Asianet Suvarna News Asianet Suvarna News

ಮಂಡ್ಯ ದುರಂತ: ತಿಂಗಳ ಹಿಂದೆ ಬಸ್ ಮಾರಿ ಮೃತಪಟ್ಟಿದ್ದ ಮಾಲೀಕ!

ಮಂಗಳೂರಿನ ಸಾರಿಗೆ ಉದ್ಯಮಿ ಅಡ್ಯಾರಿನ ಮಾಧವ ನಾಯಕ್‌ ಎಂಬುವರು 15 ವರ್ಷಗಳ ಹಿಂದೆ ಈ ಬಸ್‌ ಅನ್ನು ಖರೀದಿಸಿದ್ದರು. ಮಂಗಳೂರು-ಉಡುಪಿ ಮಧ್ಯೆ ಸಂಚರಿಸುತ್ತಿದ್ದ ಈ ಬಸ್‌ ಅನ್ನು ಕೆಲ ವರ್ಷ ಬಳಿಕ ಮಾರಾಟ ಮಾಡಿದ್ದರು. ಪ್ರಸಕ್ತ ಈ ನತದೃಷ್ಟಬಸ್‌ 9ನೇ ಮಾಲೀಕರ ಕೈಯಲ್ಲಿ ಇದೆ. 8ನೇ ಮಾಲೀಕರಾದ ಮಂಗಳೂರಿನ ಶಾಂಭವಿ ರಾಘವ ಎಂಬುವರು ಈ ಬಸ್‌ನ್ನು ಮಂಡ್ಯದ ಶ್ರೀನಿವಾಸ ಎಂಬುವರಿಗೆ ಮಾರಾಟ ಮಾಡಿದ್ದರು. ಈ ಬಸ್‌ ಅನ್ನು ಮಂಡ್ಯದ ಶ್ರೀನಿವಾಸ ಎಂಬುವರು ಖರೀದಿಸಿದ್ದರು.

Mandya Tragedy The owner of the bus died 10 days ago
Author
Mandya, First Published Nov 25, 2018, 11:40 AM IST

ಮಂಡ್ಯ[ನ. 25]: ಮಂಡ್ಯದಲ್ಲಿ ನಾಲೆಗೆ ಬಿದ್ದು 30 ಮಂದಿ ಸಾವಿಗೆ ಕಾರಣವಾದ ಖಾಸಗಿ ಬಸ್‌ ಮಂಗಳೂರು ಮೂಲದ್ದು. ಆದರೆ, ಅವಧಿ ಮೀರಿದ ಬಸ್ಸನ್ನು ಸಂಚಾರಕ್ಕೆ ಬಳಸಲಾಗುತ್ತಿತ್ತು ಎನ್ನುವ ಆರೋಪ ಈಗ ಕೇಳಿಬಂದಿದೆ.

ಮಂಗಳೂರಿನ ಸಾರಿಗೆ ಉದ್ಯಮಿ ಅಡ್ಯಾರಿನ ಮಾಧವ ನಾಯಕ್‌ ಎಂಬುವರು 15 ವರ್ಷಗಳ ಹಿಂದೆ ಈ ಬಸ್‌ ಅನ್ನು ಖರೀದಿಸಿದ್ದರು. ಮಂಗಳೂರು-ಉಡುಪಿ ಮಧ್ಯೆ ಸಂಚರಿಸುತ್ತಿದ್ದ ಈ ಬಸ್‌ ಅನ್ನು ಕೆಲ ವರ್ಷ ಬಳಿಕ ಮಾರಾಟ ಮಾಡಿದ್ದರು. ಪ್ರಸಕ್ತ ಈ ನತದೃಷ್ಟಬಸ್‌ 9ನೇ ಮಾಲೀಕರ ಕೈಯಲ್ಲಿ ಇದೆ. 8ನೇ ಮಾಲೀಕರಾದ ಮಂಗಳೂರಿನ ಶಾಂಭವಿ ರಾಘವ ಎಂಬುವರು ಈ ಬಸ್‌ನ್ನು ಮಂಡ್ಯದ ಶ್ರೀನಿವಾಸ ಎಂಬುವರಿಗೆ ಮಾರಾಟ ಮಾಡಿದ್ದರು. ಈ ಬಸ್‌ ಅನ್ನು ಮಂಡ್ಯದ ಶ್ರೀನಿವಾಸ ಎಂಬುವರು ಖರೀದಿಸಿದ್ದರು.

