ಮಂಗಳೂರು[ಡಿ.02]: ಉಪ್ಪಿನಂಗಡಿ ಸಮೀಪದ ಮಂಗಳೂರು- ಬೆಂಗಳೂರು ಹೆದ್ದಾರಿಯ ಬೆದ್ರೋಡಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ, ಅನಿಲ ಸೋರಿಕೆಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿಯನ್ನು ಬಂದ್ ಮಾಡಲಾಗಿದ್ದು, ಅಗ್ನಿಶಾಮಕ ದಳ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.

ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ಈ ಟ್ಯಾಂಕರ್ ಬೆದ್ರೋಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅನಿಲ ಸೊರಿಕೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೆದ್ರೋಡಿ ಆಸುಪಾಸಿನ 2 ಕಿ. ಮೀಟರ್ ಪ್ರದೆಶದಲ್ಲಿ ಯಾರೂ ಬೆಂಕಿ ಹಚ್ಚದಂತೆ ಸೂಚನೆ ನೀಡಲಾಗಿದೆ.

ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದ್ದು, ಅನಿಲ ಸೋರಿಕೆ ತಡೆಯಲು ಪ್ರಯತ್ನ ಮುಂದುವರೆದಿದೆ. 

2013ರಲ್ಲಿ ಉಪ್ಪಿನಂಗಡಿಯ ಪೆರ್ನೆ ಸಮೀಪ ಗ್ಯಾಸ್ ಟ್ಯಾಂಕರ್ ಅಪಘಾತದಿಂದಾಗಿ ಬೆಂಕಿ ಹಬ್ಬಿ ಸಾವು ನೋವು ಸಂಭವಿಸಿದ್ದು ಉಲ್ಲೇಖನೀಯ.