ಬೆಂಗಳೂರು (ಸೆ.08): ಡ್ರಗ್ಸ್  ವಿಚಾರದಲ್ಲಿ ಕನ್ನಡ ಚಿತ್ರರಂಗವನ್ನು ಟಾರ್ಗೆಟ್ ಮಾಡಬೇಡಿ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರಿಶ್ ಹೇಳಿದ್ದಾರೆ. 

ಚಿತ್ರರಂಗದಲ್ಲಿ ಡ್ರಗ್ಸ್ ಇಲ್ಲವೇ ಇಲ್ಲ ಎಂದು ಹೇಳಿಲ್ಲ ಆದರೆ ನಮ್ಮ  ಅನುಭವದಲ್ಲಿ ಇಲ್ಲ ಎಂದು ಬೆಂಗಳೂರಿನಲ್ಲಿ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದ್ದಾರೆ. 

ಮಾಹಿತಿ ಇರದ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಬಾರದು. ಆರೋಪ ಸಾಬೀತಾಗುವ ಮುನ್ನವೇ ಜಡ್ಜ್‌ಮೆಂಟ್ ಕೊಡಬಾರದು. ಡ್ರಗ್ಸ್ ಎನ್ನುವುದು ಚಲನಚಿತ್ರರಂಗ ಅಷ್ಟೇ ಅಲ್ಲ, ಎಲ್ಲ ಕಡೆಯಲ್ಲೂ ಇದೆ. ಆದರೆ ಯಾವ ಕಡೆ ಎಷ್ಟು ಪರ್ಸೆಮಟ್ ಇದೆ ಎನ್ನುವುದನ್ನು ನೋಡಬೇಕು ಎಮದು ಸುಮಲತಾ ಹೇಳಿದರು. 

ರಾಗಿಣಿ ಸೇವಿಸುತ್ತಿದ್ದ 1 ಡ್ರಗ್ಸ್‌ ಮಾತ್ರೆಗೆ 3000..! ಹೊರಬಿತ್ತು ಮತ್ತಷ್ಟು ಸೀಕ್ರೇಟ್ಸ್

ಕನ್ನಡ ಚಿತ್ರರಂಗ ಮಾತ್ರವಲ್ಲ. ಎಲ್ಲಾ ಚಿತ್ರರಂಗದಲ್ಲಿಯೂ ಕೂಡ ಜನರೇಶನ್ ಚೇಂಜ್ ಆಗಿದೆ. ಹಿರಿಯರ ಜನರೇಶನ್‌ಗೆ  ಕಪಡೊತ್ತಿದ್ದ  ಗೌರವ ಈಗ ಕಡಿಮೆಯಾಗಿದೆ ಎಂದರು. 

ಇನ್ನು ಡ್ರಗ್ ಎನ್ನುವ ವ್ಯಸನ ಅಭ್ಯಾಸವಾದವರಿಗೆ ಬಿಡುವುದು ಕಷ್ಟ. ಡ್ರಗ್ಸ್ ಪೆಡ್ಲರ್‌ಗಳ ಜೊತೆ ದಂಧೆ ನಡೆಯುತ್ತಿದೆ. ನಾಯಕರಿಯರ ಹೆಸರು ಮಾತ್ರವೇ ಕೇಳಿಬರುತ್ತಿದೆ.  ವಿನಾಕಾರಣ ಮಾಹಿತಿ ಇಲ್ಲದೇ ನಾನು ಮಾತನಾಡುವುದಿಲ್ಲ. ಡ್ರಗ್ಸ್ ದಂಧೆಯಲ್ಲಿ ಇತರೆ ನಟರು ಇದ್ದಾರಾ ಎನ್ನುವುದನ್ನು ತನಿಖಾಧಿಕಾರಿಗಳೇ ಮಾಹಿತಿ ಕೊಡಬೇಕು ಎಂದು ಸುಮಲತಾ ಹೇಳಿದರು. 

"