ಇದನ್ನೂ ಓದಿ: ರಾಜ್ಯ ಕಂಡ ಮಹಾ ಜಲದುರಂತಗಳಿವು!

ಸಾಮಾನ್ಯವಾಗಿ ಒಂದು ಖಾಸಗಿ ಬಸ್‌ನ ಆಯಸ್ಸು ಸಾರಿಗೆ ಇಲಾಖೆ ನಿಯಮಗಳ ಪ್ರಕಾರ ಗರಿಷ್ಠ ಎಂದರೆ 15 ವರ್ಷ. ಆದರೆ, ಈ ಬಸ್‌ನ ಆಯುಸ್ಸು ಮಂಡ್ಯ ಸಾರಿಗೆ ಇಲಾಖೆಯ ದಾಖಲೆಗಳು ತೋರಿಸುವಂತೆ ಹದಿನೇಳೂವರೆ ವರ್ಷ. ವಿಚಿತ್ರವೆಂದರೆ ಈ ಬಸ್‌ಗೆ 2019ರ ವರೆಗೆ ಫಿಟ್ನೆಸ್‌ ಸರ್ಟಿಫಿಕೇಟ್‌ ನೀಡಲಾಗಿದೆ. ಜತೆಗೆ, ಇಶ್ಶುರೆನ್ಸ್‌ ಮತ್ತು ಟ್ಯಾಕ್ಸ್‌ ಕೂಡ ಅದೇ ದಿನಾಂಕದವರೆಗೆ ಮುಂದವರೆದಿದೆ. ಆದರೂ ಬಸ್‌ ಸಂಚಾರಕ್ಕೆ ಯೋಗ್ಯವಾಗಿರಲಿಲ್ಲ. ಸ್ಟೇರಿಂಗ್‌ ತುಂಡಾಗಿ ಬಸ್‌ ನಾಲೆಗೆ ಉರುಳಿರುವುದೇ ಇದಕ್ಕೆ ಕಾರಣ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಆರ್‌ಟಿಒ ಅಧಿಕಾರಿಗಳು. ಅಚ್ಚರಿಯೆಂದರೆ ಈ ಬಸ್‌ ಸಂಚಾರಕ್ಕೆ ಅನುಮತಿ ನೀಡಲು ಮಂಗಳೂರಿನ ಸಾರಿಗೆ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದರು. ಗುಜರಿಗೆ ಹೋಗಬೇಕಿದ್ದ ಈ ಬಸ್‌ ಅನ್ನು ಮಂಡ್ಯದ ವ್ಯಕ್ತಿ ಖರೀದಿಸಿ, ರಸ್ತೆಗಿಳಿಸಿದ್ದರು.

ತಿಂಗಳ ಹಿಂದೆ ಬಸ್ ಮಾರಿ ಮೃತಪಟ್ಟಿದ್ದ ಮಾಲೀಕ!

ತಿಂಗಳ ಹಿಂದೆ ರಾಜ್‌ಕುಮಾರ್ ಎಂಬ ಹೆಸರಿನ ಖಾಸಗಿ ಬಸ್‌ನ್ನು ಶ್ರಿನಿವಾಸ್ ಎಂಬುವವರಿಗೆ ಮಾರಾಟ ಮಾಡಿದ್ದ ತಾಲೂಕಿನ ಮಲ್ಲನಾಯಕನ ಕಟ್ಟೆ ಗ್ರಾಮದ ಶಂಕರ್ ಹೃದಯಾಘಾತದಿಂದ 10 ದಿನಗಳ ಹಿಂದೆಯಷ್ಟೇ ಮರತಪಟ್ಟಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೇ ಈ ಬಸ್‌ನ್ನು ಶಂಕರ್ ಅವರು ಶ್ರೀನಿವಸ್‌ಗೆ ಮಾರಾಟ ಮಾಡಿದ್ದರು.

Follow Us:
Download App:
  • android
  • ios