Asianet Suvarna News Asianet Suvarna News

ಮಂಡ್ಯದಲ್ಲಿ ಜಾತಿ ಧರ್ಮದ ಬೆಂಕಿ ಹಚ್ಚಲು ಅಶೋಕ್, ಕುಮಾರಸ್ವಾಮಿ ಬರ್ತಿದ್ದಾರಾ? ಶಾಸಕ ರವಿ ಗಣಿಗ

ಮಂಡ್ಯಕ್ಕೆ ಆರ್.ಅಶೋಕ್, ಕುಮಾರಸ್ವಾಮಿ ಯಾಕೆ ಬರೋದು? ಮಂಡ್ಯದಲ್ಲಿ ಶಾಂತಿ ಕದಡಲು ಬರ್ತಿರಾ, ಬೆಂಕಿ ಹಚ್ಚೋಕೆ ಬರ್ತಿರಾ.? ಎಂದು ಶಾಸಕ ರವಿಕುಮಾರ್ ಗಣಿಗ ಪ್ರಶ್ನೆ ಮಾಡಿದ್ದಾರೆ.

Mandya MLA Ravikumar Ganiga scolding to HD Kumaraswamy and R Ashok about Keragodu flag sat
Author
First Published Jan 28, 2024, 7:09 PM IST

ಮಂಡ್ಯ  (ಜ.28): ಮಂಡ್ಯಕ್ಕೆ ಯಾಕೆ ಆರ್.ಅಶೋಕ್, ಕುಮಾರಸ್ವಾಮಿ ಬರೋದು? ಮಂಡ್ಯದಲ್ಲಿ ಶಾಂತಿ ಕದಡಲು ಬರ್ತಿರಾ, ಬೆಂಕಿ ಹಚ್ಚೋಕೆ ಬರ್ತಿರಾ.? ಜಾತಿ ಜಾತಿ ಸಂಘರ್ಷ ತಂದು ವೋಟ್ ಪಡೆಯೋದಕ್ಕೆ ಬರ್ತಿರಾ ನೀವು? ಮಂಡ್ಯದಲ್ಲಿ ಅಶಾಂತಿ ಉಂಟಾದರೆ ಅಥವಾ ಜನತೆಗೆ ಏನಾದ್ರು ತೊಂದ್ರೆಯಾದ್ರೆ ಬಿಜೆಪಿ-ಜೆಡಿಎಸ್ ನಾಯಕರು ಕಾರಣವೆಂದು ಶಾಸಕ ರವಿಕುಮಾರ ಗಣಿಗ ಹೇಳಿದ್ದಾರೆ.

ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ವಿಚಾರವಾಗಿ ಮಂಡ್ಯದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಆರ್‌ಎಸ್‌ಎಸ್‌ಗೆ 1 ಲಕ್ಷ ರೂ ದೇಣಿಗೆಯನ್ನ ಕೊಟ್ಟಿದ್ದೇನೆ. ಇವತ್ತು ಹೋರಾಟ ಮಾಡುತ್ತಿರುವವರು ಒಂದು ರೂಪಾಯಿ ಕೊಟ್ಟಿಲ್ಲ. ಲೋಕಸಭಾ ಚುನಾವಣೆಗೂ ಮುನ್ನ ಶಾಂತಿ ಕದಡಲು ಈ ರೀತಿಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಕೆರಗೋಡಿನ ರಾಮ ಮಂದಿರದ ಬಳಿ ಬಾವುಟ ಹಾಕಿ ನಾವು ಸಪೋರ್ಟ್ ಮಾಡ್ತೇವೆ. ಭಾರತದ ವಿರೋಧಿಗಳಾದ ಜೆಡಿಎಸ್-ಬಿಜೆಪಿ  ಅಶಾಂತಿ ಸೃಷ್ಟಿಸುತ್ತಿದ್ದಾರೆ. ಮಂಡ್ಯ ಹೊತ್ತಿ ಉರಿಯಬೇಕು ಎಂದು ಜಾತಿ ಗಲಭೆ ಹಚ್ಚಲು ಮಾಡ್ತಿದ್ದಾರೆ. ಮಂಡ್ಯಕ್ಕೆ ಯಾಕೆ ಆರ್.ಅಶೋಕ್, ಕುಮಾರಸ್ವಾಮಿ ಬರೋದು? ಮಂಡ್ಯದಲ್ಲಿ ಶಾಂತಿ ಕದಡಲು ಬರ್ತಿರಾ, ಬೆಂಕಿ ಹಚ್ಚೋಕೆ ಬರ್ತಿರಾ.? ಜಾತಿ ಜಾತಿ ಸಂಘರ್ಷ ತಂದು ವೋಟ್ ಪಡೆಯೋದಕ್ಕೆ ಬರ್ತಿರಾ ನೀವು? ಎಂದು ಕಿಡಿಕಾರಿದ್ದಾರೆ.

