಿದ್ದ ಮಂಗಳಾದೇವಿ ದೇವಸ್ಥಾನದಲ್ಲಿ ಮುಸ್ಲಿಮರ ವ್ಯಾಪಾರ ಬಹಿಷ್ಕಾರ ವಿವಾದ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಂಗಳ ತಲುಪಿದ್ದು, ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ಬಂಧನಕ್ಕೆ ಸಮಾನ ಮನಸ್ಕ ಸಂಘಟನೆಗಳು ಆಗ್ರಹಿಸಿದೆ. ಮಂಗಳಾದೇವಿಯ ಹಿಂದೂ ವ್ಯಾಪಾರಸ್ಥರ ಸ್ಟಾಲ್ ಗಳಿಗೆ ಭಗವಾಧ್ಬಜ ಕಟ್ಟಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಂಗಳೂರಿನ ಸರ್ಕ್ಯೂಟ್ ಹೌಸ್ ನಲ್ಲಿ ದ.ಕ ಉಸ್ತುವಾರಿ ಸಚಿವ ಗುಂಡೂರಾವ್ ರನ್ನು ಸಮಾನ ಮನಸ್ಕರ ನಿಯೋಗ ಭೇಟಿಯಾಗಿದೆ.‌ 

ಜಾತ್ರಾ ವ್ಯಾಪಾರಸ್ಥರು, ಬೀದಿ ವ್ಯಾಪಾರಿಗಳು ಹಾಗೂ ಡಿವೈಎಫ್ಐ, ಎಡಪಂಥೀಯ ಸಂಘಟನೆಗಳ ನಿಯೋಗ ಮನವಿ ಸಲ್ಲಿಸಿದೆ. ಸಚಿವ ದಿನೇಶ್ ಗುಂಡೂರಾವ್ ಎದುರು ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಅವಧಿಯಲ್ಲೂ ದೇವಸ್ಥಾನದಲ್ಲಿ ವ್ಯಾಪಾರ ಬಹಿಷ್ಕಾರ ಮಾಡಲಾಗಿದೆ. ನಮ್ಮ‌ ಪ್ರತಿಭಟನೆ ಬಳಿಕ ಕೆಲ ಮುಸ್ಲಿಮರಿಗೆ ಅವಕಾಶ ಸಿಕ್ಕಿದೆ. ಆದರೆ ಅದು ಆದ ಮೇಲೆ ಶರಣ್ ಪಂಪ್ ವೆಲ್ ಕೇಸರಿ ಬಾವುಟ ಕಟ್ಟಿದ್ದಾರೆ. ಹಿಂದೂಗಳು ಮುಸ್ಲಿಂ ಅಂಗಡಿಗೆ ಹೋಗಬೇಡಿ ಅನ್ನೋದನ್ನ ಹೇಗೆ ಒಪ್ಪೋದು?, ಮೊನ್ನೆ ಹಮಾಸ್ ಬೆಂಬಲಿಸಿದ ಒಬ್ಬನನ್ನ ಇಲ್ಲಿನ ಪೊಲೀಸರು ಬಂಧಿಸಿದ್ರು.‌ 

ಮೈಸೂರಿನ ಬಳಿಕ ಕಾಫಿನಾಡಿನಲ್ಲಿ ವಿವಾದಿತ ಮಹಿಷ ದಸರಾ ಕಿಚ್ಚು!

ಆದರೆ ಶರಣ್ ವಿರುದ್ದ ಪೊಲೀಸರು ಕ್ರಮ ಕೈಗೊಳ್ತಾ ಇಲ್ಲ. ಇದು ಚುನಾವಣೆಗೆ ಇಲ್ಲಿನ ಬಿಜೆಪಿ ನಾಯಕರು ಶರಣ್ ಛೂ ಬಿಟ್ಟಿದ್ದಾರೆ.‌ ಇದನ್ನ ತಡೆಯದೇ ಇದ್ರೆ ಇಲ್ಲಿ ಧರ್ಮಗಳ ಆಧಾರದಲ್ಲಿ ವಿಭಜನೆ ಆಗುತ್ತೆ. ಪ್ರತ್ಯೇಕ ಕಾನೂನು ಮಾಡಿದ್ರೂ ಪೊಲೀಸರು ನಿಂತುಕೊಂಡು ನೋಡ್ತಾರೆ. ಸರ್ಕಾರ ಬದಲಾದ್ರೂ ಮಂಗಳೂರಿನ ಪೊಲೀಸರು ಬದಲಾಗಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದು, ಶರಣ್ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಿ ಅಂತ ಆಗ್ರಹಿಸಿದ್ದಾರೆ. ಬಹಿರಂಗವಾಗಿ ಶರಣ್ ಮುಸ್ಲಿಮರ ಅಂಗಡಿಗಳಿಗೆ ಹೋಗಬೇಡಿ ಅಂತಾರೆ. 

