ಮಂಡ್ಯ: ಗಣಿ ಸ್ಫೋಟದಿಂದ ಅಣೆಕಟ್ಟೆಗೆ ಉಂಟಾಗಬಹುದಾದ ಅಪಾಯಗಳನ್ನು ಅರಿಯಲು ಜ.28 ರಿಂದ ಐದು ದಿನಗಳ ಕಾಲ ಕೆಆರ್‌ಎಸ್ ಸುತ್ತಮುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಪ್ರಾಯೋಗಿಕ ಸ್ಫೋಟ ನಡೆಸಲು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ. 

ಜಿಲ್ಲಾಧಿಕಾರಿಗಳ ಆದೇಶದ ಅನ್ವಯ  ಪುಣೆಯ ಸಿಡಬ್ಲ್ಯೂಪಿಆರ್‌ಎಸ್ ವಿಜ್ಞಾನಿ ಎ.ಕೆ.ಘೋಷ್ ನೇತೃತ್ವದ ಮೂವರು ತಜ್ಞರು ಹಾಗೂ ಇಬ್ಬರು ಸಿಬ್ಬಂದಿ ತಂಡ ಭಾನುವಾರ ಕೆಆರ್‌ಎಸ್‌ಗೆ ಆಗಮಿಸಲಿದೆ. 

ಸೋಮವಾರದಿಂದ ಗಣಿ ಸ್ಫೋಟದ ಕಂಪನ ಮಾಪನ ನಡೆಯಲಿದೆ ಎಂದು ಕೆಆರ್‌ಎಸ್ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.