ಹಿಂದೂಗಳನ್ನು ಹತ್ತಿಕ್ಕಲು ರಾಷ್ಟ್ರ ಧ್ವಜಾರೋಹಣದ ನಿಯಮ ಉಲ್ಲಂಘಿಸಿದ ಜಿಲ್ಲಾಡಳಿತ: ಆರ್. ಅಶೋಕ್ ಕಿಡಿ

ನಿಮಗೆ ಮಾನ ಮರ್ಯಾದೆ ಇದ್ರೆ ಭಾರತದ ಬಾವುಟ ಹಾರಿಸಲು ಮುಂದಾಗಿ. ಇಲ್ಲ ನಾವು ಭಾರತದ ವಿರೋದಿಗಳು ಅಂತ ಒಪ್ಕೋಳಿ. ರಾಜಕೀಯ ಮಾಡಲು ಅಮಾಯಕ ಯುವಕರನ್ನು ಎತ್ತಿ ಕಟ್ಟುತ್ತಿದ್ದಿರಾ? ಮಂಡ್ಯದಲ್ಲಿ ಏನಾದ್ರು ತೊಂದರೆ ಆದ್ರೆ ಬಿಜೆಪಿ-ಜೆಡಿಎಸ್ ಕಾರಣವಾಗುತ್ತದೆ. ನಾವು ನಿಜವಾದ ದೇಶ ಪ್ರೇಮಿಗಳು. ಇವರು ದೇಶಪ್ರೇಮಿಗಳಾಗಿದ್ದರೆ ರಾಷ್ಟ್ರ ಧ್ವಜ ಹಾರಿಸಲಿ. ಸಂವಿಧಾನ ಕಾನೂನಿನಗೆ ಎಲ್ಲರು ತಲೆಭಾಗಿ. ಟೈಮ್ ಪಾಸ್ ಮಾಡಲು ಕೆರಗೋಡು ಗ್ರಾಮದ ಯುವಕರನ್ನ ಎತ್ತಿಕಟ್ಟುತ್ತಿದ್ದಾಋಎ. ಮಂಡ್ಯ, ನಾಗಮಂಗಲ, ಬೆಂಗಳೂರಿನಿಂದ ಹುಡುಗರು ಕೆರೆಸುತ್ತಿದ್ದಾರೆ. ಮಂಡ್ಯದಲ್ಲಿ ಅಶಾಂತಿಗೆ ಕಾರಣರಾದ್ರೆ, ಏನಾದ್ರು ತೊಂದ್ರೆಯಾದ್ರೆ ಬಿಜೆಪಿ-ಜೆಡಿಎಸ್ ನಾಯಕರು ಕಾರಣ. ನಿಮ್ಮ ಹುಚ್ಚು ರಾಜಕೀಯ ಅಮಲು ಅಧಿಕಾರಕ್ಕಾಗಿ ಮಂಡ್ಯದ ಯುವಕರು, ರೈತರನ್ನ ಬಲಿ ಕೊಡಬೇಡಿ ಎಂದು ಹೇಳಿದ್ದಾರೆ.

ಬಿಜೆಪಿ-ಜೆಡಿಎಸ್ ಮಂಡ್ಯದಲ್ಲಿ ಅಶಾಂತಿ ತರುತ್ತಿದ್ದಾರೆ. ಕೆರಗೋಡು ಗ್ರಾಮದಲ್ಲಿ ಜೆಡಿಎಸ್-ಬಿಜೆಪಿ ನಾಟಕ ಶುರುಮಾಡಿದ್ದಾರೆ. ಕೆರಗೋಡು ಗ್ರಾಮಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಬಸ್ ನಿಲ್ದಾಣ ಕಟ್ಟಲು ಪರಿಶೀಲನೆ ಮಾಡಿದ್ದೇನೆ. ಗರುಡಗಂಭ ನೆಡಲು ಅನುಮತಿ ಕೋರಿದ್ದರು. ಎರಡನೇ ದಿನಕ್ಕೆ ಬಸ್ ನಿಲ್ದಾಣ ಕಟ್ಟಲು ಅಧಿಕಾರಿಗಳನ್ನ ಪರಿಶೀಲನೆಗೆ ಕಳುಹಿಸಿದ್ದೆನು. ಒಟ್ಟು 6 ಕೋಟಿ ರೂ. ಅನುದಾನಕ್ಕೆ ಪತ್ರ ಬರೆದಿದ್ದೆನು., ಲೋಕೋಪಯೋಗಿ ಇಲಾಖೆಗೆ 6 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಬಗ್ಗ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೂ ಪತ್ರ ಬರೆದಿದ್ದೇನೆ ಎಂದರು.