ಹೀಗಿದ್ದರೂ ಮಂಗಳೂರಿನ ಪೊಲೀಸರು ಕ್ರಮವನ್ನೇ ತಗೋತಿಲ್ಲ ಅಂತ ಗುಂಡೂರಾವ್ ಬಳಿ‌ ದೂರು ನೀಡಿದ್ದಾರೆ. ಮಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರ ಇಲ್ಲ, ಅವರೇ ಸರ್ಕಾರ ನಡೆಸ್ತಿದಾರೆ ಅಂತ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಮಾನಮನಸ್ಕ ಸಂಘಟನೆಗಳ ದೂರಿಗೆ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದು, ತಕ್ಚಣ ಪೊಲೀಸರ ಸಭೆ ಕರೆದು ಸೂಚಿಸುತ್ತೇನೆ ಎಂದಿದ್ದು, ಕಮಿಷನರ್ ಜೊತೆ ಮಾತನಾಡಿ ‌ಕ್ರಮದ ಬಗ್ಗೆ ಪರಿಶೀಲನೆ ನಡೆಸಿ ಇಂಥಹ ಕೆಲಸ ಆಗಬಾರದು ಅಂತ ಸಂಘಟನೆಗಳ ಪ್ರಮುಖರಿಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: 6 ಆರೋಪಿಗಳ ಬಂಧನ!

ಸಂವಿಧಾನದ ಪ್ರಕಾರ ದೇಶ ನಡೆಯಬೇಕು, ಯಾವುದೋ ಧರ್ಮದ ಪ್ರಕಾರ ಅಲ್ಲ: ಇನ್ನು ಈ ಬಗ್ಗೆ ಮಾಧ್ಯಮಗಳ ಜೊತೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ವ್ಯಾಪಾರ ಬಹಿಷ್ಕಾರದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸ್ತೇನೆ. ಸಂವಿಧಾನದ ಪ್ರಕಾರ ದೇಶ ನಡೆಯಬೇಕು, ಯಾವುದೋ ಧರ್ಮದ ಪ್ರಕಾರ ಅಲ್ಲ. ಎಲ್ಲರಿಗೂ ಸಮಾನ ಹಕ್ಕುಗಳು ಈ ದೇಶದಲ್ಲಿ ಇರಬೇಕು. ವ್ಯಾಪಾರಕ್ಕೆ ಯಾರನ್ನೂ ನಿರ್ಬಂಧನೆ ಮಾಡುವುದು ಸರಿಯಲ್ಲ. ಕಾನೂನು ಪ್ರಕಾರ ಮಾಡಲಿ, ಕಾನೂನು ಬಿಟ್ಟು ಏನನ್ನೂ ಮಾಡಬಾರದು. ಅವರು ಕರೆ ಕೊಡಲಿ, ಅವರ ಕರೆಯನ್ನು ಯಾರೂ ಒಪ್ಪಿಕೊಳ್ಳಬೇಕಿಲ್ಲ. ಆ ಕರೆಗಳಿಗೆ ಯಾವುದೇ ಕಾನೂನಿನ ಹಿನ್ನೆಲೆ ಇಲ್ಲ. ಅವರಿಗೆ ಈ ಥರ ವಿಚಾರ ಇಟ್ಟುಕೊಂಡು ಜನರಲ್ಲಿ ಗೊಂದಲ ಮೂಡಿಸಬೇಕು.‌ ಅವರ ರಾಜಕಾರಣ ಇದರಲ್ಲೇ ಇರೋದು, ಧಾರ್ಮಿಕ ರಾಜಕಾರಣ ಬಿಜೆಪಿ ಮಾಡುತ್ತೆ. ನಾನು ಈ ಬಗ್ಗೆ ಅಧಿಕಾರಿಗಳನ್ನು ಕರೆದು ಮಾತನಾಡ್ತೇನೆ ಎಂದಿದ್ದಾರೆ.

Latest Videos
Follow Us:
Download App:
  • android
  • ios