ರಾಷ್ಟ್ರಧ್ವಜಕ್ಕೆ ಅನುಮತಿ ಪಡೆದು, ಹನುಮಧ್ವಜ ಹಾರಿಸಿದ ಕೆರಗೋಡು ಟ್ರಸ್ಟ್: ಕೆಂಡಕಾರಿದ ಸಚಿವ ಚಲುವರಾಯಸ್ವಾಮಿ

ಕೆರಗೋಡಿನ ಗೌರಿಶಂಕರ ಸೇವಾ ಟ್ರಸ್ಟ್‌ನಿಂದ ಗ್ರಾಮ ಪಂಚಾಯಿತಿಗೆ ಧ್ವಜ ಸ್ಥಂಭ ನಿರ್ಮಾಣ ಮಾಡಲು ಲೆಟರ್ ಕೊಟ್ಟಿದ್ದು, ಇದೇ ಜ. 19 ರಂದು ಅನುಮತಿ ಕೊಟ್ಟಿದ್ದಾರೆ. ರಾಷ್ಟ್ರ, ಕನ್ನಡ ಬಾವುಟಕ್ಕೆ ಮಾತ್ರ ಅನುಮತಿ ಕೊಟ್ಟಿದೆ. ಧಾರ್ಮಿಕ ಬಾವುಟ ಹಾರಿಸದಂತೆ ಸೂಚನೆ ಕೂಡ ಕೊಡಲಾಗಿದೆ. ಮುಚ್ಚಳಿಕೆ ಪತ್ರ ಕೂಡ ಬರೆದುಕೊಟ್ಟಿದ್ದಾರೆ. ಆದರೆ, ಜ.20 ರಂದು ಕುಮಾರಸ್ವಾಮಿ ಮಂಡ್ಯಕ್ಕೆ ಬರಬೇಕಿತ್ತು ಕಾರಣದಿಂದ ಬರಲಿಲ್ಲ. ಕುಮಾರಸ್ವಾಮಿ ಬಂದ್ರೆ ಕರೆಯಲು ಬಂದಿದ್ದಿರಾ ಅಂತ ಹುಡುಗರಿಗೆ ಹೇಳಿದ್ದೆನು. ಆದರೆ, ಅವರು ಯುವಕರಿಗೆ ಕುಮ್ಮಕ್ಕು ಕೊಟ್ಟಿದ್ದಾರೆ ಎಂದು ಹೇಳಿದರು.

ಜ.23 ರಂದು ಜಿಲ್ಲಾಧಿಕಾರಿಗೆ ದಲಿತ ಮುಖಂಡರು ಅಂಬೇಡ್ಕರ್ ಬಾವುಟ ಹಾಕಲು ಮನವಿ ಕೊಟ್ಟಿದ್ದರು. ಸಂಗೊಳ್ಳಿ ರಾಯಣ್ಣ ಬಾವುಟ, ರೈತ ಬಾವುಟ ಹಾಕಲು ಮನವಿ ಬಂದಿತ್ತು. ಕೆರಗೋಡು ಗ್ರಾಮದಲ್ಲಿ ಸರ್ಕಾರಿ ಜಾಗವಿದೆ. ಸರ್ಕಾರಿ ಜಾಗದಲ್ಲಿ ಧರ್ಮದ ಬಾವುಟ ನೆಡಲು ಅವಕಾಶ ಇಲ್ಲ. ಬಿಜೆಪಿಯವರು ಕಿತಾಪತಿ ಮಾಡ್ತಿದ್ದಾರೆ. ನಮ್ಮ ವಿರುದ್ದ ಸೋತು ನಿರುದ್ಯೋಗಿಗಳಾಗಿರುವ ಅವರು ಯುವಕರಿಗೆ ಕುಮ್ಮಕ್ಕು ನೀಡಿ ಎತ್ತಿ ಕಟ್ಟಿದ್ದಾರೆ. ಇವರು ದೇಶ ಪ್ರೇಮಿಗಳು, ದೇಶ ಪ್ರೇಮಿಗಳಾದ್ರೆ ರಾಷ್ಟ್ರ ಧ್ವಜ ಹಾರಿಸಲು ಯಾಕೆ ವಿರೋಧ ಮಾಡ್ತಿದ್ದಾರೆ ಎಂದು ಕಿಡಿಕಾರಿದರು. 

Follow Us:
Download App:
  • android
  • ios